ಸ್ಟೀವ್ ಜಾಬ್ಸ್ ನಂತರ ಆಪಲ್ ಕಂಪೆನಿಯ ಸಿಇಒ ಜವಾಬ್ದಾರಿ ವಹಿಸಿಕೊಂಡ ಟಿಮ್ ಕುಕ್, ಇದೀಗ ಶತಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ. ತಮ್ಮ ಹುದ್ದೆಯನ್ನು ನಿರ್ವಹಿಸುತ್ತಾ ಒಂಬತ್ತು ವರ್ಷ ಕಳೆದಿದ್ದಾರೆ ಕುಕ್. ಆಪಲ್ ಕಂಪೆನಿ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮೃತಪಟ್ಟಾಗ ಕಂಪೆನಿ ಮೌಲ್ಯ 350 ಬಿಲಿಯನ್ ಡಾಲರ್ ಇತ್ತು.
ಜೂನ್ ತ್ರೈಮಾಸಿಕದಲ್ಲಿ ಉತ್ತಮ ಹಣಕಾಸು ಫಲಿತಾಂಶ ಹಾಗೂ ಇತರ ಸಕಾರಾತ್ಮಕ ಬೆಳವಣಿಗೆ ಕಾರಣಕ್ಕೆ ಆಪಲ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.90 ಲಕ್ಷ ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಕಳೆದ ವಾರ ಸೌದಿ ಅರಾಮ್ಕೋವನ್ನು ಮೀರಿಸಿದ ಆಪಲ್, ಸಾರ್ವಜನಿಕವಾಗಿ ಲಿಸ್ಟ್ ಆದ ಪೈಕಿ ವಿಶ್ವದಲ್ಲಿಯೇ ಅತ್ಯಂತ ಮೌಲ್ಯಯುತ ಕಂಪೆನಿ ಎನಿಸಿಕೊಂಡಿತು.
ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ, ಟಿಮ್ ಕುಕ್ ನಿವ್ವಳ ಆಸ್ತಿ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್ ದಾಟಿದೆ. 59 ವರ್ಷದ ಕುಕ್ ಅವರದು ಆಪಲ್ ಕಂಪೆನಿಯ ಸ್ಥಾಪನೆಯಲ್ಲಿ ಯಾವ ಪಾತ್ರವೂ ಇಲ್ಲ. 2015ರಲ್ಲಿ ಕುಕ್ ಘೋಷಣೆ ಮಾಡಿದ್ದ ಪ್ರಕಾರ, ತಮ್ಮ ಆಸ್ತಿಯನ್ನು ದಾನ ಮಾಡುತ್ತೇನೆ ಎಂದಿದ್ದರು. ಒಂದು ವೇಳೆ ತಮ್ಮ ಪಾಲಿನ ಆಪಲ್ ಕಂಪೆನಿ ಷೇರನ್ನು ಈಗಾಗಲೇ ಮಾರಾಟ ಮಾಡಿದ್ದಲ್ಲಿ ಅವರ ಆಸ್ತಿ ಮೌಲ್ಯ ನೂರು ಕೋಟಿ ಅಮೆರಿಕನ್ ಡಾಲರ್ ಗೂ ಕಡಿಮೆ ಇರಬಹುದು.

ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಫೇಸ್ ಬುಕ್, ಆಪಲ್, ಅಮೆಜಾನ್, ನೆಟ್ ಫ್ಲಿಕ್ಸ್, ಗೂಗಲ್ ಕಂಪೆನಿಯ ಷೇರಿನ ಮೌಲ್ಯ ಹೆಚ್ಚಾಗಿದೆ. ಆ ಮೂಲಕ ಕಂಪೆನಿಗಳ ಸಿಇಒ ನಿವ್ವಳ ಆಸ್ತಿಯೂ ಹೆಚ್ಚಾಗಿದೆ. ಅಂದಹಾಗೆ ಟಿಮ್ ಕುಕ್ ಆಸ್ತಿಯ ಲೆಕ್ಕಾಚಾರದಲ್ಲಿ ಬಹು ಪಾಲು ಬಂದಿರುವುದು 1998ರಲ್ಲಿ ಆಪಲ್ ಸೇರಿದಾಗಿನಿಂದ ಬಂದಿರುವ ಈಕ್ವಿಟಿ ಷೇರುಗಳಿಂದ.


Click it and Unblock the Notifications