ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಅಮೆಜಾನ್ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಅಮೆಜಾನ್ ಯುಎಸ್‌ನಲ್ಲಿ ಸುಮಾರು 8 ಗೋ ಕನ್ವಿಯನೆನ್ಸ್ ಸ್ಟೋರ್ಸ್‌ಗಳು ಮುಚ್ಚಿದೆ. ಸಿಎನ್‌ಬಿಸಿ ಪ್ರಕಾರ ಏಪ್ರಿಲ್ 1ರಿಂದ ಟೆಕ್ ಸಂಸ್ಥೆ ನ್ಯೂಯಾರ್ಕ್‌ನಲ್ಲಿ ಎರಡು ಗೋ ಸ್ಟೋರ್ಸ್, ಸೀಟ್ಯಾಲ್‌ನಲ್ಲಿ ಎರಡು ಗೋ ಸ್ಟೋರ್ಸ್, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಾಲ್ಕು ಸ್ಟೋರ್‌ಗಳನ್ನು ಬಂದ್ ಮಾಡಲಾಗಿದೆ. ಕೆಲಸವನ್ನು ಕಳೆದುಕೊಂಡವರಿಗೆ ಸಂಸ್ಥೆಯಲ್ಲೇ ಉದ್ಯೋಗದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
"ಬೇರೆ ಫಿಸಿಕಲ್ ರಿಟೇಲರ್‌ನಂತೆಯೇ, ನಾವು ಸಮಯಕ್ಕೆ ಸರಿಯಾಗಿ ನಿಯತಕಾಲಿಕವಾಗಿ ನಮ್ಮ ಸ್ಟೋರ್‌ಗಳ ಪೋರ್ಟ್‌ಫೋಲಿಯೊವನ್ನು ನಿರ್ಣಯಿಸುತ್ತೇವೆ, ದಾರಿಯುದ್ದಕ್ಕೂ ಆಪ್ಟಿಮೈಸೇಶನ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಅಮೆಜಾನ್ ವಕ್ತಾರ ಜೆಸ್ಸಿಕಾ ಮಾರ್ಟಿನ್ ಹೇಳಿದ್ದಾರೆ. "ಈ ಸಂದರ್ಭದಲ್ಲಿ, ನಾವು ಸಿಯಾಟಲ್, ನ್ಯೂಯಾರ್ಕ್ ಸಿಟಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಮೆಜಾನ್ ಗೋ ಸ್ಟೋರ್‌ಗಳನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದೇವೆ," ಎಂದು ತಿಳಿಸಿದ್ದಾರೆ.

"ನಾವು ಅಮೆಜಾನ್‌ನ ಗೋ ಸ್ಟೋರ್ ಸ್ವರೂಪಕ್ಕೆ ಬದ್ಧರಾಗಿದ್ದೇವೆ. ಯುಎಸ್‌ನಾದ್ಯಂತ 20 ಕ್ಕೂ ಹೆಚ್ಚು ಅಮೆಜಾನ್ ಗೋ ಸ್ಟೋರ್‌ಗಳನ್ನು ನಿರ್ವಹಣೆ ಮಾಡುತ್ತೇವೆ. ನಾವು ನಮ್ಮ ಅಮೆಜಾನ್ ಗೋ ಸ್ಟೋರ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಗ್ರಾಹಕರೊಂದಿಗೆ ಉತ್ತಮ ವಹಿವಾಟು ನಡೆಸಲು ಯಾವ ಸ್ಥಳ ಉತ್ತಮ ಎಂದು ನೋಡಲು ಮುಂದುವರಿಸುತ್ತೇವೆ," ಎಂದಿದ್ದಾರೆ. ಇನ್ನು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಕೂಡಾ ಮಾಹಿತಿ ನೀಡಿದ್ದಾರೆ. 2018 ರಲ್ಲಿ, ಮೊದಲ ಬಾರಿಗೆ ಅಮೆಜಾನ್ ಗೋ ಸ್ಟೋರ್ ಅನ್ನು ಸಿಯಾಟಲ್‌ನಲ್ಲಿರುವ ಕಂಪನಿಯ ಪ್ರಧಾನ ಕಛೇರಿಯಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು.
ಅಮೆಜಾನ್ ಪೇ ಮೇಲೆ ದಂಡ ವಿಧಿಸಿದ ಆರ್‌ಬಿಐ
ಈ ಹಿಂದೆ ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮೇಲೆ 3.06 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಮಾಹಿತಿ ನೀಡಿದೆ. ಈ ಹಿಂದೆ ಹಲವಾರು ಬ್ಯಾಂಕುಗಳ ವಿರುದ್ಧ ಆರ್‌ಬಿಐ ದಂಡವನ್ನು ವಿಧಿಸಿದೆ. ಇದಕ್ಕಾಗಿ ಹಲವಾರು ಕಾರಣಗಳನ್ನು ಕೂಡಾ ನೀಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆರ್‌ಬಿಐ ಮೂರು ಸಹಕಾರಿ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿತ್ತು.
ಆರ್‌ಬಿಐ ಅಮೆಜಾನ್ ಪೇ ಮೇಲೆ ಪ್ರಮುಖವಾಗಿ ಪೂರ್ವಪಾವತಿ ಸೂಚನೆ (ಪಿಪಿಐ) ಮತ್ತು ನೋ ಯುವರ್ ಕಸ್ಟಮರ್ (ಕೆವೈಸಿ) ನಿಯಮವನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದ ಕಾರಣದಿಂದಾಗಿ ಈಗ ದಂಡವನ್ನು ವಿಧಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. "ಸಂಸ್ಥೆಯು ಆರ್‌ಬಿಐ ನೀಡಿವ ಕೆವೈಸಿ ಅಗತ್ಯಗಳ ನಿರ್ದೇಶನವನ್ನು ಸಪೂರ್ಣವಾಗಿ ಪಾಲನೆ ಮಾಡಿಲ್ಲ ಎಂಬುವುದು ನಮ್ಮ ಗಮನಕ್ಕೆ ಬಂದಿದೆ," ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.


Click it and Unblock the Notifications