ಏರ್ ಟೆಲ್ ನಲ್ಲಿ 15 ಸಾವಿರ ಕೋಟಿ ರು. ಷೇರು ಖರೀದಿಸಲಿದೆಯಾ ಅಮೆಜಾನ್

ಭಾರತದ ಟೆಲಿಕಾಂ ಆಪರೇಟರ್ ಭಾರ್ತಿ ಏರ್ ಟೆಲ್ ನಿಂದ ಕನಿಷ್ಠ $ 2 ಬಿಲಿಯನ್ (15 ಸಾವಿರ ಕೋಟಿ ರುಪಾಯಿ) ಮೌಲ್ಯದ ಷೇರು ಖರೀದಿ ಮಾಡಲು ಅಮೆಜಾನ್.ಕಾಮ್ ಮಾತುಕತೆಯ ಆರಂಭ ಹಂತದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ವ್ಯವಹಾರ ಅಂತಿಮಗೊಂಡಲ್ಲಿ ಸದ್ಯಕ್ಕೆ ಭಾರ್ತಿ ಏರ್ ಟೆಲ್ ಷೇರಿನ ಮಾರುಕಟ್ಟೆ ಬೆಲೆಯ ಪ್ರಕಾರ, ಶೇಕಡಾ 5ರಷ್ಟು ಪಾಲನ್ನು ಖರೀದಿ ಮಾಡಲಿದೆ.

ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪೆನಿ ಭಾರ್ತಿ ಏರ್ ಟೆಲ್, ಇದಕ್ಕೆ 30 ಕೋಟಿ ಗ್ರಾಹಕರಿದ್ದಾರೆ. ಭಾರ್ತಿ ಏರ್ ಟೆಲ್ ಪ್ರತಿಸ್ಪರ್ಧಿ ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಜಾಗತಿಕ ಮಟ್ಟದ ಹಲವು ಕಂಪೆನಿಗಳು ಹೂಡಿಕೆ ಮಾಡುತ್ತಿರುವ ಸಂದರ್ಭದಲ್ಲಿ, ಏರ್ ಟೆಲ್ ಷೇರು ಖರೀದಿಗೆ ಅಮೆಜಾನ್ ಮುಂದಾಗಿರುವುದು ಆಸಕ್ತಿಕರವಾಗಿದೆ.

ಭಾರ್ತಿ ಮತ್ತು ಅಮೆಜಾನ್ ಮಧ್ಯದ ಮಾತುಕತೆ ಇನ್ನೂ ಆರಂಭದ ಹಂತದಲ್ಲಿದೆ. ಒಪ್ಪಂದದ ನಿಯಮಗಳು ಬದಲಾಗಬಹುದು ಅಥವಾ ಅಂತಿಮವಾಗದೇ ಕೂಡ ಇರಬಹುದು ಎಂದು ವಿವಿಧ ಮೂಲಗಳು ತಿಳಿಸಿವೆ. ಭವಿಷ್ಯದಲ್ಲಿ ನಾವ್ಉ ಮಾಡಬಹುದಾದ ಅಥವಾ ಮಾಡದಿರುವ ವಿಚಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.

ಏರ್ ಟೆಲ್ ನಲ್ಲಿ 15 ಸಾವಿರ ಕೋಟಿ ರು. ಷೇರು ಖರೀದಿಸಲಿದೆಯಾ ಅಮೆಜಾನ್

ವಿವಿಧ ಡಿಜಿಟಲ್ ಕಂಪೆನಿಗಳ ಜತೆ ಕೆಲಸ ಮಾಡುತ್ತೇವೆ. ಅವರ ಉತ್ಪನ್ನ, ಕಂಟೆಂಟ್ ಮತ್ತು ಸೇವೆಯನ್ನು ಗ್ರಾಹಕರಿಗೆ ತರುತ್ತೇವೆ. ಅದನ್ನು ಹೊರತುಪಡಿಸಿ ವರದಿ ಮಾಡುವುದಕ್ಕೆ ಏನೂ ಚಟುವಟಿಕೆ ಇಲ್ಲ ಎಂದು ಭಾರ್ತಿ ಏರ್ ಟೆಲ್ ಹೇಳಿದೆ. ಇ ಕಾಮರ್ಸ್ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ಭಾರತದಲ್ಲಿ 650 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+