For Quick Alerts
ALLOW NOTIFICATIONS  
For Daily Alerts

ಆತ್ಮನಿರ್ಭರ ಭಾರತ: 10,000 ಕೋಟಿ ರೂ. ಬಿಡುಗಡೆ ಮಾಡಿದ ಹೆದ್ದಾರಿ ಸಚಿವಾಲಯ

|

ನವದೆಹಲಿ, ಸೆಪ್ಟೆಂಬರ್ 10: ಕೋವಿಡ್-10 ಸಾಂಕ್ರಾಮಿಕ ಅವಧಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 10,339 ಕೋಟಿ ರೂಪಾಯಿ ಮೊತ್ತವನ್ನು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ರೂಪಿಸಿರುವಂತೆ ಸರಳೀಕೃತ ಪಾವತಿ ಪ್ರಕ್ರಿಯೆಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಅಧಿಕೃತ ಬಿಡುಗಡೆಯ ಪ್ರಕಾರ, 2,475 ಕೋಟಿ ರೂಪಾಯಿ ಮೊತ್ತವನ್ನು ಪ್ರಕ್ರಿಯೆಗೊಳಿಸಲಾಗುತ್ತಿದ್ದು, ಶೀಘ್ರದಲ್ಲೇ ಉಳಿದ ಮೊತ್ತವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಆತ್ಮನಿರ್ಭರ ಭಾರತ: 10,000 ಕೋಟಿ ರೂಪಾಯಿ ಬಿಡುಗಡೆ

ವ್ಯಾಪಾರ ಸುಲಭವಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಗುಣಮಟ್ಟದ ರಸ್ತೆ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಮಧ್ಯಸ್ಥಗಾರರ ವಿಶ್ವಾಸವನ್ನು ಹೆಚ್ಚಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆತ್ಮ ನಿರ್ಭರ ಭಾರತ ಯೋಜನೆಯಡಿ ಪಾವತಿ ಪ್ರಕ್ರಿಯೆಯನ್ನು ಸರಳೀಕರಿಸಿದೆ ಮತ್ತು ಗುತ್ತಿಗೆದಾರರ ಪಾವತಿಗಳನ್ನು ಮೈಲಿಗಲ್ಲು ಸಾಧನೆಯ ಆಧಾರದ ಮೇಲೆ ಪ್ರತಿ ತಿಂಗಳು ಮಾಡಲಾಗುತ್ತಿದೆ ಎಂದು ಅದು ಹೇಳಿದೆ.

ಕೋವಿಡ್-19 ಸನ್ನಿವೇಶದಿಂದಾಗಿ ಸಚಿವಾಲಯವು ತನ್ನ ಗುತ್ತಿಗೆದಾರರು ಮತ್ತು ರಿಯಾಯಿತಿದಾರರಿಗೆ ಹಲವಾರು ಪರಿಹಾರ ಪ್ಯಾಕೇಜ್‌ಗಳನ್ನು ವಿಸ್ತರಿಸಿದೆ.

English summary

Atmanirbhar Bharat Scheme: Highways Ministry Releases Over Rs 10,000 Crore

A sum of Rs 10,339 crore has been released by the Ministry of Road Transport and Highways during the COVID-19 period under the Atmanirbhar Bharat scheme.
Story first published: Thursday, September 10, 2020, 8:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X