ಕಳೆದ ವರ್ಷ ಜಾಗತಿಕವಾಗಿ ಆರಂಭವಾದ ಉದ್ಯೋಗ ಕಡಿತ ಈಗಲೂ ಮುಂದುವರಿದಿದೆ. ಹಲವಾರು ಸಂಸ್ಥೆಗಳು ವೆಚ್ಚ ಕಡಿತ ಮಾಡುವ ನೆಪದಲ್ಲಿ ಉದ್ಯೋಗ ಕಡಿತ ಮಾಡುತ್ತಾ ಇದೆ. ಇನ್ನು ಕೆಲವು ಸಂಸ್ಥೆಗಳು ಉದ್ಯೋಗ ಕಡಿತ ಮಾಡುವಾಗ ತನ್ನ ಉದ್ಯೋಗಿಗಳಿಗೆ ಉತ್ತಮ ಆಫರ್ ಅನ್ನು ಕೂಡಾ ನೀಡಿದೆ. ಅಮೆಜಾನ್ ಸಿಇಒ ಆಂಡಿ ಜಾಸಿ ತನ್ನ ಷೇರುದಾರರಿಗೆ ನೀಡಿದ ವಾರ್ಷಿಕ ಪತ್ರದಲ್ಲಿ ಈ ಆಫರ್ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ತನ್ನ ಈ ಪತ್ರದಲ್ಲಿ ಅಮೆಜಾನ್ ಸಿಇಒ ಆಂಡಿ ಜಾಸಿ ಸಂಸ್ಥೆಯು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಬೇಕಾಯಿತು. ಈ ವೆಚ್ಚ ಕಡಿತ ಕ್ರಮವು ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಷೇರುದಾರರಿಗಾಗಿ ನೀಡಲಾದ ಈ ಪತ್ರವನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ. ಹಾಗೆಯೇ ಸಂಸ್ಥೆಯಲ್ಲಿ ಅಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುವುದು ಅತೀ ಕಷ್ಟಕರವಾಗಿತ್ತು ಎಂದಿದ್ದಾರೆ.

ಸಂಸ್ಥೆಯಲ್ಲಿ ಸುಮಾರು 27 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಇದು ಅತೀ ಕಷ್ಟಕರವಾದ ಪ್ರಕ್ರಿಯೆಯಾಗಿದೆ. ಈ ಉದ್ಯೋಗ ಕಡಿತವು ಅಂತಿಮವಾಗಿ ನಮ್ಮ ಸಂಸ್ಥೆಯ ಉದ್ಯಮದ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಉದ್ಯೋಗ ಕಡಿತ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸಿ ತಿಳಿಸಿದ್ದಾರೆ. ಇನ್ನು ಅಮೆಜಾನ್ ಮಾತ್ರವಲ್ಲದೆ ಇನ್ನು ಹಲವು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದ್ದಾರೆ.
ಕಳೆದ ತಿಂಗಳು ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಒಟ್ಟಾಗಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನು ಈ ಸಂಸ್ಥೆಯು ಆರಂಭಿಕವಾಗಿ 18 ಸಾವಿರ ಉದ್ಯೋಗ ಕಡಿತ ಮಾಡಿದೆ. ಉದ್ಯೋಗಿಗಳು ಈ ಉದ್ಯೋಗ ಕಡಿತವನ್ನು ಸ್ವೀಕಾರ ಮಾಡಿರುವುದು ಸಂಸ್ಥೆಯ ದೀರ್ಘಾವಧಿಯ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ಹೇಳಿದ್ದಾರೆ.
"ಕಳೆದ ಕೆಲವು ತಿಂಗಳುಗಳಿಂದ ಸಂಸ್ಥೆಯ ಎಲ್ಲ ಬೆಳವಣಿಗೆಯನ್ನು ನಾವು ನೋಡಿಕೊಳ್ಳುತ್ತಾ ಬಂದಿದ್ದೇವೆ. ನಾವು ಎಲ್ಲ ಪ್ರಕ್ರಿಯೆಯನ್ನು ದೀರ್ಘಾವಧಿಯ ಬೆಳವಣಿಗೆಯ ಕಡೆ ಗಮನಹರಿಸಿದ್ದೇವೆಯೇ ಎಂದು ನೋಡಿದ್ದೇವೆ," ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಉದ್ಯೋಗ ಕಳೆದುಕೊಂಡವರಿಗೆ ಅಮೆಜಾನ್ ಆಫರ್ ಏನು?
ಸಾಮಾನ್ಯವಾಗಿ ಈ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ ಸಂಸ್ಥೆಗಳು ಉದ್ಯೋಗ ಕಳೆದುಕೊಂಡವರಿಗೆ ಉತ್ತಮ ಆಫರ್ ಅನ್ನು ನೀಡಿದೆ. ಅಮೆಜಾನ್‌ನಲ್ಲಿ ಉದ್ಯೋಗಿಗಳಿಗೆ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡಲಾಗಿದೆ. ಹಾಗೆಯೇ ತಾತ್ಕಾಲಿಕವಾಗಿ ಆರೋಗ್ಯ ವಿಮೆ ಸೌಲಭ್ಯ ನೀಡಲಾಗಿದೆ. ಹಾಗೆಯೇ ಬೇರೆ ಉದ್ಯೋಗ ಹುಡುಕಾಟಕ್ಕೆ ಸಹಾಯವನ್ನು ಕೂಡಾ ಮಾಡಲಾಗಿದೆ. ಇನ್ನು ಮೇ ತಿಂಗಳಿನಿಂದ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಮೂರು ದಿನ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕೆಲವು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದಾಗ ಉತ್ತಮ ಆಫರ್ ಅನ್ನು ನೀಡಿದೆ. ಇತ್ತೀಚೆಗೆ ಕೆಲವು ಸಂಸ್ಥೆಗಳು ಒಂದು ವರ್ಷದ ವೇತನ ನೀಡುವ ಆಫರ್ ಅನ್ನು ಕೂಡಾ ನೀಡಿದೆ. ಗೂಗಲ್, ಮೆಟಾ, ಅಮೆಜಾನ್ ಸೇರಿದಂತೆ ಒಟ್ಟಾಗಿ ಸುಮಾರು 570 ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಇನ್ನು 2023ರಲ್ಲಿ ಈವರೆಗೆ ಒಟ್ಟಾಗಿ 1,68,918 ಉದ್ಯೋಗಿಗಳನ್ನು ಸಂಸ್ಥೆಯು ಕೆಲಸದಿಂದ ವಜಾಗೊಳಿಸಿದೆ.
ಯುಎಸ್ ಮೂಲದ ಟೆಕ್ ಸಂಸ್ಥೆಗಳು ಅತೀ ದೊಡ್ಡ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದ ಬಳಿಕ ಈಗ ಯುರೋಪ್‌ನಲ್ಲಿಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಆದರೆ ಯುರೋಪ್‌ನಲ್ಲಿ ಮಾತ್ರ ಈ ಸಂಸ್ಥೆಗಳಿಗೆ ಹಲವಾರು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿದೆ. ಕಾರ್ಮಿಕ ರಕ್ಷಣಾ ನಿಯಮದಿಂದಾಗಿ ಯುರೋಪ್‌ನಲ್ಲಿ ಉದ್ಯೋಗ ಕಡಿತವನ್ನು ಮಾಡಲು ಈ ಟೆಕ್ ದೈತ್ಯಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ ವೆಚ್ಚ ಕಡಿತ ಮಾಡಬೇಕಾದರೆ ಉದ್ಯೋಗ ಕಡಿತವೇ ಪರಿಹಾರ ಎಂಬುವುದು ಈ ಸಂಸ್ಥೆಗಳ ನಿಲುವಾಗಿದೆ. ಅದಕ್ಕಾಗಿ ಒಂದು ವರ್ಷದ ಉದ್ಯೋಗ ನೀಡುವ ಆಫರ್ ಅನ್ನು ಉದ್ಯೋಗಿಗಳಿಗೆ ಸಂಸ್ಥೆಯು ನೀಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications