ಆಪಲ್ ಕಂಪೆನಿಯಿಂದ ಶೀಘ್ರದಲ್ಲೇ ಮುಂದಿನ ತಲೆಮಾರಿನ ಐಫೋನ್ ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಹಿಂದೆ ಬಂದಿರುವ ವದಂತಿ ಪ್ರಕಾರ, ಅಮೆರಿಕನ್ ಮೂಲದ ಆಪಲ್ ನಿಂದ ನಾಲ್ಕು ಹೊಸ ಐಫೋನ್ ಗಳನ್ನು ಬಿಡುಗಡೆ ಮಾಡಬಹುದು ಎಂದಿತ್ತು. ಆದರೆ ಈಚಿನ ವರದಿಗಳು ತಿಳಿಸುವಂತೆ ಹೊಸ ಐಫೋನ್ 12ರ ಸರಣಿಯಲ್ಲಿ ನಾಲ್ಕರ ಬದಲಿಗೆ ಐದು ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಬಹುದು.
ವಿನ್ ಫ್ಯೂಚರ್ ವರದಿ ತಿಳಿಸಿರುವಂತೆ, ಹೊಸ ಐಫೋನ್ 12ರ ಸರಣಿಯಲ್ಲಿ ಐದು ಹೊಸ ಐಫೋನ್ ಮಾಡೆಲ್ ಗಳು ಬರಲಿವೆ. ಆ ವರದಿಯಲ್ಲಿ ತಿಳಿಸಿರುವಂತೆ, ಐದನೇ ಫೋನ್ ಅಗ್ಗದ್ದಾಗಿರುತ್ತದೆ ಮತ್ತು ಹೊಸ ಸರಣಿಯಲ್ಲಿ ಎಂಟ್ರಿ- ಲೆವೆಲ್ ಸ್ಮಾರ್ಟ್ ಫೋನ್ ಆಗಿರುತ್ತದೆ. ಮತ್ತೊಂದು ವರದಿಯಲ್ಲಿ ಈಗಾಗಲೇ ಬಂದಿದ್ದು, ಐಫೋನ್ 12 ಮಿನಿ 5.4 ಇಂಚಿನ ಸ್ಕ್ರೀನ್ ಇರಲಿದೆ.

ಹೊಸ ಎಂಟ್ರಿ ಲೆವೆಲ್ ಐಫೋನ್ 12 ಮೂರು ಸಂಗ್ರಹ ಸಾಮರ್ಥ್ಯದೊಂದಿಗೆ ಬರಲಿದೆ: 64GB, 128GB ಹಾಗೂ 256GB ಇರಲಿದೆ. ಆದರೆ ಬಣ್ಣಗಳ ವಿಚಾರಕ್ಕೆ ಬಂದರೆ, ಕಪ್ಪು, ಬಿಳ್ಳಿ, ನೀಲಿ, ಕೆಂಪು, ಹಳದಿ ಹಾಗೂ ಹವಳದ ಬಣ್ಣದಲ್ಲಿ ಖರೀದಿಗೆ ದೊರೆಯಲಿದೆ ಎಂಬ ನಿರೀಕ್ಷೆಯಿದೆ. ಅಗ್ಗದ ಐಫೋನ್ 12 ಹೊರತುಪಡಿಸಿ ಉಳಿದವು ಕಪ್ಪು, ಬಿಳಿ ಹಾಗೂ ಸಿಲ್ವರ್ ಬಣ್ಣದಲ್ಲಿ ಬರಲಿದೆ. ಇನ್ನು ಸಂಗ್ರಹ ಸಾಮರ್ಥ್ಯದ ವಿಚಾರಕ್ಕೆ ಬಂದರೆ, 128GB, 256GB ಹಾಗೂ 516GB ಇರಲಿದೆ.


Click it and Unblock the Notifications