ವಾಷಿಂಗ್ಟನ್, ಜೂನ್ 13: ಕೊರೊನಾವೈರಸ್ ಜಗತ್ತಿನ ಅರ್ಥವ್ಯವಸ್ಥೆಯ ಮುಂದಾಳು ಅಮೆರಿಕದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಆದೇಶದಲ್ಲಿ ಕೊರೊನಾವೈರಸ್ ಹಾವಳಿ ವ್ಯಾಪಕವಾಗಿದ್ದು, 1.75 ಲಕ್ಷ ಜನ ಮರಣ ಹೊಂದಿದ್ದಾರೆ.
ಇನ್ನೊಂದೆಡೆ ಕೊರೊನಾ ಅಮೆರಿಕದ ಅರ್ಥ ವ್ಯವಸ್ಥೆಯನ್ನು ಹೈರಾಣಾಗಿಸಿದೆ. ಇದಕ್ಕೆ ತಾಜಾ ಉದಾಹರಣೆಯಂದರೆ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ ತೀವ್ರ ಏರಿಕೆಯಾಗಿರುವುದು ಕಂಡು ಬಂದಿದೆ. ಇದು ಪ್ರಸ್ತುತ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಸರ್ಕಾರವನ್ನು ಅಲುಗಾಡಿಸುತ್ತಿದೆ.
ಆದರೆ, ಅಮೆರಿಕದ ಬಿಲಿಯನೇರ್‌ಗಳ ಆದಾಯದಲ್ಲಿ ಹೆಚ್ಚಳ ಕಂಡು ಬಂದಿದೆ. ಅಮೆರಿಕದಲ್ಲಿ ನಿರುದ್ಯೋಗ ದರವು ಮೇ ತಿಂಗಳಲ್ಲಿ ಸುಮಾರು 28% ರಷ್ಟು ಹೆಚ್ಚಳ ಕಂಡಿದೆ. ಇದು ಎರಡನೆಯ ಮಹಾಯುದ್ಧದ ನಂತರದ ಕಂಡು ಬಂದ ಅತಿ ದೊಡ್ಡ ದಾಖಲೆಯಾಗಿದೆ. ಒಟ್ಟಾರೆ ಅಮೆರಿಕದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಇಲ್ಲಿಯವರೆಗೆ 4.4 ಕೋಟಿ ಜನ (44 ಮಿಲಿಯನ್) ಉದ್ಯೋಗ ಕಳೆದುಕೊಂಡಿದ್ದಾರೆ ಎಂದು Policy Studies think tank ವರದಿಯನ್ನು ಬಿಡುಗಡೆ ಮಾಡಿದೆ.
2.95 ಟ್ರಿಲಿಯನ್‌ನಿಂದ 3.58 ಟ್ರಿಲಿಯನ್‌ಗೆ
ಅಮೆರಿಕದಲ್ಲಿ ಕಳೆದ ಮೂರು ತಿಂಗಳು ಲಾಕ್‌ಡೌನ್ ಜಾರಿಯಲ್ಲಿದೆ, ತೀವ್ರ ಉದ್ಯೋಗ ನಷ್ಟವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅಮೆರಿಕದ ಬಿಲಿಯನೇರ್‌ಗಳ ಸಂಪತ್ತು ಇದೇ ವೇಳೆಯಲ್ಲಿ 2.95 ಟ್ರಿಲಯನ್‌ನಿಂದ 3.58 ಟ್ರಿಲಿಯನ್‌ಗೆ ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಅಂದರೆ ಶೇ 21 ರಷ್ಟು ಏರಿಕೆಯಾಗಿದೆ.
ನಾಲ್ಕು ಪಟ್ಟು ಹೆಚ್ಚು
ಲಾಕ್‌ಡೌನ್ ಪರಿಣಾಮವಾಗಿಯೇ ಇಂದು ಅಮೆರಿಕನ್ನರು ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. 2007-09ರ ಅಮೆರಿಕದ ಮಹಾ ಆರ್ಥಿಕ ಹಿಂಜರಿತದ ಸಮಯದಲ್ಲಿ ಕಳೆದುಹೋದ ಉದ್ಯೋಗಕ್ಕಿಂತ ಈಗ ಸಂಭವಿಸಿರುವುದು ನಾಲ್ಕು ಪಟ್ಟು ಹೆಚ್ಚು ಎನ್ನಲಾಗುತ್ತಿದೆ. ಆಗ ನಿರುದ್ಯೋಗ ವಿಷಯದಲ್ಲಿ ಅಮೆರಿಕ ಸುಧಾರಿಸಿಕೊಳ್ಳಲು ಆರು ವರ್ಷವೇ ಬೇಕಾಯಿತು.
ಭೀಕರ ಸನ್ನಿವೇಶ ಕಂಡು ಬಂದಿದೆ
ಅಮೆರಿದಲ್ಲಿ ಕಳೆದ 75 ವರ್ಷಗಳಿಂದ ಕಂಡು ಬರದ ಭೀಕರ ಸನ್ನಿವೇಶ ಕಂಡು ಬಂದಿದೆ. ಅಲ್ಲಿನ Policy Studies think tank ವರದಿಯನ್ನು ಬಿಡುಗಡೆ ಮಾಡಿದ್ದು, ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಅಮೆರಿಕಕ್ಕೆ ಹಲವಾರು ವರ್ಷಗಳು ಬೇಕಾಗುತ್ತದೆ ಎಂದು ಮುನ್ಸೂಚನೆ ನೀಡಿದೆ.
ಸಮೀಕ್ಷೆಗಳಿಂದ ಸಂಗ್ರಹಿಸಲಾಗಿದೆ
ಉದ್ಯೋಗ ವರದಿಯನ್ನು ಎರಡು ಪ್ರತ್ಯೇಕ ಸಮೀಕ್ಷೆಗಳಿಂದ ಸಂಗ್ರಹಿಸಲಾಗಿದೆ. ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, ಮೇ ತಿಂಗಳಲ್ಲಿ ನಿರುದ್ಯೋಗ ದರವು 22.8% ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ನಿರುದ್ಯೋಗ ದರವು 14.7% ಕಂಡು ಬಂದಿತ್ತು.


Click it and Unblock the Notifications