ಆಪಲ್ ಕಂಪೆನಿಯಿಂದ ಐಫೋನ್12, ಐಫೋನ್ 12 ಪ್ರೊ, ಐಫೋನ್ 12 ಪ್ರೊ ಮ್ಯಾಕ್ಸ್ ಹಾಗೂ ಐಫೋನ್ 12 ಮಿನಿ ಹೀಗೆ ನಾಲ್ಕು ಹೊಸ ಐಫೋನ್ ಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ವಿಶೇಷ "Hi Speed" ವರ್ಚುವಲ್ ಕಾರ್ಯಕ್ರಮದಲ್ಲಿ ಮಂಗಳವಾರ ರಾತ್ರಿ ಬಿಡುಗಡೆ ಮಾಡಲಾಯಿತು.
ಭಾರತದಲ್ಲಿ ಬೆಲೆ ಎಷ್ಟು ಹಾಗೂ ಯಾವಾಗಿನಿಂದ ಖರೀದಿಗೆ ಲಭ್ಯ ಇತ್ಯಾದಿ ಮಾಹಿತಿಯನ್ನು ಸಹ ಘೋಷಣೆ ಮಾಡಲಾಯಿತು. ಭಾರತದ ಮಾರುಕಟ್ಟೆಯಲ್ಲಿ ಆರಂಭದಲ್ಲೇ ಹೊಸ ಐಫೋನ್ ಗಳು ಖರೀದಿಗೆ ಲಭ್ಯವಾಗಲಿವೆ. ಆರಂಭಿಕ ಮಟ್ಟದ ಐಫೋನ್ 12 ಮಿನಿ ಬೆಲೆ ಭಾರತದಲ್ಲಿ 69,900 ರುಪಾಯಿಯಿಂದ ಶುರುವಾಗುತ್ತದೆ. ಇನ್ನು ಆಪಲ್ ಹೈಯರ್ ಎಂಡ್ ಐಫೋನ್ 12 ಪ್ರೊ ಮ್ಯಾಕ್ಸ್ ಬೆಲೆ ರು. 1,59,900 ಆಗುತ್ತದೆ.
ಆಪಲ್ ನಿಂದ ಎಲ್ಲದರಲ್ಲೂ ಸೂಪರ್ ರೆಟಿನಾ XDR OLED ಡಿಸ್ ಪ್ಲೇ ತರಲಾಗುತ್ತಿದೆ. ಈ ಹಿಂದೆ ದುಬಾರಿ ಹಾಗೂ ಪ್ರೀಮಿಯಂ 'ಪ್ರೊ' ಮಾಡೆಲ್ ಗಳಲ್ಲಿ ಮಾತ್ರ ಇದನ್ನು ಬಳಸಲಾಗುತ್ತಿತ್ತು. ಎಲ್ಲ ಹೊಸ ಐಫೋನ್ ಗಳಲ್ಲಿ 5G ಇರುತ್ತದೆ. ಇದೇ ಮೊದಲ ಬಾರಿಗೆ ಐಫೋನ್ ನಲ್ಲಿ ಅಳವಡಿಸಲಾಗುತ್ತಿದೆ.

ಇನ್ನು ಡಿಸೈನ್ ವಿಚಾರಕ್ಕೆ ಬಂದರೆ, ಐಫೋನ್ X ನಂತರ, ಅಂದರೆ 2017ರ ನಂತರ ಬದಲಾವಣೆ ಮಾಡುತ್ತಿದೆ. ಹಾರ್ಡ್ ವೇರ್ ನಲ್ಲಿ ಬದಲಾವಣೆ, ಫೋಟೋಗ್ರಫಿ ಉತ್ತಮಗೊಳಿಸಿರುವುದು ಸೇರಿ, ಹೊಸ ಬಣ್ಣಗಳೊಂದಿಗೆ ಹೊರತರುತ್ತಿದೆ.
