ಕಂಪೆನಿ ಕಾಯ್ದೆಯ ಕಾನೂನು ನಿಯಮಗಳು ಹಾಗೂ ಸೆಬಿಯ ಇತರ ನಿಬಂಧನೆಗಳಿಗೆ ಎಲ್ಲಿಯ ತನಕ ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) ಸಲ್ಲಿಸಿದ ಯೋಜನೆ ಒಳಪಟ್ಟಿರುತ್ತದೋ ಅದನ್ನು ಸೆಬಿ ಮಂಜೂರು ಮಾಡಲೇಬೇಕು. ಅಮೆಜಾನ್ ಸಲ್ಲಿಸಿರುವ ಆಕ್ಷೇಪವು ಸೆಬಿಯನ್ನು ಸ್ಕೀಮ್ ಗೆ ಮಂಜೂರು ಮಾಡುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶದಲ್ಲಿ ಸೋಮವಾರ ತಿಳಿಸಿದೆ.
FRL ಮಂಡಳಿಯು ನಿರ್ಣಯ ತೆಗೆದುಕೊಂಡು, ಸ್ಕೀಮ್ ಗೆ ಒಪ್ಪಿಕೊಂಡಿದೆ ಮತ್ತು ರಿಲಯನ್ಸ್ ಗೆ ವ್ಯವಹಾರ ಮಾರಾಟ ಮಾಡುವುದು ಸಿಂಧುವಾಗಿದೆ ಮತ್ತು ಕಾನೂನು ನಿಯಮಾವಳಿಗೆ ಅನುಸಾರವಾಗಿದೆ- ಅಮೆಜಾನ್ ವಾದಿಸುತ್ತಿರುವಂತೆ ಅಸಿಂಧುವಲ್ಲ.
ಅಮೆಜಾನ್ ನಿಂದ ಫೆಮಾ ಮತ್ತು ಎಫ್ ಡಿಐ ನಿಯಮಾವಳಿ ಉಲ್ಲಂಘನೆ ಆಗಿದೆ. ಷೇರುದಾರರ ಒಪ್ಪಂದವನ್ನು ಒಟ್ಟಾಗಿ ನೋಡಿದರೆ, FRL ಮೇಲೆ "ಹತೋಟಿ" ಸಾಧಿಸಿರುವುದು ತಿಳಿಯುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಇದು ಫೆಮಾ ಮತ್ತು ಎಫ್ ಡಿಐ ನಿಯಮಾವಳಿಗೆ ವ್ಯತಿರಿಕ್ತವಾಗಿದೆ.

ಅಮೆಜಾನ್ ನಿಂದ FRL ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ಸ್ವರೂಪದ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ ಆ ಎರಡೂ ಕಂಪೆನಿಗಳು (ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್) ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.
ಕಾನೂನು ಪ್ರಾಧಿಕಾರಗಳು- ಸೆಬಿಗೆ ಅರ್ಜಿ/ ಆಕ್ಷೇಪಣೆಗೆ ಕಾನೂನು ಅನ್ವಯ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಈ ಮೇಲ್ಕಂಡ ಆದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಫ್ಯೂಚರ್ಸ್ ರೀಟೇಲ್ ಲಿಮಿಟೆಡ್ ನಿಂದ ಕಾನೂನು ನಿಯಮಗಳು ಹಾಗೂ ಕಂಪೆನಿ ಕಾಯ್ದೆ ಅನುಸಾರದಂತೆ ಸಲ್ಲಿಸಿರುವ ಯೋಜನೆಗೆ ಸೆಬಿ ಮಂಜೂರಾತಿ ಮಾಡಬೇಕಿದೆ. ಈ ಯೋಜನೆಗೆ ಸೆಬಿ ಅನುಮತಿ ನೀಡುವುದಕ್ಕೆ ಇನ್ನು ಮುಂದೆ ಅಮೆಜಾನ್ ಆಕ್ಷೇಪಣೆ ಪ್ರಸ್ತುತ ಅಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications