Amazon Great Republic Day Sale : ಅಮೆಜಾನ್ ಗ್ರೇಟ್‌ ರಿಪಬ್ಲಿಕ್ ಡೇ ಸೇಲ್: ಇಲ್ಲಿದೆ ವಿವರ

ಹಬ್ಬ, ಶುಭದಿನ, ವಿಶೇಷ ದಿನಗಳಂದು ಅಮೆಜಾನ್‌, ಫ್ಲಿಫ್‌ಕಾರ್ಟ್‌ ಮೊದಲಾದವುಗಳಲ್ಲಿ ವಿಶೇಷ ಆಫರ್‌ಗಳು ಇರುತ್ತದೆ. ವಿಶೇಷ ಸೇಲಿಂಗ್‌ಗಳನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಲಾಗುತ್ತದೆ. ಹಾಗೆಯೇ ಈಗ ಅಮೆಜಾನ್‌ನಲ್ಲಿ ಗಣರಾಜ್ಯೋತ್ಸವದ ವಿಶೇಷ ಸೇಲಿಂಗ್ ಆಫರ್‌ ಆರಂಭವಾಗಿದೆ.

ಅಮೆಜಾನ್ ಇಂಡಿಯಾ "ಗ್ರೇಟ್ ರಿಪಬ್ಲಿಕ್ ಡೇ ಸೇಲ್" ಅನ್ನು ಆರಂಭ ಮಾಡಿದೆ. ಈ ಆಫರ್ 2023ರ ಜನವರಿ 19ರಿಂದ ಜನವರಿ 22ರವರೆಗೆ ಇರಲಿದೆ. ಅಮೆಜಾನ್ ಪ್ರೈಮ್ ಮೆಂಬರ್‌ ಅಂದರೆ ಪ್ರೈಮ್ ಸದಸ್ಯರು 24 ಗಂಟೆ ಮುನ್ನವೇ ಈ ಆಫರ್ ಅನ್ನು ಪಡೆಯಬಹುದು. ಅಂದರೆ ಜನವರಿ 18, 2023ರಿಂದಲೇ ಈ ಆಫರ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಈ ಬಗ್ಗೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸೇಲ್ ಸಂದರ್ಭದಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವಹಿವಾಟಿಗೆ ಸುಮಾರು ಶೇಕಡ 10ರಷ್ಟು ತ್ವರಿತ ವಿನಾಯಿತಿ ಲಭ್ಯವಾಗಲಿದೆ. ಈ ಆಫರ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

 ಅಮೆಜಾನ್ ಗ್ರೇಟ್‌ ರಿಪಬ್ಲಿಕ್ ಡೇ ಸೇಲ್: ಇಲ್ಲಿದೆ ವಿವರ

ಏನಿದು ಅಮೆಜಾನ್ ಗ್ರೇಟ್‌ ಇಂಡಿಯಾ ಸೇಲ್?

ಅಮೆಜಾನ್ ಗ್ರೇಟ್‌ ಇಂಡಿಯಾ ಸೇಲ್ ಅಮೆಜಾನ್ ಬ್ಯುಜಿನೆಸ್ ಪ್ಲಾಟ್‌ಫಾರ್ಮ್‌ನಲ್ಲಿ ಹೋಸ್ಟ್ ಮಾಡಲಾಗುತ್ತದೆ. ಈ ಅಮೆಜಾನ್ ಗ್ರೇಟ್‌ ಇಂಡಿಯಾ ಸೇಲ್ ಸಂದರ್ಭದಲ್ಲಿ ಎಲ್ಲ ವಸ್ತುಗಳ ಮೇಲೆ ಅಧಿಕ ರಿಯಾಯಿತಿಯನ್ನು ನೀಡಲಾಗುತ್ತದೆ. ಎಲ್ಲ ಅಮೆಜಾನ್ ಬ್ಯುಜಿನೆಸ್ ಗ್ರಾಹಕರು ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು. ಅಧಿಕ ರಿಯಾಯಿತಿ ಪಡೆಯಬಹುದು. ಹೊಸದಾಗಿ ಲಾಂಚ್ ಆದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು.

ಎಲೆಕ್ಟ್ರಾನಿಕ್ಸ್ & ಆಕ್ಸಸರೀಸ್ ಮೇಲೆ ಶೇಕಡ 50ರವರೆಗೆ ರಿಯಾಯಿತಿ, ಟಿವಿ ಹಾಗೂ ಅಪ್ಲಿಯನ್ಸ್ ಮೇಲೆ ಶೇಕಡ 50ರವರೆಗೆ ರಿಯಾಯಿತಿ, ಫರ್ನಿಚರ್ ಮೇಲೆ ಶೇಕಡ 70ರವರೆಗೆ ರಿಯಾಯಿತಿ, ಸ್ಮಾರ್ಟ್‌ಫೋನ್ಸ್ & ಆಕ್ಸಸರೀಸ್ ಮೇಲೆ ಶೇಕಡ 40ರವರೆಗೆ ರಿಯಾಯಿತಿ, ಕಿಚನ್ & ಡೈನಿಂಗ್ಸ್ ಮೇಲೆ ಶೇಕಡ 70ರವರೆಗೆ ರಿಯಾಯಿತಿ, ಇಂಡಸ್ಟ್ರೀಯಲ್ ಸಪ್ಲೈಸ್ ಮೇಲೆ ಶೇಕಡ 60ರವರೆಗೆ ರಿಯಾಯಿತಿ ಲಭ್ಯವಾಗಿದೆ.

ಒಮ್ಮೆಲೇ ಅಧಿಕ ವಸ್ತುಗಳನ್ನು ಖರೀದಿಸಿದರೆ ಉತ್ತಮ

ಈ ಆಫರ್ ವೇಳೆ ನೀವು ಒಂದೇ ಸಂದರ್ಭದಲ್ಲಿ ಅಧಿಕ ವಸ್ತುಗಳನ್ನು ಖರೀದಿ ಮಾಡಿದರೆ, ಅಧಿಕ ಉಳಿತಾಯ ಹಾಗೂ ಲಾಭ ಪಡೆಯಲು ಸಾಧ್ಯವಾಗುತ್ತದೆ. ನೀವು ಬರೀ ಎರಡು ಯುನಿಟ್‌ನಷ್ಟು ವಸ್ತುಗಳ ಖರೀದಿ ಮೂಲಕ ಶೇಕಡ 5ರಷ್ಟು ಆಫರ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಅಮೆಜಾನ್ ಬ್ಯುಜಿನೆಸ್ ಮೂಲಕ ಖರೀದಿ ಮಾಡಿದರೆ ಸುಮಾರು ಶೇಕಡ 28ರಷ್ಟು ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+