ಭಾರತದಲ್ಲಿ ಆಪಲ್ ನ ಸ್ಮಾರ್ಟ್ ಸ್ಪೀಕರ್ ಹೋಮ್ ಪಾಡ್ ಈಗ ದೊರೆಯುತ್ತಿದ್ದು, 19,900 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದೇ ಹೋಮ್ ಪಾಡ್ ನ ಬೆಲೆ ಯು.ಎಸ್.ನಲ್ಲಿ ಇಪ್ಪತ್ತೊಂದು ಸಾವಿರ ರುಪಾಯಿಯಷ್ಟಿದೆ. ಹೋಮ್ ಪಾಡ್ ಅನ್ನು ಮೊದಲಿಗೆ ಯು.ಎಸ್., ಯು.ಕೆ. ಮತ್ತು ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು.
ಭಾರತದಲ್ಲಿ ಮಾರಾಟ ಆರಂಭಿಸುವ ಮುನ್ನ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸಲಕರಣೆಯು ಭಾರತೀಯ ಇಂಗ್ಲಿಷ್ 'ಸಿರಿ' ಧ್ವನಿಯನ್ನು ಸಪೋರ್ಟ್ ಮಾಡುತ್ತದೆ. ಅದ್ಭುತ ಗುಣಮಟ್ಟದ ಧ್ವನಿಯನ್ನು ಹೊಮ್ಮಿಸುತ್ತದೆ. ಇದರ ಬಳಕೆದಾರರು ಆಪಲ್ ಮ್ಯೂಸಿಕ್ ಬಳಸಬಹುದಾಗಿದ್ದು, ಅದರಲ್ಲಿ ಅರವತ್ತು ಮಿಲಿಯನ್ ಹಾಡುಗಳಿವೆ.
ಹೋಮ್ ಪಾಡ್ ನಲ್ಲಿ ಆಪಲ್ ರೂಪಿಸಿದ ಆಡಿಯೋ ತಂತ್ರಜ್ಞಾನ ಇದ್ದು, ಅತ್ಯಾಧುನಿಕ ಸಾಫ್ಟ್ ವೇರ್ ಮೂಲಕ ಸೂಕ್ಷ್ಮ ಶಬ್ದಗಳನ್ನೂ ಕೇಳಬಹುದು. ಒಂದು ಕೋಣೆಯಲ್ಲಿ ಕೂತು ಕೇಳಬಹುದಾದಷ್ಟು ಸಂಗೀತ ಹೊಮ್ಮುತ್ತದೆ. ಹದಿನೆಂಟು ಸೆಂಟಿಮೀಟರ್ ಎತ್ತರದ್ ಈ ಹೋಮ್ ಪಾಡ್ ಅನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು.

ಈ ಹೋಮ್ ಪಾಡ್ ನ ಮೇಲ್ಭಾಗದಲ್ಲಿ ಮೇಲ್ಮುಖವಾಗಿ ವೂಫರ್ ಅಳವಡಿಸಲಾಗಿದೆ. ಯಾವುದೇ ಸಾಂಪ್ರದಾಯಿಕ ಸ್ಪೀಕರ್ ಗಿಂತ ಉತ್ತಮ ಗುಣಮಟ್ಟದ ಸಂಗೀತ ಹೊಮ್ಮುತ್ತದೆ. ಈ ಹೋಮ್ ಪಾಡ್ ಬಿಳಿ ಮತ್ತು ಸ್ಪೇಸ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಈ ಹೋಮ್ ಪಾಡ್ ಅನ್ನು ಮನೆಯ ವಿವಿಧ ಕೋಣೆಯಲ್ಲಿ ಅಳವಡಿಸಬಹುದು. ಏರ್ ಪ್ಲೇ ಮೂಲಕ ಒಂದು- ಮತ್ತೊಂದನ್ನು ಸಂಪರ್ಕಿಸುತ್ತದೆ. ಆ ಮೂಲಕ ಸಂಗೀತ ಪ್ಲೇ ಮಾಡಬಹುದು.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications