ಭಾರತದ 2ನೇ ಅತಿದೊಡ್ಡ ಶ್ರೀಮಂತ ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ

ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಸಂಸ್ಥಾಪಕ, ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಭಾರತದ ಎರಡನೇ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ರಿಲಿಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಬಳಿಕ ಭಾರತದ 2ನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ.

ಅವೆನ್ಯೂ ಸೂಪರ್‌ಮಾರ್ಟ್ಸ್‌ ಸಂಸ್ಥಾಪಕ ರಾಧಾಕಿಶನ್ ದಮಾನಿ 17.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳು ಉತ್ತಮ ವಹಿವಾಟು ನಡೆಸುತ್ತಿದ್ದು, ಏಳನೇ ಸ್ಥಾನದಿಂದ ಆರಕ್ಕೆ ಸ್ಥಾನಕ್ಕೆ ಜಿಗಿದ ಬಳಿಕ, 13.30 ಬಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ 95,130 ಕೋಟಿ) ಸಂಪತ್ತಿನ ಒಡೆಯನಾಗಿ ಐದನೇ ಸ್ಥಾನವನ್ನು ತಲುಪಿದ್ದರು. ಆದರೆ ಇದೀಗ 17.8 ಬಿಲಿಯನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 1 ಲಕ್ಷದ 27,216 ಕೋಟಿ) ರಷ್ಟು ತಲುಪಿದ್ದಾರೆ.

ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ದಮಾನಿ 17.8 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳಲ್ಲಿ ಲಾಭ

ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳಲ್ಲಿ ಲಾಭ

ಭಾರತದ ಅತ್ಯಂತ ಪ್ರಸಿದ್ಧ ಷೇರು ಹೂಡಿಕೆದಾರರಲ್ಲಿ ಒಬ್ಬರಾದ ದಮಾನಿ ಅತ್ಯಂತ ಚಾಣಾಕ್ಯ ಹೂಡಿಕೆದಾರ. ಇತ್ತೀಚಿನ ಕೆಲ ವಾರಗಳಲ್ಲಿ ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳು ಏರುತ್ತಲೇ ಸಾಗಿದ್ದು
ದಮಾನಿಯವರ ನಿವ್ವಳ ಮೌಲ್ಯದಲ್ಲೂ ಏರಿಕೆಯಾಗಿದೆ. ಹೀಗಾಗಿಯೇ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸದ್ಯದ ಫೋರ್ಬ್ಸ್ ವರದಿಯ ಬಳಿಕ ದಮಾನಿಯ ಒಟ್ಟು ಆಸ್ತಿ 17.8 ಬಿಲಿಯನ್ ಡಾಲರ್ (1 ಲಕ್ಷದ 27,216 ಕೋಟಿ) ಆಗಿದ್ದು, ಹೆಚ್‌ಸಿಎಲ್‌ನ ಶಿವ ನಡಾರ್ 16.5 ಬಿಲಿಯನ್, ಉದಯ್ ಕೋಟಕ್ 14.9 ಬಿಲಿಯನ್, ಗೌತಮ್ ಅದಾನಿ 14.1 ಬಿಲಿಯನ್, ಲಕ್ಷ್ಮಿ ಮಿತ್ತಲ್ 12.1 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ.

 

ಈ ವರ್ಷ 36,000 ಕೋಟಿ ರುಪಾಯಿ ಸಂಪತ್ತು ಹೆಚ್ಚಳ

ಈ ವರ್ಷ 36,000 ಕೋಟಿ ರುಪಾಯಿ ಸಂಪತ್ತು ಹೆಚ್ಚಳ

ಫೆಬ್ರವರಿ 5 ರಂದು ಸಾಂಸ್ಥಿಕ ಹೂಡಿಕೆದಾರರಿಗೆ ಷೇರು ಮಾರಾಟವನ್ನು ಕಂಪನಿ ಘೋಷಿಸಿದ ನಂತರ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಷೇರುಗಳು ಗುರುವಾರ (ಫೆಬ್ರವರಿ 13) ಸಾರ್ವಕಾಲಿಕ ಗರಿಷ್ಠ 2,559 ರುಪಾಯಿಗಳವರೆಗೆ ಏರಿಕೆಯಾಗಿತ್ತು. 2020ರಲ್ಲಿ ಇಲ್ಲಿಯವರೆಗೆ ಅವೆನ್ಯೂ ಸೂಪರ್‌ಮಾರಟ್ಸ್‌ ಷೇರುಗಳು ಮೌಲ್ಯ 31 ಪರ್ಸೆಂಟ್ ಹೆಚ್ಚಾಗಿದೆ. ಈ ಮೂಲಕ ಸುಮಾರು 36,000 ಕೋಟಿ ಸಂಪತ್ತು ಹೆಚ್ಚಳ ಹೆಚ್ಚಳವಾಗಿದೆ. ಈ ಮೂಲಕ ವಿಪ್ರೋ ಕಂಪನಿಗಿಂತ 0.10 ಪರ್ಸೆಂಟ್, ಒನ್‌ಜಿಸಿ, ಅಲ್ಟ್ರಾಟೆಕ್, ಹೆಚ್‌ಡಿಎಫ್‌ಸಿ ಲೈಫ್ಎನ್‌ಎಸ್ಇಗಿಂತ ಹೆಚ್ಚಾಗಿದೆ.

ವಿಶ್ವದಲ್ಲಿ 110ನೇ ಶ್ರೀಮಂತ ದಮಾನಿ

ವಿಶ್ವದಲ್ಲಿ 110ನೇ ಶ್ರೀಮಂತ ದಮಾನಿ

ಭಾರತದಲ್ಲಿ ಐದನೇ ಅತಿದೊಡ್ಡ ಶ್ರೀಮಂತ ಎಂದು ಖ್ಯಾತಿಗೆ ಒಳಗಾಗಿರುವ ದಮಾನಿ ಇದೀಗ ವಿಶ್ವದ 110 ನೇ ಶ್ರೀಮಂತ ವ್ಯಕ್ತಿ. ದಮಾನಿಯ ನಿವ್ವಳ ಮೌಲ್ಯವು ಭಾರತದ ಜಿಡಿಪಿಯ 0.5 ಪರ್ಸೆಂಟ್‌ ಗೆ ಸಮನಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

ಏಷ್ಯಾದಲ್ಲೇ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿ

ಏಷ್ಯಾದಲ್ಲೇ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿ

ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ರಾಧಾಕಿಶನ್ ದಮಾನಿ ಐದನೇ ಸ್ಥಾನದಲ್ಲಿದ್ದರೆ , ಮುಖೇಶ್ ಅಂಬಾನಿ ಭಾರತಕ್ಕಷ್ಟೇ ಅಲ್ಲದೆ ಏಷ್ಯಾಕ್ಕೆ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ. 62 ವಯಸ್ಸಿನ ಮುಕೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 56.6 ಬಿಲಿಯನ್ ಅಮೆರಿಕನ್ ಡಾಲರ್‌ ನಷ್ಟಿದೆ. ವಿಶ್ವದಲ್ಲೇ 13ನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+