ಏನು ಯೋಚನೆ ಮಾಡಬೇಡಿ, ಇನ್ಮುಂದೆ ಅಮೆಜಾನ್ ಪ್ರೈಮ್ ಮ್ಯೂಸಿಕ್ ಉಚಿತವಾಗಿ ಸಿಗಲಿದೆ. ಕೇವಲ ಅಲೆಕ್ಸಾದಲ್ಲಿ ಉಚಿತವಾಗಿ ಲಭ್ಯವಿದ್ದ ಅಮೆಜಾನ್ ಪ್ರೈಮ್ ಮ್ಯೂಸಿಕ್ ಇನ್ಮುಂದೆ ಸಂಪೂರ್ಣ ಉಚಿತ.
ಇ ಕಾಮರ್ಸ್ ದಿಗ್ಗಜ ಅಮೆಜಾನ್ ಕಂಪನಿಯು ಅಲೆಕ್ಸಾ ಬಳಕೆದಾರರಿಗೆ ಉಚಿತವಾದ ಸಂಗೀತ ಸೇವೆಯ ಆವೃತ್ತಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಆ ಸೇವೆಯನ್ನು ತನ್ನೆಲ್ಲಾ ಗ್ರಾಹಕರಿಗೆ ವಿಸ್ತರಿಸುವುದಾಗಿ ಅಮೆಜಾನ್.ಕಾಂ ಸೋಮವಾರ ಘೋಷಿಸಿದೆ. ಈ ಸೇವೆಯನ್ನು ಪಡೆಯಲು ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಅಗತ್ಯವಿಲ್ಲ. ಈ ಮೂಲಕ ತನ್ನ 140 ಮಿಲಿಯನ್ ಬಳಕೆದಾರರಿಗೆ ಉಚಿತ ಸೇವೆ ನೀಡಲಿದೆ.

ಈ ಮೊದಲು ಅಲೆಕ್ಸಾ ಬಳಕೆದಾರರು ಪ್ರತಿಧ್ವನಿ ಸಾಧಕಗಳು (Echo devices) ಬಳಕೆದಾರರಿಗೆ ಮಾತ್ರ ಈ ಉಚಿತ ಸೇವೆಯ ಅವಕಾಶವಿತ್ತು. ಆದರೆ ಇನ್ಮುಂದೆ ಐಒಎಸ್, ಆ್ಯಂಡ್ರಾಯ್ಡ್, ಮತ್ತು ಫೈರ್ ಟಿವಿಯಲ್ಲಿ ಜಾಹೀರಾತು ಒಳಗೊಂಡ ಅಮೆಜಾನ್ ಮ್ಯೂಸಿಕ್ ಆ್ಯಪ್ ಬಳಕೆಯಿಂದ ಸಂಗೀತವನ್ನು ಕೇಳಬಹುದು. ವೆಬ್ ಮೂಲಕವೂ ಸಾವಿರಾರು ಹಾಡುಗಳನ್ನು ಆಲಿಸಬಹುದು.
ಆದಾಗ್ಯೂ, ಗ್ರಾಹಕರು ಜಾಹೀರಾತು ಮುಕ್ತ ಸಂಗೀತವನ್ನು ಕೇಳಲು ಬಯಸಿದರೆ, ಅಮೆಜಾನ್ ಪ್ರೈಮ್, ಅಮೆಜಾನ್ ಮ್ಯೂಸಿಕ್ ಅನ್‌ಲಿಮಿಟೆಡ್ ಚಂದಾದಾರಿಕೆ (Subscription) ಅಗತ್ಯವಿರುತ್ತದೆ. ಸದ್ಯ ಈ ಸೌಲಭ್ಯವು ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಗ್ರಾಹಕರಿಗೆ ಲಭ್ಯವಿದೆ.
ಇತರೆ ಅಮೆಜಾನ್ ಸೇವೆಗಳಾದ ಅಮೆಜಾನ್ ಪ್ರೈಮ್, ಪ್ರೈಮ್ ವಿಡಿಯೋ ಮತ್ತು ಅಮೆಜಾನ್ ಮ್ಯೂಸಿಕ್ ಅನ್ನು ಒಳಗೊಂಡಿರುವ ಪ್ರೈಮ್ ಚಂದಾದಾರಿಕೆಯನ್ನು ಭಾರತೀಯ ಬಳಕೆದಾರರು, ವಾರ್ಷಿಕ 999 ರುಪಾಯಿ ಅಥವಾ ಮಾಸಿಕ 129 ರುಪಾಯಿ ಶುಲ್ಕ ಪಾವತಿಸಿದ ನಂತರ ಬಳಕೆ ಮಾಡಬಹುದಾಗಿದೆ.


Click it and Unblock the Notifications