ಕೋಕಾ ಕೋಲಾ ಕಂಪೆನಿಯಿಂದ ಜಾಗತಿಕ ಮಟ್ಟದಲ್ಲಿ 2200 ಸಿಬ್ಬಂದಿ ಅಥವಾ 17 ಪರ್ಸೆಂಟ್ ನಷ್ಟು ಕಡಿತ ಮಾಡುವುದಾಗಿ ಹೇಳಲಾಗಿದೆ. ಕಂಪೆನಿಯಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಅಟ್ಲಾಂಟಾ ಮೂಲಕ ಕೋಕಾ ಕೋಲಾ ಕಂಪೆನಿಯ ಈಗಿನ ಉದ್ಯೋಗ ಕಡಿತದಲ್ಲಿ ಅರ್ಧದಷ್ಟು ಯು.ಎಸ್.ನಲ್ಲಿ ಆಗಲಿದೆ.
ಅಲ್ಲಿ ಕೋಕ್ ಗೆ 10,400 ಸಿಬ್ಬಂದಿ ಇದ್ದಾರೆ. 2019ರ ಕೊನೆಗೆ ವಿಶ್ವದಾದ್ಯಂತ ಕೋಕ್ ಗೆ 86,200 ಉದ್ಯೋಗಿಗಳಿದ್ದರು. ಕೊರೊನಾ ಬಿಕ್ಕಟ್ಟು ಕೋಕ್ ವ್ಯವಹಾರಕ್ಕೆ ಭರ್ತಿ ಪೆಟ್ಟು ಬಿದ್ದಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಟೇಡಿಯಂಗಳು, ಸಿನಿಮಾ ಥಿಯೇಟರ್ ಗಳು ಮುಚ್ಚಲಾಯಿತು. ವ್ಯವಹಾರವೇ ಇಲ್ಲದಂತಾಯಿತು. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೋಕ್ ಆದಾಯ 9 ಪರ್ಸೆಂಟ್ ಇಳಿಕೆಯಾಗಿ, 8.7 ಬಿಲಿಯನ್ ಯುಎಸ್ ಡಿ ತಲುಪಿತು.
ಯಾವಾಗ ಕಂಪೆನಿಯ ಆದಾಯವು ಇಳಿಜಾರಿನಲ್ಲಿ ಸಾಗಿತೋ ಅದಾಗಲೇ ಚಾಲ್ತಿಯಲ್ಲಿದ್ದ ಮರು ಹೊಂದಾಣಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಕೋಕ್ ತನ್ನ ಬ್ರ್ಯಾಂಡ್ ಅನ್ನು ಅರ್ಧಕ್ಕೆ, ಅಂದರೆ 200ಕ್ಕೆ ಇಳಿಸಲಿದೆ. ಈ ವರ್ಷ ಮಾರಾಟದಲ್ಲಿ ನಿಧಾನವಾಗಿರುವ ಹಲವು ಬ್ರ್ಯಾಂಡ್ ಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಈಗ ಆಗುವ ಉಳಿತಾಯವನ್ನು ಲಾಭ ಹೆಚ್ಚಿರುವ ಬ್ರ್ಯಾಂಡ್ ಗಳ ಮೇಲೆ ಹೂಡಲು ತೀರ್ಮಾನಿಸಲಾಗಿದೆ. ಇನ್ನು ಕೋಕ್ ಬಿಜಿನೆಸ್ ಸೆಗ್ಮೆಂಟ್ ಗಳನ್ನು 17ರಿಂದ 9ಕ್ಕೆ ಇಳಿಸಲಾಗಿದೆ. ಕಳೆದ ಆಗಸ್ಟ್ ನಲ್ಲೇ ಕೋಕ್ ನಿಂದ ಸಿಬ್ಬಂದಿಗೆ ವಿಆರ್ ಎಸ್ ಆಫರ್ ನೀಡಿತ್ತು. ಆದರೆ ಅದನ್ನು ಎಷ್ಟು ಮಂದಿ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications