For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ 1,441 ಕೋಟಿ ಮೌಲ್ಯದ ಕಚೇರಿ ಸ್ಥಳ ಖರೀದಿಸಿದ ಅಸೆಂಡಾಸ್ ಇಂಡಿಯಾ ಟ್ರಸ್ಟ್‌

|

ಅಸೆಂಡಾಸ್ ಇಂಡಿಯಾ ಟ್ರಸ್ಟ್ (ಎ-ಐಟ್ರಸ್ಟ್‌) ಕಂಪನಿಯು ಬೆಂಗಳೂರಿನಲ್ಲಿ ಎರಡು ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಕಚೇರಿ ಸ್ಥಳಕ್ಕೆ 1,441 ಕೋಟಿ ರೂಪಾಯಿ ನೀಡುತ್ತಿದೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.

ಬೆಂಗಳೂರಿನ ಹೆಬ್ಬಾಳದ ಐಟಿ ಪಾರ್ಕ್‌ನಲ್ಲಿರುವ 1.65 ದಶಲಕ್ಷ ಚದರ ಅಡಿ ವಿಸ್ತೀರ್ಣವನ್ನು, ಪಾರ್ಕ್‌ನಲ್ಲಿ ಎರಡು ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಖರೀದಿಯ ಒಪ್ಪಂದ ಮಾಡಿಕೊಂಡಿದೆ ಎಂದು ಎ-ಐಟ್ರಸ್ಟ್‌ನ ಟ್ರಸ್ಟೀ ಮ್ಯಾನೇಜರ್ ಪ್ರಾಪರ್ಟಿ ಫಂಡ್ ಟ್ರಸ್ಟೀ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.

ಬೆಂಗಳೂರಿನಲ್ಲಿ 1,441 ಕೋಟಿ ಮೌಲ್ಯದ ಕಟ್ಟಡ ಖರೀದಿಸಿದ ಎ-ಐಟ್ರಸ್ಟ್‌

ಕಟ್ಟಡ ಖರೀದಿ ವ್ಯವಸ್ಥೆಯ ಭಾಗವಾಗಿ ಎ-ಐಟ್ರಸ್ಟ್ ಯೋಜನೆಯ ಅಭಿವೃದ್ಧಿಗೆ ಹಣವನ್ನು ಒದಗಿಸುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಒಪ್ಪಂದದಂತೆ ಯೋಜನೆಯ ಅಭಿವೃದ್ಧಿಗೆ ಎ-ಐಟ್ರಸ್ಟ್‌ 828 ಕೋಟಿ ರೂಪಾಯಿ ನೀಡಲಿದೆ.

ಈ ಯೋಜನೆಯು ಎರಡು ಜಾಗಗಳಲ್ಲಿ ಹರಡಿರುವ ಮೂರು ಕಟ್ಟಡಗಳನ್ನು ಒಳಗೊಂಡಿದೆ, ಒಟ್ಟು 2.26 ದಶಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಯೋಜನೆಯ ಆಕ್ಯುಪೆನ್ಸಿ ಪ್ರಮಾಣಪತ್ರ ಮತ್ತು ಇತರ ಪ್ರಮುಖ ಷರತ್ತುಗಳನ್ನು ಪೂರೈಸಿದ ನಂತರ, ಯೋಜನೆಯನ್ನು ಅಭಿವೃದ್ಧಿಪಡಿಸುವ ಎರಡು ಘಟಕಗಳ ಶೇ. 100 ರಷ್ಟು ಷೇರುಗಳನ್ನು ಎ-ಐಟ್ರಸ್ಟ್ ಖರೀದಿಸುತ್ತದೆ.

English summary

Ascendas India Trust To Acquire Space In Bengaluru IT Park Rs 1441 Crore

Ascendas India Trust (a-iTrust) will acquire 1.65 million sq ft area at an IT park in Bengaluru for an estimated deal value of Rs 1,441 crore, according to a statement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X