ಆಪಲ್ ನಿಂದ ವಾಚ್ ಸೀರೀಸ್ 6, ಐಪ್ಯಾಡ್ ಏರ್ ಬಿಡುಗಡೆ

ಆಪಲ್ ನಿಂದ ಮಂಗಳವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ವಾಚ್ ಹಾಗೂ ಐಪ್ಯಾಡ್ ಮಾಹಿತಿಯನ್ನು ಬಹಿರಂಗ ಪಡಿಸಲಾಯಿತು. ಆಪಲ್ ವಾಚ್ ಸಿರೀಸ್ 6ರ ಬಗ್ಗೆ ಕಂಪೆನಿಯ ಸಿಊ ಜೆಫ್ ವಿಲಿಯಮ್ಸ್ ಮಾಹಿತಿಯನ್ನು ನೀಡಿದರು. ಈ ಉತ್ಪನ್ನವು ಬ್ಲ್ಯೂ ಅಲ್ಯೂಮಿನಿಯಂ, ನ್ಯೂ ಗ್ರಾಫೈಟ್ ಮತ್ತು ನ್ಯೂ ಪ್ರಾಡಕ್ಟ್ ರೆಡ್ ನಲ್ಲಿ ಬರಲಿದೆ ಎಂದರು.

ವಾಚ್ ಸಿರೀಸ್ 6 ಹದಿನೈದು ಸೆಕೆಂಡ್ ನೊಳಗೆ ರಕ್ತದೊಳಗಿನ ಆಮ್ಲಜನಕವನ್ನು ತಿಳಿಯಲು ಸಹಾಯ ಮಾಡುತ್ತದೆ. ಈಗಾಗಲೇ ಆಪಲ್ ನಲ್ಲಿ ಇಸಿಜಿ, ಹಾರ್ಟ್ ರೇಟ್ ಮಾನಿಟರ್, ಫಿಟ್ ನೆಸ್ ಟ್ರ್ಯಾಕರ್ ನಂಥ ಫೀಚರ್ ಗಳಿವೆ.

ಹಲವು ಆರೋಗ್ಯ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸಿರುವ ಆಪಲ್ ಗೆ ರಕ್ತದೊಳಗಿನ ಆಮ್ಲಜನಕ ಪ್ರಮಾಣ ಅಳೆಯುವುವುದು ಹಾಗೂ ಎದೆ ಬಡಿತವನ್ನು ತಿಳಿಯಲು ಅವು ಸಹಾಯ ಮಾಡುತ್ತವೆ. ಆ ಮೂಲಕ ಬಳಕೆದಾರರು ಆರೋಗ್ಯವಾಗಿರಲು ನೆರವಾಗುತ್ತದೆ. ವಾಚ್ ಸಿರೀಸ್ 6 ಜಿಪಿಎಸ್ ಮಾಡೆಲ್ ಗೆ 40,900 ರುಪಾಯಿಯಾದರೆ, ಜಿಪಿಎಸ್ ಹಾಗೂ ಸೆಲ್ಯುಲಾರ್ ಮಾಡೆಲ್ ಗೆ 49,900 ರುಪಾಯಿ ಆಗುತ್ತದೆ. ಕಡಿಮೆ ಬೆಲೆಯ ಆಪಲ್ ವಾಚ್ ಎಸ್ ಇ ಕೂಡ ಬಿಡುಗಡೆ ಮಾಡಲಾಗುವುದು.

ಆಪಲ್ ನಿಂದ ವಾಚ್ ಸೀರೀಸ್ 6, ಐಪ್ಯಾಡ್ ಏರ್ ಬಿಡುಗಡೆ

ಆಪಲ್ ವಾಚ್ ಎಸ್ ಇ (ಜಿಪಿಎಸ್) 29,900 ರುಪಾಯಿಯಾದರೆ, ಜಿಪಿಎಸ್ ಹಾಗೂ ಸೆಲ್ಯುಲಾರ್ ನದು 33,900 ಆಗುತ್ತದೆ. ಸದ್ಯದಲ್ಲೇ ಆಪಲ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯ ಆಗಲಿವೆ. ಇನ್ನು ಆಪಲ್ ವಾಚ್ ಸಿರೀಸ್ 3 ಮುಂದುವರಿಯಲಿದ್ದು, ಬೆಲೆ $199 ಇರಲಿದೆ. ಎರಡೂ ವಾಚ್ ಗಳಿಗೆ ಬುಧವಾರದಿಂದಲೇ ಆರ್ಡರ್ ಮಾಡಬಹುದು. ಶುಕ್ರವಾರದಿಂದ ಖರೀದಿಗೆ ಸಿಗಲಿದೆ.

ಆಪಲ್ ಸಿಇಒ ಟಿಮ್ ಕುಕ್ ಹೊಸ ಐಪ್ಯಾಡ್ ಪರಿಚಯಿಸಿದರು. ಹತ್ತು ವರ್ಷದಲ್ಲಿ ಐವತ್ತು ಕೋಟಿಗೂ ಹೆಚ್ಚು ಐಪ್ಯಾಡ್ ಮಾರಾಟ ಆಗಿದೆ. ಐಪ್ಯಾಡ್ 8th Gen, ಜತೆಗೆ iPadOS 14, ಕೀ ಬೋರ್ಡ್ ಮತ್ತು ಆಪಲ್ ಪೆನ್ಸಿಲ್ ಜತೆ ಕೆಲಸ ಮಾಡುತ್ತದೆ. ಇದರ ಬೆಲೆ $329. ಎಜುಕೇಷನ್-ವರ್ಷಬ್ ಬೆಲೆ $299. ಯುಎಸ್ ನಲ್ಲಿ ಆರ್ಡರ್ ಗಳು ಇಂದಿನಿಂದ ಆರಂಭವಾಗಲಿದೆ. ಶುಕ್ರವಾರದಿಂದ ಖರೀದಿಗೆ ಲಭ್ಯವಾಗಲಿದೆ.

"ಸಂಪೂರ್ಣ ಹೊಸ ಡಿಸೈನ್" ಐಪ್ಯಾಡ್ ಏರ್ 10.9 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ ಪ್ಲೇ ಕೂಡ ಬರಲಿದೆ. ಯುಎಸ್ ಬಿ- ಸಿ ಪೋರ್ಟ್ ಇದರ ಜತೆ ಇರಲಿದೆ. ಫ್ರಂಟ್ ಕ್ಯಾಮೆರಾ 7 ಮೆಗಾಪಿಕ್ಸೆಲ್, ಹಿಂಬದಿಯಲ್ಲಿ 12 ಎಂಪಿ, 4K ವಿಡಿಯೋ ಸಪೋರ್ಟ್ ಮಾಡುತ್ತದೆ. ಬುಧವಾರದಂದು ಐಒಎಸ್ 14 ಬಿಡುಗಡೆ ಆಗಲಿದೆ. ಇದರ ಜತೆಗೆ ವಾಚ್ ಒಎಸ್ 7 ಮತ್ತು ಟಿವಿಒಎಸ್ 14 ಕೂಡ ಬಿಡುಗಡೆ ಆಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+