ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ 2020ರಲ್ಲಿ ಭಾರೀ ಎತ್ತರವನ್ನು ಕಂಡವು. ಒಂದೇ ವರ್ಷದಲ್ಲಿ ಚಿನ್ನ 27%ಗೂ ಹೆಚ್ಚು ಏರಿಕೆ ಕಂಡರೆ, ಬೆಳ್ಳಿ ದರ 50%ನಷ್ಟು ಮೇಲೇರಿತು. ಆಗಸ್ಟ್ ನಲ್ಲಿ ಚಿನ್ನದ ಬೆಲೆಯು ಸಾರ್ವಕಾಲಿಕ ದಾಖಲೆ ಬೆಲೆಯಾದ 56,200 ರುಪಾಯಿ ಮುಟ್ಟಿದ್ದರೆ, ಬೆಳ್ಳಿ 80,000 ಸಾವಿರ ರುಪಾಯಿ ತಲುಪಿತು.
ಸದ್ಯಕ್ಕೆ ಎಂಸಿಎಕ್ಸ್ ನಲ್ಲಿ ಚಿನ್ನದ ದರ ಹತ್ತು ಗ್ರಾಮ್ ಗೆ 50,180 ರುಪಾಯಿ ಮತ್ತು ಬೆಳ್ಳಿ ಕೇಜಿಗೆ 68,224 ರುಪಾಯಿ ಇದೆ. ವಿಶ್ವದಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿರುವುದು ಮತ್ತು ಆರ್ಥಿಕ ಪುನಶ್ಚೇತನದ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಎಂದು ಹೂಡಿಕೆದಾರರು ಅತ್ತ ಗಮನ ಹರಿಸುವ ಬಗ್ಗೆ ವಿಶ್ಲೇಷಕರು ಅಂದಾಜು ಮಾಡುತ್ತಾರೆ.
ಐಸಿಐಸಿಐ ಸೆಕ್ಯೂರಿಟೀಸ್ ತಜ್ಞರ ಪ್ರಕಾರ 2021ರಲ್ಲೂ ಚಿನ್ನ ಹಾಗೂ ಬೆಳ್ಳಿಯ ಏರಿಕೆ ಓಟ ಮುಂದುವರಿಯಲಿದೆ. ಚಿನ್ನ ಪ್ರತಿ 10 ಗ್ರಾಮ್ ಗೆ 65 ಸಾವಿರ ರುಪಾಯಿ ತಲುಪಬಹುದು ಎನ್ನುತ್ತಾರೆ. ಅದೇ ರೀತಿ ಬೆಳ್ಳಿ ಬೆಲೆಯು 90 ಸಾವಿರ ರುಪಾಯಿಯನ್ನು ತಲುಪಬಹುದು ಎಂದು ಹೇಳುತ್ತಾರೆ.

ಜಾಗತಿಕ ಮಾರುಕಟ್ಟೆಯಲ್ಲಿ 2020ನೇ ಇಸವಿಯಲ್ಲಿ ಚಿನ್ನದ ಬೆಲೆ ಶೇಕಡಾ 25ರಷ್ಟು ಹೆಚ್ಚಳ ಕಂಡಿದೆ. ದಶಕಗಳಲ್ಲೇ ಇದು ಒಂದು ವರ್ಷದಲ್ಲಿ ಕಂಡು ಅತಿ ಹೆಚ್ಚಿನ ಗಳಿಕೆ ಪ್ರಮಾಣ ಇದು.
"ಹಸಿರು ತಂತ್ರಜ್ಞಾನದ ಮೇಲೆ ಹೂಡಿಕೆ ಹೆಚ್ಚಾಗಿದೆ. ಅವು ಬೆಳ್ಳಿ ಲೋಹದ ಮೇಲೆ ಅವಲಂಬಿತ ಆಗಿರುವ ತಂತ್ರಜ್ಞಾನ. ಜತೆಗೆ ಡಾಲರ್ ಮೌಲ್ಯ ದುರ್ಬಲವಾಗಿರುವುದರಿಂದ ಇತರ ಕರೆನ್ಸಿಗಳನ್ನು ಇರಿಸಿಕೊಂಡವರ ಪಾಲಿಗೆ ಬೆಳ್ಳಿ ಅಗ್ಗ ಎನಿಸುತ್ತದೆ. ಇದರೊಂದಿಗೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಜಾಗತಿಕವಾಗಿ ಆರ್ಥಿಕ ಪುನಶ್ಚೇತನ ಅನಿಶ್ಚಿತತೆಯಿಂದ ಕೂಡಿದ್ದು, ಸುರಕ್ಷಿತ ಹೂಡಿಕೆಗೆ ಎದುರು ನೋಡುತ್ತಿರುವ ಮನಸ್ಥಿತಿ ಬೆಳ್ಳಿಗೆ ಅನುಕೂಲವಾಗಿ ಪರಿಣಮಿಸುತ್ತದೆ," ಎಂದು ಐಸಿಐಸಿಐ ಸೆಕ್ಯೂರಿಟೀಸ್ ಹೇಳಿದೆ.


Click it and Unblock the Notifications