ಇ ಕಾಮರ್ಸ್ ಕಂಪೆನಿ ಅಮೆಜಾನ್ ನಿಂದ ಭಾರತದಲ್ಲಿ ವಾರ್ಷಿಕ ಶಾಪಿಂಗ್ ಹಬ್ಬವು ಆಗಸ್ಟ್ 6- 7ರಂದು ನಡೆಯಲಿದೆ. ಸಾಮಾನ್ಯವಾಗಿ ನಡೆಯುವುದಕ್ಕಿಂತ ಸ್ವಲ್ಪ ತಡವಾಗಿ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ಜುಲೈ ಮಧ್ಯ ಭಾಗದಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ಕಾರಣಕ್ಕೆ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ.
ಜಾಗತಿಕವಾಗಿ ಇತರ ಮಾರ್ಕೆಟ್ 'ಪ್ರೈಮ್ ಡೇ' ಇನ್ನೂ ಮುಂದಕ್ಕೆ ಹಾಕಲಾಗಿದೆ. ಮಂಗಳವಾರದಂದು ಈ ಬಗ್ಗೆ ಟೆಕ್ ಕ್ರಷ್ ವರದಿ ಮಾಡಿದ್ದು, ಇದೇ ಮೊದಲ ಬಾರಿಗೆ ಪ್ರೈಮ್ ಡೇ ಜಾಗತಿಕ ಮಟ್ಟದಲ್ಲಿ ಒಂದೇ ದಿನ ನಡೆಯುತ್ತಿಲ್ಲ. ಇತರ ಮಾರುಕಟ್ಟೆಗಳಲ್ಲಿ ಯಾವಾಗ ನಡೆಯುತ್ತಿದೆ ಎಂಬ ಬಗ್ಗೆ ಕೂಡ ಮಾಹಿತಿ ಇಲ್ಲ ಎಂದು ತಿಳಿಸಿದೆ.
'ಪ್ರೈಮ್ ಸದಸ್ಯ'ರಾಗಿರುವವರಿಗೆ ಖರೀದಿಗೆ ಉತ್ತಮ ಸಮಯ
ಆಗಸ್ಟ್ 6ರ ಮಧ್ಯ ರಾತ್ರಿಯಿಂದ ಆರಂಭವಾಗುವ ಈ ವಾರ್ಷಿಕ ಹಬ್ಬ ಆಗಸ್ಟ್ 7ರ ತನಕ ಇರುತ್ತದೆ. ಖರೀದಿಯಲ್ಲಿ ಸಾಕಷ್ಟು ಉಳಿತಾಯ ಮಾಡುವ ಅವಕಾಶಗಳು ಇರುತ್ತವೆ. ಅದರಲ್ಲೂ 'ಪ್ರೈಮ್ ಸದಸ್ಯ'ರಾಗಿರುವವರಿಗೆ ಖರೀದಿಗೆ ಅತ್ಯುತ್ತಮವಾದ ಸಮಯ ಇದು. ಕಳೆದ ಐದು ವರ್ಷಗಳಿಂದಲೂ ಇಂಥ ಅವಕಾಶ ದೊರೆಯುತ್ತಿದೆ. ಪ್ರತಿ ವರ್ಷ ಈ ಸಮಯಕ್ಕೆ ಎದುರು ನೋಡುತ್ತೇವೆ ಎಂದು ಅಮೆಜಾನ್ ಕಂಪೆನಿ ವಕ್ತಾರ ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮಾರಾಟ
ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಸೇರಿದಂತೆ ವಿವಿಧ ಹಲವು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಖರೀದಿಯಲ್ಲಿ ಉತ್ತಮ ಆಫರ್ ಗಳನ್ನು ಪ್ರೈಮ್ ಡೇ ಮಾರಾಟದಲ್ಲಿ ನಿರೀಕ್ಷೆ ಮಾಡಬಹುದು. ವಿವಿಧ ಉತ್ಪನ್ನಗಳ ಮೇಲೆ ಎಚ್ ಡಿಎಫ್ ಸಿ ಗ್ರಾಹಕರಿಗೆ ತಕ್ಷಣವೇ 10 ಪರ್ಸೆಂಟ್ ರಿಯಾಯಿತಿ ದೊರೆಯಲಿದೆ. ಈ ಎರಡು ದಿನದಲ್ಲಿ ನೋ- ಕಾಸ್ಟ್ EMI (ಯಾವುದೇ ಬಡ್ಡಿ ಇಲ್ಲದ ಇಎಂಐ) ಹಾಗೂ ಎಕ್ಸ್ ಚೇಂಜ್ ಆಫರ್ ಗಳು ದೊರೆಯುತ್ತವೆ.
ಮಾಮೂಲಿಗಿಂತ ತಡವಾಗಿ ನಡೆಯುತ್ತಿದೆ ಪ್ರೈಮ್ ಡೇ
ಮಾಮೂಲಿಗಿಂತ ಬೇರೆ ದಿನಗಳಲ್ಲಿ ಈ ಬಾರಿಯ ಪ್ರೈಮ್ ಡೇ ಆಯೋಜಿಸುತ್ತಿದ್ದೇವೆ. ನಮ್ಮ ಗ್ರಾಹಕರು ಹಾಗೂ ಮಾರಾಟಗಾರ ಸಹಭಾಗಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಖಾತ್ರಿ ನೀಡುತ್ತೇವೆ. ಆಗಸ್ಟ್ 6-7ರಂದು ಭಾರತದಲ್ಲಿನ ಪ್ರೈಮ್ ಸದಸ್ಯರು ಭಾರೀ ಉಳಿತಾಯ ಮಾಡಬಹುದು. ವಿಶ್ವದ ಇತರೆಡೆಗಳಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ ಎಂದು ಅಮೆಜಾನ್ ಕಂಪೆನಿ ವಕ್ತಾರರು ತಿಳಿಸಿದ್ದಾರೆ.


Click it and Unblock the Notifications