ಭಾರತದ ಎರಡನೇ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಕ ಕಂಪೆನಿ ಅಶೋಕ್ ಲೇಲ್ಯಾಂಡ್ ನ ಜನವರಿ ತಿಂಗಳ ಮಾರಾಟ ವರದಿ ಸೋಮವಾರ ಬಂದಿದ್ದು, 39.9 ಪರ್ಸೆಂಟ್ ನಷ್ಟು ಒಟ್ಟಾರೆ ಮಾರಾಟ, ಅಂದರೆ 11,850 ಯೂನಿಟ್ ಕಡಿಮೆ ಮಾರಾಟ ಆಗಿದೆ. ದೇಶದ ಕೈಗಾರಿಕೆ ಪ್ರಗತಿಯನ್ನು ಸೂಚಿಸುವುದು ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣ ಎನ್ನಲಾಗುತ್ತದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಅಶೋಕ್ ಲೇಲ್ಯಾಂಡ್ ನಿಂದ 19,741 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಚೆನ್ನೈ ಮೂಲದ ಅಶೋಕ್ ಲೇಲ್ಯಾಂಡ್ ನೀಡಿದ ಮಾಹಿತಿ ಪ್ರಕಾರ, ಒಟ್ಟಾರೆ ದೇಶೀಯವಾಗಿ 10,850 ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷ ಜನವರಿಯಲ್ಲಿ 18,533 ವಾಹನಗಳು ಮಾರಾಟವಾಗಿದ್ದವು. ಒಟ್ಟು ಮಾರಾಟ ಪ್ರಮಾಣದಲ್ಲಿ 41.1 ಪರ್ಸೆಂಟ್ ಇಳಿಕೆಯಾಗಿದೆ.
ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳ ಸೆಗ್ಮೆಂಟ್ ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 49.1 ಪರ್ಸೆಂಟ್ ಇಳಿಕೆಯಾಗಿ, ಈ ಬಾರಿ ಜನವರಿಯಲ್ಲಿ 6,949 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯ ಜನವರಿಯಲ್ಲಿ 13,663 ವಾಹನಗಳು ಮಾರಾಟ ಆಗಿದ್ದವು.

ಲಘು ವಾಣಿಜ್ಯ ವಾಹನಗಳು ಕಳೆದ ತಿಂಗಳು 3,901 ಯೂನಿಟ್ ಮಾರಾಟ ಆಗಿವೆ. ಕಳೆದ ವರ್ಷ ಜನವರಿಯಲ್ಲಿ 4,870 ವಾಹನ ಮಾರಾಟ ಆಗಿತ್ತು. ಹೋಲಿಕೆ ಮಾಡಿದರೆ 19.8 ಪರ್ಸೆಂಟ್ ಮಾರಾಟದಲ್ಲಿ ಇಳಿಕೆಯಾಗಿದೆ.


Click it and Unblock the Notifications