ಭಾರತದಲ್ಲಿ ಐಫೋನ್ 12 ಸರಣಿಯ ಬೆಲೆ
ಐಫೋನ್ 12 ಪ್ರೊ ಮ್ಯಾಕ್ಸ್
128GB: Rs 1,29,900
256GB: Rs 1,39,900
512GB: Rs 1,59,900
ಐಫೋನ್ 12 ಪ್ರೊ
128GB: Rs 1,19,900
256GB: Rs 1,29,900
512GB: Rs 1,49,900
ಐಫೋನ್ 12
64GB: Rs 79,900
128GB: Rs 84,900
256GB: Rs 94,900
ಐಫೋನ್ 12 ಮಿನಿ
64GB: Rs 69,900
128GB: Rs 74,900
256GB: Rs 84,900
ಐಫೋನ್ 12 ಸರಣಿ ಭಾರತದಲ್ಲಿ ದೊರೆಯುವ ದಿನಾಂಕ
ಐಫೋನ್ 12 ಪ್ರೊ ಮ್ಯಾಕ್ಸ್: ನವೆಂಬರ್ 13
ಐಫೋನ್ 12 ಪ್ರೊ: ಅಕ್ಟೋಬರ್ 30
ಐಫೋನ್ 12: ಅಕ್ಟೋಬರ್ 30
ಐಫೋನ್ 12 ಮಿನಿ: ನವೆಂಬರ್ 13
ಐಫೋನ್ 12 ಸರಣಿಯ ಬಣ್ಣಗಳು
ಐಫೋನ್ 12 ಪ್ರೊ ಮ್ಯಾಕ್ಸ್: ಗ್ರಾಫೈಟ್, ಸಿಲ್ವರ್, ಗೋಲ್ಡ್, ಪೆಸಿಫಿಕ್ ಬ್ಲೂ
ಐಫೋನ್ 12 ಪ್ರೊ: ಗ್ರಾಫೈಟ್, ಸಿಲ್ವರ್, ಗೋಲ್ಡ್, ಪೆಸಿಫಿಕ್ ಬ್ಲೂ
ಐಫೋನ್ 12: ಬ್ಲೂ, ಹಸಿರು, ಕಪ್ಪು, ಬಿಳಿ, PRODUCT(RED)
ಐಫೋನ್ 12 ಮಿನಿ: ನೀಲಿ, ಹಸಿರು, ಕಪ್ಪು, ಬಿಳಿ, PRODUCT(RED)
ಐಫೋನ್ 12 ಸರಣಿಯ ಟೆಕ್ನಿಕಲ್ ಸ್ಪೆಸಿಫಿಕೇಷನ್
ಐಫೋನ್ 12 ಮಿನಿ 5.4-ಇಂಚಿನ ಡಿಸ್ ಪ್ಲೇ, ಐಫೋನ್ 12 ಹಾಗೂ ಐಫೋನ್ 12 ಪ್ರೊ ಎರಡರಲ್ಲೂ 6.1-ಇಂಚಿನ ಡಿಸ್ ಪ್ಲೇ, ಐಫೋನ್ 12 ಪ್ರೊ ಮ್ಯಾಕ್ಸ್ ನಲ್ಲಿ 6.7 ಇಂಚು ಡಿಸ್ ಪ್ಲೇ. ಐಫೋನ್ 12ರ ಸರಣಿಯ ಎಲ್ಲ ಫೋನ್ ನಲ್ಲೂ OLED ಸ್ಕ್ರೀನ್ ಬರುತ್ತದೆ.
ಎಲ್ಲ ಫೋನ್ ನಲ್ಲೂ A14 ಬಯೋನಿಕ್ ಚಿಪ್. 12 ಪ್ರೊ ಮತ್ತು 12 ಪ್ರೊ ಮ್ಯಾಕ್ಸ್ ನಲ್ಲಿ ಮೂರು ಕ್ಯಾಮೆರಾ (12MP ವೈಡ್+12MP ಅಲ್ಟ್ರಾ-ವೈಡ್-ಆಂಗಲ್+12MP ಟೆಲಿಫೋಟೀ) ಜತೆಗೆ LIDAR ಸೆನ್ಸರ್. ಐಫೋನ್ 12 ಮತ್ತು ಐಫೋನ್ 12 ಮಿನಿಗೆ ಎರಡು ಕ್ಯಾಮೆರಾ (12MP ವೈಡ್+12MP ಅಲ್ಟ್ರಾ-ವೈಡ್-ಆಂಗಲ್) ಹಿಂಬದಿಯಲ್ಲಿ. ಮುಂಭಾಗದಲ್ಲಿ ಎಲ್ಲ ಫೋನ್ ನಲ್ಲಿ 12MP ಟ್ರೂ ಡೆಪ್ತ್ ಕ್ಯಾಮೆರಾ ಇರುತ್ತದೆ.


Click it and Unblock the Notifications