ದೀಪಾವಳಿ ಪ್ರಯುಕ್ತ ಆಪಲ್ ಇಂಡಿಯಾದಿಂದ ಆಫರ್ ವೊಂದನ್ನು ಘೋಷಣೆ ಮಾಡಲಾಗಿದೆ. ಅದರಂತೆ ಐಫೋನ್ 11 ಖರೀದಿ ಮಾಡಿದಲ್ಲಿ ಏರ್ ಪಾಡ್ ಉಚಿತವಾಗಿ ದೊರೆಯುತ್ತದೆ. ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಆನ್ ಲೈನ್ ಸ್ಟೋರ್ ಆರಂಭಿಸಿತ್ತು ಆಪಲ್. ಅದರಲ್ಲಿ ಆಪಲ್ ಕಂಪೆನಿಯ ವಿವಿಧ ಉತ್ಪನ್ನಗಳು ಹಾಗೂ ಗ್ರಾಹಕರಿಗೆ ಅಗತ್ಯ ಇರುವ ಮಾಹಿತಿ, ಸೇವೆ ದೊರೆಯುತ್ತದೆ. ಇನ್ನು ಈ ಏರ್ ಪಾಡ್ ಆಫರ್ ಅಕ್ಟೋಬರ್ 17ರಿಂದ ಶುರುವಾಗುತ್ತದೆ.
"ಐಫೋನ್ 11 ಖರೀದಿ ಮಾಡಿದಾಗ ಏರ್ ಪಾಡ್ ಪಡೆಯಿರಿ. ನಮ್ಮ ದೀಪಾವಳಿ ಆಫರ್ 17.10.20ರಿಂದ ಆರಂಭವಾಗುತ್ತದೆ," ಎಂದು ಆಪಲ್ ಸ್ಟೋರ್ ನೋಟಿಫಿಕೇಷನ್ ನಲ್ಲಿ ಇದೆ. ಇನ್ನು ಈ ಆಫರ್ ಲಭ್ಯತೆ ಮೇಲೆ ಅವಲಂಬಿಸಿದೆ ಎಂದು ಕೂಡ ತಿಳಿಸಲಾಗಿದೆ.
ಆಪಲ್ ಆನ್ ಲೈನ್ ಸ್ಟೋರ್ ಗಳು ಭಾರತದಲ್ಲಿ ಆರಂಭವಾದ ಮೇಲೆ ಅಮೆಜಾನ್.ಕಾಮ್ ಮತ್ತು ಫ್ಲಿಪ್ ಕಾರ್ಟ್ ನಂಥ ಇ ಕಾಮರ್ಸ್ ಕಂಪೆನಿಗಳಿಗೆ ಪ್ರಬಲ ಸ್ಪರ್ಧೆ ಒಡ್ಡುತಿದೆ. ಹಬ್ಬಗಳ ಸೀಸನ್ ನಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಘೋಷಣೆ ಮಾಡುತ್ತವೆ.

ಈ ಹಬ್ಬದ ಸೀಸನ್ ನಲ್ಲಿ ಅಮೆಜಾನ್ ನಿಂದ ಐಫೋನ್ 11 ಅನ್ನು 50,000 ರುಪಾಯಿಗಿಂತ ಕಡಿಮೆ ಬೆಲೆ ಮಾರಾಟ ಮಾಡಲಿದೆ. ಐಫೋನ್ 11ರ ಆರಂಭಿಕ ಅವತರಣಿಕೆ ಬೆಲೆಯು 68,300 ರುಪಾಯಿ ಇದೆ. ಇನ್ನು 128GB ಹಾಗೂ 256GB ಫೋನ್ ಬೆಲೆ ಕ್ರಮವಾಗಿ 73,600 ರು. ಹಾಗೂ 84,100 ರು. ಇದೆ.
ಏರ್ ಪಾಡ್ ಬೆಲೆ 14,900 ರುಪಾಯಿ ಇದೆ. ಏರ್ ಪಾಡ್ ಹಾಗೂ ವಯರ್ ಲೆಸ್ ಚಾರ್ಜಿಂಗ್ ಕೇಸ್ ಬೆಲೆ 18,900 ರುಪಾಯಿ ಇದೆ. ಇನ್ನು ಏರ್ ಪಾಡ್ ಪ್ರೋಗೆ 24,900 ರುಪಾಯಿ ಇದೆ.
ಐಫೋನ್ 12 ಬಿಡುಗಡೆ
ಆಪಲ್ ಐಫೋನ್ 12 ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರ ಮಂಗಳವಾರ (ಅಕ್ಟೋಬರ್ 13, 2020) ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ) ಆಗಲಿದೆ. ಸಾಮಾನ್ಯವಾಗಿ ಆಪಲ್ ಕಂಪೆನಿಯ ಹೊಸ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗುತ್ತಿತ್ತು. ಅಕ್ಟೋಬರ್ ನಲ್ಲಿ ಮಾರಾಟ ಆರಂಭ ಆಗುತ್ತಿತ್ತು. ಆದರೆ ಈ ಸಲ ಒಂದು ತಿಂಗಳು ತಡವಾಗಿದೆ.


Click it and Unblock the Notifications