ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತವೂ ಈಗಲೂ ಮುಂದುವರಿದಿದೆ. ದಿನಕ್ಕೊಂದು ಸಂಸ್ಥೆಯು ಉದ್ಯೋಗ ಕಡಿತ ಘೋಷಿಸುತ್ತಿದೆ. ಇನ್ನು ಕೆಲವು ಸಂಸ್ಥೆಗಳು ಈಗಾಗಲೇ ಎರಡು- ಮೂರು ಹಂತಗಳಲ್ಲಿ ಉದ್ಯೋಗ ಕಡಿತ ಮಾಡಿದೆ. ಗೂಗಲ್‌ನಲ್ಲೂ ಉದ್ಯೋಗ ಕಡಿತ ಮಾಡಲಾಗಿದೆ. ಪ್ರಮುಖವಾಗಿ ವೆಚ್ಚ ಕಡಿತಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಉದ್ಯೋಗ ಕಡಿತ ನಡುವೆಯೂ ಗೂಗಲ್ ಸಿಇಒ ಗಳಿಕೆ ಕೇಳಿದ್ರೆ ನೀವು ಆಶ್ಚರ್ಯಪಡುತ್ತೀರಿ.
ಹೌದು, ಆಲ್ಫಾಬೇಟ್ ಇಂಕ್ ಸಿಇಒ ಸುಂದರ್ ಪಿಚೈ 2022ರಲ್ಲಿ ಒಟ್ಟಾಗಿ 226 ಮಿಲಿಯನ್ ಡಾಲರ್ ಪರಿಹಾರವನ್ನು ಪಡೆದಿದ್ದಾರೆ. ಸರಾಸರಿ ಉದ್ಯೋಗಿಯ ವೇತನಕ್ಕಿಂತ 800 ಪಟ್ಟು ಹೆಚ್ಚು ಈ ಪರಿಹಾರವಾಗಿದೆ ಎಂದು ಕಂಪನಿಯು ಶುಕ್ರವಾರ ಸೆಕ್ಯುರಿಟೀಸ್ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತುತ ವಿಶ್ವದಲ್ಲಿ ಅತೀ ಹೆಚ್ಚು ಗಳಿಕೆಯನ್ನು ಪಡೆಯುವವರಲ್ಲಿ ಸುಂದರ್ ಪಿಚೈ ಕೂಡಾ ಒಬ್ಬರಾಗಿದ್ದಾರೆ.

ಪಿಚೈನ ಈ ಪರಿಹಾರ/ ಸಂಭಾವನೆ ಮೊತ್ತದಲ್ಲಿ ಸ್ಟಾಕ್ ಅವಾರ್ಡ್ 218 ಮಿಲಿಯನ್ ಡಾಲರ್ ಕೂಡಾ ಸೇರ್ಪಡೆಯಾಗಿದೆ ಎಂದು ಫೈಲಿಂಗ್‌ನಲ್ಲಿ ಉಲ್ಲೇಖಿಸಲಾಗಿದೆ. 2021ರಲ್ಲಿ ಸುಂದರ್ ಪಿಚೈ ವೇತನ 6.3 ಮಿಲಿಯನ್ ಡಾಲರ್ ಆಗಿತ್ತು. ಹಾಗೆಯೇ ಸ್ಟಾಕ್ ಅವಾರ್ಡ್ ಕೂಡಾ ಲಭ್ಯವಾಗುತ್ತಿರಲಿಲ್ಲ. ಅದಕ್ಕೂ ಮುನ್ನ ಮೂರು ವರ್ಷಗಳಿಂದ ಸುಂದರ್ ಪಿಚೈ ವೇತನವು 2 ಮಿಲಿಯನ್ ಡಾಲರ್‌ಗೆ ಸ್ಥಿರವಾಗಿತ್ತು.
ಉದ್ಯೋಗ ಕಡಿತ ಮಾಡುತ್ತಿರುವ ನಡುವೆ ಸಿಇಒಗೆ ಅಧಿಕ ವೇತನ
ಆಲ್ಫಾಬೇಟ್ ನಿರ್ವಹಣೆ ಮಾಡುವ ಗೂಗಲ್ ಸಂಸ್ಥೆಯೂ ಪ್ರಸ್ತುತ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ, ಉದ್ಯೋಗ ಕಡಿತ ವಿವಾದದ ಬಳಿಕ ನೂರಾರು ಗೂಗಲ್ ಉದ್ಯೋಗಿಗಳು ಕಂಪನಿಯ ಲಂಡನ್ ಕಚೇರಿಯನ್ನು ತೊರೆದು ಹೊರಹೋಗಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ ಗೂಗಲ್ ಉದ್ಯೋಗಿಗಳು ಕಂಪನಿಯ ಜ್ಯೂರಿಚ್ ಕಚೇರಿಯನ್ನು ತೊರೆದು ಹೊರನಡೆದಿದ್ದಾರೆ. ಜನವರಿ ತಿಂಗಳಿನಲ್ಲಿ ಆಲ್ಫಾಬೇಟ್ ಸುಮಾರು 12,000 ಅಥವಾ ಶೇಕಡ 6ರಷ್ಟು ಉದ್ಯೋಗ ಕಡಿತವನ್ನು ಮಾಡಿದೆ. ಪ್ರಮುಖವಾಗಿ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಗೂಗಲ್‌ನಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ.
