ಇದೇ ಸೆಪ್ಟೆಂಬರ್ 15ನೇ ತಾರೀಕಿನಂದು ಆಪಲ್ ಕಂಪೆನಿಯಿಂದ ಆನ್ ಲೈನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೊಸ ಐಫೋನ್ ಗಳು ಹಾಗೂ ಆಪಲ್ ವಾಚ್ ಗಳ ಮಾಹಿತಿ ಬಹಿರಂಗ ಮಾಡುವ ನಿರೀಕ್ಷೆ ಇದೆ. ಆ ಕಾರ್ಯಕ್ರಮದ ನೇರ ಪ್ರಸಾರವನ್ನು ಆಪಲ್ ಕಂಪೆನಿಯ ವೆಬ್ ಸೈಟ್ ನಲ್ಲಿ ಮಾಡಲಾಗುವುದು.
ಸಾಮಾನ್ಯವಾಗಿ ಆಪಲ್ ಕಂಪೆನಿಯ ಇಂಥ ಕಾರ್ಯಕ್ರಮಗಳನ್ನು ಕ್ಯಾಲಿಫೋರ್ನಿಯಾ ಮೂಲದ ಕುಪರ್ಟಿನೋದಲ್ಲಿ ಅಥವಾ ಯು.ಎಸ್. ಸಿಲಿಕಾನ್ ವ್ಯಾಲಿಯ ಇತರ ಸ್ಥಳಗಳಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಬಿಕ್ಕಟ್ಟು ಇರುವುದರಿಂದ ಆನ್ ಲೈನ್ ನಲ್ಲಿ ಮಾತ್ರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಳೆದ ಜೂನ್ ನಲ್ಲಿ ನಡೆದ ಆಪಲ್ ಡೆವಲಪರ್ ಗಳ ಸಮಾವೇಶ ವರ್ಚುವಲ್ ಕಾರ್ಯಕ್ರಮ ಆಗಿತ್ತು. ಅದು ಯಶಸ್ವಿ ಆಗಿತ್ತು.
ನಾಲ್ಕು 5G ಐಫೋನ್ ಗಳು ಹಾಗೂ ಆಪಲ್ ವಾಚ್
ಸೆಪ್ಟೆಂಬರ್ 15ನೇ ತಾರೀಕಿನಂದು ನಡೆಯುವ ಕಾರ್ಯಕ್ರಮ ಆಪಲ್ ಕಂಪೆನಿ ಪಾಲಿಗೆ ಈ ವರ್ಷದ ಅತಿ ಮುಖ್ಯ ಕಾರ್ಯಕ್ರಮ ಆಗಲಿದೆ. ನಾಲ್ಕು 5G ಐಫೋನ್ ಗಳು ಹಾಗೂ ಆಪಲ್ ವಾಚ್ ಗಳ ಬಗ್ಗೆ ಕಂಪೆನಿ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಹೊಸ ಹ್ಯಾಂಡ್ ಸೆಟ್ ಗಳ ಡಿಸೈನ್ ಐಪ್ಯಾಡ್ ಪ್ರೋ ಮಾದರಿಯಲ್ಲೇ ಇರುತ್ತದೆ ಹಾಗೂ ಕ್ಯಾಮೆರಾ ಗುಣಮಟ್ಟ ಮತ್ತೂ ಅಪ್ ಗ್ರೇಡ್ ಆಗಿರುತ್ತದೆ.
ಸಣ್ಣ ಗಾತ್ರದ ಹೋಮ್ ಪಾಡ್
ಇನ್ನು ಆಪಲ್ ನಿಂದ ಹೊಸ ಹೈ ಎಂಡ್ ಹಾಗೂ ಲೋ ಎಂಡ್ ವಾಚ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಇದರ ಜತೆಗೆ ಮತ್ತೆ ಡಿಸೈನ್ ಮಾಡಲಾದ ಐಪ್ಯಾಡ್ ಏರ್ ಕೂಡ ತಯಾರಿಸಲಾಗುತ್ತಿದೆ. ಇದರೊಂದಿಗೆ ಸಣ್ಣ ಗಾತ್ರದ ಹೋಮ್ ಪಾಡ್ ಮತ್ತು ಹೆಡ್ ಫೋನ್ ಗಳು ಕೂಡ ಸಿದ್ಧಗೊಳ್ಳುತ್ತಿದೆ. ಇವುಗಳೆಲ್ಲದರ ಘೋಷಣೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಅಕ್ಟೋಬರ್ ತನಕ ಐಫೋನ್ ಗಳ ಡೆಲಿವರಿ ಮಾಡುವ ಇರಾದೆ ಆಪಲ್ ಗೆ ಇಲ್ಲ.
ಸಾಫ್ಟ್ ವೇರ್ ಅಪ್ ಡೇಟ್ ಈ ತಿಂಗಳು ಬಿಡುಗಡೆ
ಇದೇ ಮೊದಲ ಬಾರಿಗೆ ಸ್ವತಃ ಆಪಲ್ ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುವ ಮ್ಯಾಕ್ ಘೋಷಿಸುವ ಯೋಜನೆ ಇದೆ. ಈವರೆಗೆ ಇಂಟೆಲ್ ಕಾರ್ಪೊರೇಷನ್ ನದು ಬಳಸಲಾಗುತ್ತಿತ್ತು. ಇನ್ನು ಐಫೋನ್ ಮತ್ತು ಐಪ್ಯಾಡ್ ಸಾಫ್ಟ್ ವೇರ್ ಅಪ್ ಡೇಟ್ ಕೂಡ ಬಾಕಿ ಇದ್ದು, ಅದು ಈ ತಿಂಗಳು ಬಿಡುಗಡೆ ಆಗಲಿದೆ.


Click it and Unblock the Notifications