ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಕಂಪೆನಿಗಳಲ್ಲಿ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಕಂಪೆನಿಗಳದೊಂದು ಪಟ್ಟಿ ಇಲ್ಲಿ ನೀಡಲಾಗುತ್ತಿದೆ. ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಟಾಪ್ ಹನ್ನೆರಡು ಕಂಪೆನಿಗಳು ಇವು. ಆಸಕ್ತಿಕರ ಸಂಗತಿ ಏನೆಂದರೆ ಹನ್ನೆರಡರಲ್ಲಿ ಎಂಟು ಕಂಪೆನಿ ಯುನೈಟೆಡ್ ಸ್ಟೇಟ್ಸ್ ನದೇ. ಎರಡು ಚೀನಾ, ತಲಾ ಒಂದು ಸೌದಿ ಅರೇಬಿಯಾ ಹಾಗೂ ತೈವಾನ್ ಗೆ ಸೇರಿದವು.
ಟಾಪ್ ಹನ್ನೆರಡು ಕಂಪೆನಿಗಳ ಪಟ್ಟಿ, ಅವುಗಳ ಮಾರುಕಟ್ಟೆ ಮೌಲ್ಯ ಹಾಗೂ ಯಾವ ದೇಶದ್ದು ಎಂಬ ವಿವರ ಹೀಗಿದೆ:
* ಆಪಲ್ (ಯುನೈಟೆಡ್ ಸ್ಟೇಟ್ಸ್)- 2.135 ಲಕ್ಷ ಕೋಟಿ ಯುಎಸ್ ಡಿ
* ಸೌದಿ ಅರಾಮ್ಕೋ (ಸೌದಿ ಅರೇಬಿಯಾ)- 2.049 ಲಕ್ಷ ಕೋಟಿ ಯುಎಸ್ ಡಿ
* ಅಮೆಜಾನ್ (ಯುನೈಟೆಡ್ ಸ್ಟೇಟ್ಸ್)- 1.676 ಲಕ್ಷ ಕೋಟಿ ಯುಎಸ್ ಡಿ
* ಮೈಕ್ರೋಸಾಫ್ಟ್ (ಯುನೈಟೆಡ್ ಸ್ಟೇಟ್ಸ್)- 1.638 ಲಕ್ಷ ಕೋಟಿ ಯುಎಸ್ ಡಿ
* ಆಲ್ಫಾಬೆಟ್ (ಗೂಗಲ್) (ಯುನೈಟೆಡ್ ಸ್ಟೇಟ್ಸ್)- 1.093 ಲಕ್ಷ ಕೋಟಿ ಯುಎಸ್ ಡಿ
* ಫೇಸ್ ಬುಕ್ (ಯುನೈಟೆಡ್ ಸ್ಟೇಟ್ಸ್)- 80 ಸಾವಿರ ಕೋಟಿ ಯುಎಸ್ ಡಿ
* ಅಲಿಬಾಬಾ (ಚೀನಾ)- 76,482 ಕೋಟಿ ಯುಎಸ್ ಡಿ
* ಟೆನ್ಸೆಂಟ್ (ಚೀನಾ)- 68,922 ಕೋಟಿ ಯುಎಸ್ ಡಿ
* ಬರ್ಕ್ ಶೈರ್ ಹಾಥ್ ವೇ (ಯುನೈಟೆಡ್ ಸ್ಟೇಟ್ಸ್)- 50,954.54 ಕೋಟಿ ಯುಎಸ್ ಡಿ
* ವೀಸಾ (ಯುನೈಟೆಡ್ ಸ್ಟೇಟ್ಸ್)- 45,687 ಕೋಟಿ ಯುಎಸ್ ಡಿ
* ಜಾನ್ಸನ್ ಅಂಡ್ ಜಾನ್ಸನ್ (ಯುನೈಟೆಡ್ ಸ್ಟೇಟ್ಸ್)- 40,034 ಕೋಟಿ ಯುಎಸ್ ಡಿ
* ಟಿಎಸ್ ಎಂಸಿ (ಯುನೈಟೆಡ್ ಸ್ಟೇಟ್ಸ್)- 38,358 ಕೋಟಿ ಯುಎಸ್ ಡಿ

ಗೂಗಲ್ (1.09 ಲಕ್ಷ ಕೋಟಿ ಯುಎಸ್ ಡಿ) ಹಾಗೂ ಫೇಸ್ ಬುಕ್ (80 ಸಾವಿರ ಕೋಟಿ ಯುಎಸ್ ಡಿ) ಮಾರುಕಟ್ಟೆ ಮೌಲ್ಯ ಎರಡೂ ಒಟ್ಟು ಲೆಕ್ಕ ಹಾಕಿದರೂ ಆಪಲ್ ಕಂಪೆನಿಯ ಮಾರುಕಟ್ಟೆ ಮೌಲ್ಯ (2.13 ಲಕ್ಷ ಕೋಟಿ ಯುಎಸ್ ಡಿ) ಹೆಚ್ಚಾಗಿದೆ. ಮಾರುಕಟ್ಟೆ ಮೌಲ್ಯದಲ್ಲಿ ಸದ್ಯಕ್ಕೆ ವಿಶ್ವಕ್ಕೆ ನಂಬರ್ ಸ್ಥಾನದಲ್ಲಿ ಇರುವುದು ಆಪಲ್.


Click it and Unblock the Notifications