ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಘೋಷಣೆಯನ್ನು ಮಾಡಿದ್ದರು. ರೈತ ಚಳವಳಿಗೆ ದೊಡ್ಡ ಜಯವಾಗಿತ್ತು ಆದರೆ ಕರ್ನಾಟಕವನ್ನು ತೀವ್ರವಾಗಿ ಟಕ್ಕರ್ ಕೊಡಲು ಆಂಧ್ರ ಪ್ರದೇಶ ಏರೋಸ್ಪೇಸ್ ಜಾಗ ನೀಡಲು ನಾವು ಸಿದ್ಧ ಹೇಳಿದೆ.
ಹೌದು, ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನವನ್ನು ನಿಲ್ಲಿಸುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮಕ್ಕೆ ಸಚಿವ ನಾರಾ ಲೋಕೇಶ್ ಅವರು ಏರೋಸ್ಪೇಸ್ ಉದ್ಯಮವನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರ ಮಾಡಿ ಜಾಗ ನೀಡಲು ನಾವು ಸಿದ್ಧ ಇದ್ದೇವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಆತ್ಮೀಯ ಏರೋಸ್ಪೇಸ್ ಉದ್ಯಮದವರೇ ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನವನ್ನು ನಿಲ್ಲಿಸುವ ಕ್ರಮದ ಬಗ್ಗೆ ಕೇಳಿ ಬೇಸರವಾಗಿತ್ತು. ಆದರೆ ನಿಮ್ಮ ಗುರಿಗೆ ಪೂರಕವಾಗಿ, ನನ್ನ ಬಳಿ ಇನ್ನೂ ಉತ್ತಮ ಆಯ್ಕೆಯಿದೆ. ನೀವು ಆಂಧ್ರಪ್ರದೇಶವನ್ನು ಯಾಕೆ ಪರಿಗಣಿಸಬಾರದು? ಬೆಂಗಳೂರಿಗೆ ಹತ್ತಿರವಾಗಿರುವ 8000 ಎಕರೆಗಳಷ್ಟು ಭೂಮಿ ಮತ್ತು ಅತ್ಯುತ್ತಮ ಪ್ರೋತ್ಸಾಹ ಪ್ಯಾಕೇಜ್‌ಗಳೊಂದಿಗೆ ನಾವು ನಿಮ್ಮಿಗಾಗಿ ಪ್ರೋತ್ಸಾಹಕ ಏರೋಸ್ಪೇಸ್ ನೀತಿಯನ್ನು ಹೊಂದಿದ್ದೇವೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ ಇದನ್ನು ಚರ್ಚಿಸಲು ನಿರೀಕ್ಷಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಘೋಷಿಸಿದರು.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಭೂಮಿ ಬೆಂಗಳೂರಿನ ಸಮೀಪದಲ್ಲಿದೆ. ಅದನ್ನು ಸಕ್ರಿಯವಾಗಿ ಕೃಷಿಗೆ ಬಳಸಲಾಗುತ್ತಿದೆ. ಅನೇಕ ರೈತರ ಜೀವನೋಪಾಯಕ್ಕೆ ಆಧಾರವಾಗಿದೆ. ಅದಕ್ಕಾಗಿಯೇ ನಾವು ಸ್ವಾಧೀನವನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದು ಮಾಹಿತಿಯನ್ನು ತಿಳಿಸಿದ್ಧಾರೆ.
ಅದರಲ್ಲೂ ವಿಮಾನ ನಿಲ್ದಾಣದ ಬಳಿಯ ಹಸಿರು ವಲಯದಲ್ಲಿ ಭೂಮಿ ಇರುವುದರಿಂದ, ರೈತರು ಅದನ್ನು ಸ್ವಾಧೀನಪಡಿಸಿಕೊಳ್ಳದಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ, ಯೋಜನೆಯ ವಿರುದ್ಧ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು ಅದಕ್ಕಾಗಿ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದಿದ್ದಾರೆ.
ಕೈಗಾರಿಕೆಯನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ. ಈ ಭೂಸ್ವಾಧೀನವನ್ನು ಆ ಉದ್ದೇಶಕ್ಕಾಗಿಯೇ ಮಾಡಲಾಗಿತ್ತು ಮತ್ತು ನಾವು ಸೂಕ್ತ ಪರಿಹಾರವನ್ನು ನೀಡುತ್ತೇವೆ. ಯಾರ ಮಾಲೀಕರು ಅದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲವೋ ಅಂತಹ ಯಾವುದೇ ಭೂಮಿಯನ್ನು ನಾವು ಹೊರಗಿಡುತ್ತೇವೆ. ವಾಸ್ತವವಾಗಿ, ನಾವು ಸಂಪೂರ್ಣ ಅಧಿಸೂಚನೆಯನ್ನು ಕೈಬಿಡುತ್ತಿದ್ದೇವೆ ಎಂದು ಮಾಹಿತಿಯನ್ನು ತಿಳಿಸಿದ್ದರು.

ದೇವನಹಳ್ಳಿ ಪ್ರದೇಶದ ರೈತರು ವಿವಿಧ ಗುಂಪುಗಳು ಸೇರಿದಂತೆ ಹೋರಾಟವನ್ನು ಮಾಡಿ ಸರ್ಕಾರವನ್ನು ಒತ್ತಡ ಮಾಡಿರುವುದಕ್ಕೆ ಕರ್ನಾಟಕ ಸರ್ಕಾವು ಈ ನಿರ್ಧಾರಕೆಕ ಬಂದಿದೆ ಎಂದು ಹೇಳಿತ್ತು. ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ನಾಯಕರು ಈ ಫತಿಭಟನೆಗೆ ಸಾಥ್ ಕೊಟ್ಟಿದ್ದರು.
.ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ನಾರಾ ಲೋಕೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ವ್ಯವಹಾರಗಳನ್ನು ಆಕರ್ಷಿಸುವುದು, ಉದ್ಯಮವನ್ನು ಸ್ವಾಗತಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ರೀತಿಯ ಬಗ್ಗೆ ಕರ್ನಾಟಕ ಸರ್ಕಾರವು ನಾರಾ ಲೋಕೇಶ್ ಅವರಿಂದ ಕಲಿತು ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications