ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 1 ರಂದು 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿಯ ಬ್ಯಾಂಕ್ ನೋಟುಗಳು ಅಥವಾ ಚಲಾವಣೆಯಲ್ಲಿರುವ ಶೇಕಡ 93 ರಷ್ಟು ಕರೆನ್ಸಿ ನೋಟುಗಳು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ ಎಂದು ಹೇಳಿದೆ.
ಇದರ ಪರಿಣಾಮವಾಗಿ, ಆಗಸ್ಟ್ 31 ರಂದು ವಹಿವಾಟಿನ ಕೊನೆಯಲ್ಲಿ ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳು 0.24 ಲಕ್ಷ ಕೋಟಿ ರೂಪಾಯಿ ಆಗಿದೆ. ಸ್ವೀಕರಿಸಿದ ಒಟ್ಟು ನೋಟುಗಳಲ್ಲಿ, ಸುಮಾರು ಶೇಕಡ 87ರಷ್ಟು ಡೆಪಾಸಿಟ್ ರೂಪದಲ್ಲಿ ಮತ್ತು ಉಳಿದ ಶೇಕಡ 13ರಷ್ಟು ನೋಟುಗಳನ್ನು ಬದಲಾವಣೆ ಮಾಡಲಾಗಿದೆ.

2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಡೆಪಾಸಿಟ್ ಮಾಡಲು ಉಳಿದ ಅವಧಿಯನ್ನು ಬಳಸಿಕೊಳ್ಳುವಂತೆ ಕೇಂದ್ರ ಬ್ಯಾಂಕ್ ಸಾರ್ವಜನಿಕರನ್ನು ಒತ್ತಾಯಿಸಿದೆ. ಮೇ 19 ರಂದು, ಕೇಂದ್ರ ಬ್ಯಾಂಕ್ ಚಲಾವಣೆಯಲ್ಲಿರುವ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿದೆ.
ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದ್ದು ಒಂದು ವಾರದಲ್ಲೇ ಕೋಟ್ಯಾಂತರ ರೂಪಾಯಿ ವಾಪಾಸ್ ಲಭಿಸಿದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಒಂದು ವಾರದಲ್ಲೇ 2000 ರೂಪಾಯಿ ಮುಖಬೆಲೆಯ 14,000 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲಾಗಿದೆ. ಇನ್ನು 3,000 ಕೋಟಿ ರೂಪಾಯಿಯಷ್ಟು 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲಾಗಿದೆ.
ಮನೆಯಿಂದಲೇ 2000 ರೂಪಾಯಿ ಬದಲಾವಣೆ ಮಾಡಿಕೊಳ್ಳಿ
ನೀವು 2000 ರೂಪಾಯಿ ನೋಟು ಬದಲಾವಣೆ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಬಹುದಾಗಿದೆ. ನ್ಯೂ ಕ್ಯಾಶ್ ಲೋಡ್ ಫೀಚರ್‌ನೊಂದಿಗೆ ಗ್ರಾಹಕರು ಈಗ ತಮ್ಮ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಡೆಪಾಸಿಟ್ ಮಾಡುವ ಬದಲಾಗಿ ತಮ್ಮ ಮನೆ ಬಾಗಿಲಲ್ಲೇ ಡೆಪಾಸಿಟ್ ಮಾಡಬಹುದಾಗಿದೆ.
ಈ ಡೆಪಾಸಿಟ್ ಮಾಡಿದ ಮೊತ್ತವು ಗ್ರಾಹಕರ ಅಮೆಜಾನ್ ಪೇ ಬ್ಯಾಲೆನ್ಸ್ ಖಾತೆಗೆ ತ್ವರಿತವಾಗಿ ಮತ್ತು ಸುಲಭವಾಗಿ ನಿಮಿಷಗಳಲ್ಲಿ ಡೆಪಾಸಿಟ್ ಆಗಲಿದೆ. ಈ ಆಯ್ಕೆಯು ಅತೀ ಸರಳ ಹಾಗೂ ಯಾವುದೇ ತೊಂದರೆಯನ್ನು ಹೊಂದಿಲ್ಲದ ಪ್ರಕ್ರಿಯೆಯಾಗಿದೆ. ವರದಿಯ ಪ್ರಕಾರ ಬಳಕೆದಾರರು 2000 ರೂಪಾಯಿ ನೋಟುಗಳನ್ನು ಒಳಗೊಂಡಂತೆ ಪ್ರತಿ ತಿಂಗಳು ಒಟ್ಟಾಗಿ 50 ಸಾವಿರ ರೂಪಾಯಿಯನ್ನು ಡೆಪಾಸಿಟ್ ಮಾಡಲು ಸಾಧ್ಯವಾಗುತ್ತದೆ.
ಅಮೆಜಾನ್ ಪೇ ಬ್ಯಾಲೆನ್ಸ್ ಖಾತೆಗೆ ಈ ಹಣವು ಡೆಪಾಸಿಟ್ ಆದಾಗ ನೀವು ಅದನ್ನು ಆನ್‌ಲೈನ್ ಶಾಪಿಂಗ್, ಚಿಲ್ಲರೆ ಅಂಗಡಿಗಳಲ್ಲಿ ಬಾರ್‌ಕೋಡ್‌ನೊಂದಿಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ಇ- ಕಾಮರ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಈ ಮೊತ್ತವನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ. ಇತರ ಬ್ಯಾಂಕ್ ಖಾತೆಗಳಿಗೆ ಮತ್ತು ಬಳಕೆದಾರರ ಬ್ಯಾಂಕ್ ಖಾತೆಗಳಿಗೂ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು.
ನಿಮ್ಮ ಮುಂದಿನ ಖರೀದಿಯ ಸಾಗಣೆಯ ಸಂದರ್ಭದಲ್ಲಿ ನೀವು ಡೆಲಿವರಿ ಪಾರ್ಟ್‌ನರ್‌ಗೆ ನೀಡುವ ಮೂಲಕ ಎರಡು 2,000 ರೂಪಾಯಿ ನೋಟು ಮುಖಬೆಲೆ ಸೇರಿದಂತೆ ಅಗತ್ಯವಿರುವ ಮೊತ್ತದ ಹಣವನ್ನು ನೀವು ಸುಲಭವಾಗಿ ಡೆಪಾಸಿಟ್ ಮಾಡಿಕೊಳ್ಳಬಹುದಾಗಿದೆ. ಮಾಹಿತಿ ಪ್ರಕಾರ ನೀವು ನೀಡಿದ ಮೊತ್ತವನ್ನು ಕೂಡಲೇ ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್ ಅಕೌಂಟ್‌ಗೆ ಜಮೆ ಮಾಡಲಾಗುತ್ತದೆ.


Click it and Unblock the Notifications