ಅಮೆಜಾನ್ ನಿಂದ ಹೊಸದಾಗಿ ಸಾಲ ನೀಡುವ ಯೋಜನೆ ಪರಿಚಯಿಸಲಾಗಿದೆ. ಅದನ್ನು ಅಮೆಜಾನ್ ಪೇ ಲೇಟರ್ ಇನ್ ಇಂಡಿಯಾ ಎಂದು ಕರೆಯಲಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ತಕ್ಷಣವೇ ಅಮೆಜಾನ್ ಇಂಡಿಯಾದಲ್ಲಿ ಲಿಸ್ಟ್ ಆಗಿರುವ ಯಾವುದೇ ಉತ್ಪನ್ನಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಇದರ ಜತೆಗೆ ತಿಂಗಳ ಕಂತಿನಲ್ಲಿ ಕೂಡ ಮರುಪಾವತಿಸಬಹುದು. ಅದಕ್ಕೆ ಹನ್ನೆರಡು ತಿಂಗಳ ತನಕ ಕಾಲಾವಕಾಶ ನೀಡಲಾಗುತ್ತದೆ.
ಗ್ರಾಹಕರು ಅಮೆಜಾನ್ ಇಂಡಿಯಾದಲ್ಲಿ ಯಾವ ಉತ್ಪನ್ನಗಳು ಬೇಕು ಅನ್ನೋದನ್ನು ಖರೀದಿಸಿ, ಮುಂದಿನ ತಿಂಗಳಲ್ಲಿ ಪಾವತಿ ಮಾಡಬಹುದು.
ಇನ್ನು ಅದರ ಬದಲಿಗೆ ಹನ್ನೆರಡು ತಿಂಗಳ ತನಕ ಇಎಂಐ ಆಗಿ ಕೂಡ ಬದಲಿಸಿಕೊಳ್ಳಬಹುದು. ಅದಕ್ಕೆ ತಿಂಗಳಿಗೆ 1.5 ಪರ್ಸೆಂಟ್ ನಿಂದ 2 ಪರ್ಸೆಂಟ್ ಬಡ್ಡಿ ಬೀಳುತ್ತದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಅಮೆಜಾನ್ ನಿಂದ ನೋ ಕಾಸ್ಟ್ ಇಎಂಐ ಆಫರ್ ಇದೆ. ಇದರ ಮೂಲಕ ಬಡ್ಡಿ ದರ ಶೂನ್ಯಕ್ಕೆ ಇಳಿಸಲಾಗುತ್ತದೆ.

ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರು ಬೇರೆ ಖರ್ಚುಗಳನ್ನು ನಿಭಾಯಿಸಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ನಂತರ ಹಣ ಪಾವತಿ ಮಾಡುವ ಅವಕಾಶ ನೀಡಲಾಗುತ್ತಿದೆ. ಹಾಗಿದ್ದರೆ ಎಷ್ಟು ಕನಿಷ್ಠ ಹಾಗೂ ಗರಿಷ್ಠ ಸಾಲ ಎಷ್ಟು ಸಿಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆ, ಕನಿಷ್ಠ 1 ರುಪಾಯಿಯಿಂದ ಗರಿಷ್ಠ 60 ಸಾವಿರ ರುಪಾಯಿ ತನಕ ಸಾಲ ಸಿಗುತ್ತದೆ ಎಂದು ತಿಳಿಸಲಾಗಿದೆ. ಹಾಗಂತ ಗರಿಷ್ಠ ಮಿತಿಯನ್ನು ಹೇರಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರತು ಅಮೆಜಾನ್ ಅಲ್ಲ.
ಬಳಕೆದಾರರು ಮೊದಲಿಗೆ ಅಮೆಜಾನ್ ಪೇ ಲೇಟರ್ ಸೇವೆಗೆ ನೋಂದಣಿ ಮಾಡಿಕೊಳ್ಳಬೇಕು. ಅಮೆಜಾನ್ ಇಂಡಿಯಾ ಮೊಬೈಲ್ ಅಪ್ಲಿಕೇಷನ್ ನಲ್ಲಿ ಈ ನೋಂದಣಿ ಮಾಡಿಕೊಳ್ಳಬಹುದು. ಸದ್ಯಕ್ಕೆ ಡೆಸ್ಕ್ ಟಾಪ್ ನಲ್ಲಿ ನೋಂದಣಿ ಸಾಧ್ಯವಿಲ್ಲ. ಗ್ರಾಹಕರು ಕೆವೈಸಿ (Know Your Customer) ಅರ್ಜಿಯನ್ನು ಭರ್ತಿ ಮಾಡಬೇಕು.
ಇದಾದ ಮೇಲೆ ನೋಂದಣಿ ಆಗಿದೆಯೋ ಇಲ್ಲವೋ ಎಂಬುದನ್ನು ಅಮೆಜಾನ್ ಪೇ ಲೇಟರ್ ಡ್ಯಾಶ್ ಬೋರ್ಡ್ ನಲ್ಲಿ ಪರಿಶೀಲಿಸಬಹುದು. ಅಮೆಜಾನ್ ನಲ್ಲಿ ಏನು ವ್ಯವಹಾರ ಮಾಡಿದ್ದೀರಿ ಅನ್ನೋದನ್ನು ಸಹ ಇಲ್ಲಿ ಪರಿಶೀಲಿಸಬಹುದು.


Click it and Unblock the Notifications