For Quick Alerts
ALLOW NOTIFICATIONS  
For Daily Alerts

ವಾಹನಗಳ ರೀಟೇಲ್ ಮಾರಾಟ ಸೆಪ್ಟೆಂಬರ್ ನಲ್ಲಿ 10%ಗೂ ಹೆಚ್ಚು ಕುಸಿತ

|

ಭಾರತದಲ್ಲಿ ಸೆಪ್ಟೆಂಬರ್ ನಲ್ಲಿ ವಾಹನಗಳ ರೀಟೇಲ್ ಮಾರಾಟ ಕಳೆದ ವರ್ಷಕ್ಕಿಂತ 10.24% ಇಳಿಕೆ ಆಗಿದೆ. ವಾಹನ ಮಾರಾಟವು ಹತ್ತಿರಹತ್ತಿರ 20% ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇತ್ತು. ಒಟ್ಟಾರೆ ಇಳಿಕೆಯು ಆಗಸ್ಟ್ ನಲ್ಲಿ ಆಗಿದ್ದ 27% ಕುಸಿತಕ್ಕಿಂತ ಕಡಿಮೆ ಇದೆ. ಇದರ ಅರ್ಥ ಮತ್ತೆ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ ಎಂಬುದಾಗಿದೆ.

ಪ್ರತಿ ತಿಂಗಳು ಆರಂಭದಲ್ಲಿ ವಾಹನ ತಯಾರಕರು ಈ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಾರೆ. ದೇಶದಾದ್ಯಂತ ಕಾರ್ಖಾನೆಗಳಿಂದ ಡೀಲರ್ ಶಿಪ್ ಪಡೆದುಕೊಂಡವರಿಗೆ ಎಷ್ಟು ವಾಹನ ಹೋಗಿದೆ ಎಂಬುದರ ಮೇಲೆ ಈ ಲೆಕ್ಕ ಇರುತ್ತದೆ. ಡೀಲರ್ ಗಳು ತಿಳಿಸುವ ಪ್ರಕಾರ, ನಿಜವಾದ ಖರೀದಿದಾರರಿಲ್ಲದೆ ಬೆಳವಣಿಗೆ ನಿರೀಕ್ಷೆ ಸಾಧ್ಯವಿಲ್ಲ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 24% ಕುಗ್ಗಿತ್ತು.

1 ಲಕ್ಷಕ್ಕೂ ಹೆಚ್ಚು ವಾಹನಗಳು ಮಾರಾಟ ಆಗಿದ್ದವು

ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ ಭರವಸೆ ಕಾಣುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಈ ವರ್ಷ ಮಾರಾಟದಲ್ಲಿ ಇಳಿಕೆ ಕಂಡು, 9.8% ಏರಿಕೆ ಕಂಡಿದೆ. 1,95,665 ಯೂನಿಟ್ ಮಾರಾಟ ಆಗಿದೆ. ಕಳೆದ ವರ್ಷದ ಅಕ್ಟೋಬರ್- ನವೆಂಬರ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ವಾಹನಗಳು ಮಾರಾಟ ಆಗಿದ್ದವು. 31.5% ಬೆಳವಣಿಗೆ ದಾಖಲಾಗಿತ್ತು.

ವಾಹನಗಳ ರೀಟೇಲ್ ಮಾರಾಟ ಸೆಪ್ಟೆಂಬರ್ ನಲ್ಲಿ 10%ಗೂ ಹೆಚ್ಚು ಕುಸಿತ

ಭಾರತವನ್ನು ಲಾಕ್ ಡೌನ್ ನಿಂದ ಅನ್ ಲಾಕ್ ಮಾಡುವ ಪ್ರಯತ್ನದಲ್ಲಿ ಸೆಪ್ಟೆಂಬರ್ ನಲ್ಲಿ ಈ ಹಿಂದಿನ ತಿಂಗಳುಗಳಿಗಿಂತ ವಾಹನ ನೋಂದಣಿ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರ ವಾಹನ ಮಾರಾಟವು ಸಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು FADA ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.