ಬ್ಲ್ಯೂಬರ್ಗ್ ಪ್ರಕಾರ ಸುಂದರ್ ಪಿಚೈ ಪಡೆಯುವ ಆದಾಯವು 2022ರಲ್ಲಿ ಆಲ್ಫಾಬೇಟ್‌ನಲ್ಲಿ ಬೇರೆ ಅಧಿಕಾರಿಗಳು, ಬೇರೆ ಉನ್ನತ ಉದ್ಯೋಗಿಗಳು ಪಡೆಯುವ ಆದಾಯಕ್ಕಿಂತ ಅಧಿಕವಾಗಿದೆ. ಗೂಗಲ್‌ನ ಜ್ಞಾನ ಮತ್ತು ಮಾಹಿತಿ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಭಾಕರ್ ರಾಘವನ್ ಮತ್ತು ಮುಖ್ಯ ವಹಿವಾಟು ಅಧಿಕಾರಿ ಫಿಲೀಫ್ ಷಿಂಡ್ಲರ್ 37 ಮಿಲಿಯನ್ ಡಾಲರ್‌ಗೂ ಅಧಿಕ ಆದಾಯವನ್ನು ಪಡೆದಿದ್ದಾರೆ.
ಇನ್ನು ಮುಖ್ಯ ಹಣಕಾಸು ಅಧಿಕಾರಿ ರುತ್ ಪೋರಟ್ ಪರಿಹಾರ ಮೊತ್ತವು 24.5 ಮಿಲಿಯನ್ ಡಾಲರ್ ಆಗಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಈ ಉದ್ಯೋಗಿಗಳಿಗೆ ಸ್ಟಾಕ್ ಗ್ರ್ಯಾಂಟ್ ಅನ್ನು ನೀಡಲಾಗುತ್ತದೆ. ಇನ್ನು ಈ ಸುರಕ್ಷತ ಪರಿಹಾರದ ಪ್ಯಾಕೇಜ್ ಅಡಿಯಲ್ಲಿ ಆಲ್ಫಾಬೇಟ್ ಸುಂದರ್ ಪಿಚೈನ ವೈಯಕ್ತಿಕ ರಕ್ಷಣೆಗಾಗಿ 5.94 ಮಿಲಿಯನ್ ಡಾಲರ್ ತೆತ್ತಿದೆ ಎಂದು ಫೈಲಿಂಗ್‌ನಲ್ಲಿ ಉಲ್ಲೇಖಿಸಲಾಗಿದೆ.
2023ರಲ್ಲಿ ಸುಂದರ್ ಪಿಚೈ ನಿವ್ವಳ ಆದಾಯ
ಗೂಗಲ್ ಹಾಗೂ ಆಲ್ಫಾಬೇಟ್ ಅನ್ನು ನಿರ್ವಹಣೆ ಮಾಡುವ ಸುಂದರ್ ಪಿಚೈಗೆ ಅಧಿಕವೇ ವೇತನವನ್ನು ನೀಡಲಾಗುತ್ತದೆ. ಸುಂದರ್ ಪಿಚೈಗೆ ವಾರ್ಷಿಕವಾಗಿ 242 ಮಿಲಿಯನ್ ಡಾಲರ್ + ಆಲ್ಫಾಬೇಟ್ ಸಿಇಒ ಸ್ಥಾನಕ್ಕೆ ವೇತನ ನೀಡಲಾಗುತ್ತದೆ. ಮೂಲ ವೇತನ ಅಥವಾ ಬೇಸಿಕ್ ಸ್ಯಾಲರಿ 2 ಮಿಲಿಯನ್ ಡಾಲರ್ ಆಗಿದೆ. ಇಷ್ಟು ಮಾತ್ರವಲ್ಲದೆ ಸಂಸ್ಥೆಯಲ್ಲಿ ಷೇರನ್ನು ಕೂಡಾ ಸುಂದರ್ ಪಿಚೈ ಹೊಂದಿದ್ದಾರೆ.
ಸುಂದರ್ ಪಿಚೈ ಒಟ್ಟಾಗಿ 88,693 ಆಲ್ಫಾಬೇಟ್ ಷೇರುಗಳನ್ನು ಹೊಂದಿದ್ದಾರೆ, ಇದು ಸಂಸ್ಥೆಯ ಒಟ್ಟು ಷೇರಿನ ಶೇಕಡ 0.01 ಆಗಿದೆ. ಎಲ್ಲ ಷೇರುಗಳು, ಹೂಡಿಕೆಗಳು, ವೇತನ ಎಲ್ಲ ಸೇರಿದಾಗ ಒಟ್ಟು ಲೆಕ್ಕಾಚಾರದಲ್ಲಿ ಸುಂದರ್ ಪಿಚೈ 2023ರ ಒಟ್ಟು ವೇತನವು 1310 ಮಿಲಿಯನ್ ಡಾಲರ್ ಅಥವಾ 1.31 ಬಿಲಿಯನ್ ಡಾಲರ್ ಆಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications