ಇ ಕಾಮರ್ಸ್ ಕಂಪೆನಿಯಾದ ಅಮೆಜಾನ್ ಗೆ ತಾತ್ಕಾಲಿಕವಾಗಿ 20,000 ಸಿಬ್ಬಂದಿಯನ್ನು ಗ್ರಾಹಕ ಸೇವಾ ವಿಭಾಗಕ್ಕೆ ನೇಮಿಸಿಕೊಳ್ಳುವುದಾಗಿ ಭಾನುವಾರ ಹೇಳಿದೆ. ಭಾರತ ಮತ್ತು ಜಾಗತಿಕವಾಗಿ ಗ್ರಾಹಕರಿಗೆ ಆರಾಮದಾಯಕ ಆನ್ ಲೈನ್ ಶಾಪಿಂಗ್ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಈ ಹೆಜ್ಜೆ ಇಟ್ಟಿದೆ.
ಮುಂದಿನ ಆರು ತಿಂಗಳಲ್ಲಿ ಗ್ರಾಹಕರ ಬೇಡಿಕೆ ಅಂದಾಜು ಮಾಡಿ, ಈ ತಾತ್ಕಾಲಿಕ ಹುದ್ದೆಗಳನ್ನು ಸೇರ್ಪಡ ಮಾಡಿಕೊಳ್ಳಲಾಗಿದೆ. ಈ ಹುದ್ದೆಗಳು ಹೈದರಾಬಾದ್, ಪುಣೆ, ಕೊಯಮತ್ತೂರು, ನೋಯ್ಡಾ, ಕೋಲ್ಕತ್ತಾ, ಜೈಪುರ್, ಚಂಡೀಗಢ, ಮಂಗಳೂರು, ಇಂದೋರ್, ಭೋಪಾಲ್ ಮತ್ತು ಲಖನೌನಲ್ಲಿ ಇರಲಿವೆ.
ಇ ಮೇಲ್, ಚಾಟ್, ಸೋಷಿಯಲ್ ಮೀಡಿಯಾ ಮತ್ತು ಫೋನ್ ಮೂಲಕ ಗ್ರಾಹಕ ಸೇವೆಗಳನ್ನು ಒದಗಿಸಲಾಗುತ್ತದೆ. ಕನಿಷ್ಠ ವಿದ್ಯಾರ್ಹತೆ ಹನ್ನೆರಡನೇ ತರಗತಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಕನ್ನಡ ಸ್ಪಷ್ಟವಾಗಿ ಬರಬೇಕು. ಇನು ಅಭ್ಯರ್ಥಿಯ ಕಾರ್ಯ ನಿರ್ವಹಣೆ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳು ವರ್ಷದ ಕೊನೆಗೆ ಕಾಯಂ ಆಗುತ್ತವೆ.

ಕಳೆದ ತಿಂಗಳು ಅಮೆಜಾನ್ ಇಂಡಿಯಾ, ಐವತ್ತು ಸಾವಿರ ತಾತ್ಕಾಲಿಕ ಹುದ್ದೆಗಳನ್ನು ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಲಾಕ್ ಡನ್ ನಿರ್ಬಂಧಗಳ ತೆರವು ಆಗುತ್ತಿದ್ದಂತೆ ಹುದ್ದೆ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.


Click it and Unblock the Notifications