ಡೀಲರ್ ಗಳ ಹಣಕಾಸು ಸ್ಥಿತಿ ಮೇಲೆ ಪರಿಣಾಮ

ಸಾಮಾಜಿಕ ಅಂತರದ ಬಗ್ಗೆ ಗ್ರಾಹಕರ ಆಲೋಚನೆ, ವ್ಯಾಪಾರ- ವಹಿವಾಟು ಮತ್ತೆ ಸಹಜ ಸ್ಥಿತಿಗೆ ಮರಳಿರುವುದು ಹಾಗೂ ಬ್ಯಾಂಕ್ ಗಳಿಂದ ಸಾಲ ಸಿಗುತ್ತಿರುವುದು, ಸಾರ್ವಜನಿಕರು ಸ್ವಂತ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿರುವುದರಿಂದ ಆರಂಭಿಕ ಹಂತದ ವಾಹನಗಳಿಗೆ ಬೇಡಿಕೆ ಹೆಚ್ಚು ಮಾಡಿದೆ. ಹೊಸ ವಾಹನಗಳ ಬಿಡುಗಡೆ ಹಾಗೂ ವಾಹನಗಳ ಲಭ್ಯತೆ ಕೂಡ ಮುಖ್ಯ ಪಾತ್ರ ವಹಿಸಿದೆ.

ಟಿಸಿಎಸ್ ನಿಂದ 16,000 ಕೋಟಿ ರುಪಾಯಿ ಮೊತ್ತದ ಷೇರುಗಳ ಬೈಬ್ಯಾಕ್ಟಿಸಿಎಸ್ ನಿಂದ 16,000 ಕೋಟಿ ರುಪಾಯಿ ಮೊತ್ತದ ಷೇರುಗಳ ಬೈಬ್ಯಾಕ್

ದ್ವಿಚಕ್ರ ವಾಹನ ಮಾರಾಟದ ಸೆಗ್ಮೆಂಟ್ ನಲ್ಲಿ 12.6% ಇಳಿಕೆ ಆಗಿದೆ. ಇನ್ನು ವಾಣಿಜ್ಯ ವಾಹನಗಳ ಮಾರಾಟ 33.65 ಪರ್ಸೆಂಟ್ ಕುಸಿದಿದೆ. ಷೋರೂಮ್ ಗಳಲ್ಲಿ ಜಮೆ ಆಗುತ್ತಿರುವ ವಾಹನಗಳ ಸಂಖ್ಯೆಗೂ ರೀಟೇಲ್ ಮಾರಾಟದ ಸಂಖ್ಯೆಗೂ ಭಾರೀ ವ್ಯತ್ಯಾಸ ಆಗುತ್ತಿರುವ ಬಗ್ಗೆ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ನಿಂದ ಆತಂಕ ವ್ಯಕ್ತವಾಗಿದೆ.

ಸಾಮಾನ್ಯವಾಗಿ ದ್ವಿಚಕ್ರ ವಾಹನ ಅಂದರೆ 45ರಿಂದ 50 ದಿನಗಳ ಕಾಲ ದಾಸ್ತಾನು ಮಾಡಲಾಗುತ್ತದೆ. ಇನ್ನು ಪ್ರಯಾಣಿಕರ ವಾಹನ ಅಂತಾದಲ್ಲಿ ಅದು 35- 40 ದಿನ. ಮುಂಬರುವ ಹಬ್ಬದ ಸೀಸನ್ ನಲ್ಲಿ ಏನಾದರೂ ಖರೀದಿ ಬಿದ್ದುಹೋದಲ್ಲಿ ಡೀಲರ್ ಗಳ ಹಣಕಾಸು ಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರುತ್ತದೆ.

English summary

Automobile Sector YOY Retail Sales In September Decline By More Than 10 Percent

Due to corona effect automobile sector retail sale YOY September sales decline by more than 10%. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X