For Quick Alerts
ALLOW NOTIFICATIONS  
For Daily Alerts

ಆಕ್ಸಿಸ್ ಬ್ಯಾಂಕ್ ಫಿಕ್ಸೆಡ್‌ ಡೆಪಾಸಿಟ್ ಬಡ್ಡಿ ದರ ಪರಿಷ್ಕರಣೆ: ಇತ್ತೀಚಿನ ಬಡ್ಡಿ ದರ ಇಲ್ಲಿದೆ

|

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್‌ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಮಾರ್ಚ್ 18ರಂದು ಜಾರಿಗೆ ಬರುವಂತೆ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದೆ.

ಆಕ್ಸಿಸ್ ಬ್ಯಾಂಕ್‌ ತನ್ನ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಬಡ್ಡಿದರಗಳನ್ನು ಹೊಂದಿದೆ. ಇತ್ತೀಚಿನ ಬಡ್ಡಿದರ ಪರಿಷ್ಕರಣೆ ನಂತರ, ಆಕ್ಸಿಸ್ ಬ್ಯಾಂಕ್ 7 ದಿನಗಳ ಮತ್ತು 29 ದಿನಗಳ ನಡುವಿನ ಎಫ್‌ಡಿಗಳಿಗೆ ಶೇಕಡಾ 2.50ರಷ್ಟು ಬಡ್ಡಿದರ ಹೊಂದಿದೆ. 30 ದಿನಗಳ ಮತ್ತು 3 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಶೇಕಡಾ 3ರಷ್ಟು ಬಡ್ಡಿ ಹಾಗೂ 3 ತಿಂಗಳಿಂದ 6 ತಿಂಗಳೊಳಗೆ ಶೇಕಡಾ 3.5ರಷ್ಟು ಬಡ್ಡಿದರವನ್ನು ಹೊಂದಿದೆ.

ಇನ್ನು 6 ತಿಂಗಳಿಂದ 11 ತಿಂಗಳು 25 ದಿನಗಳವರೆಗೆ ಶೇ. 4.4ರಷ್ಟು, 11 ತಿಂಗಳುಗಳಿಗೆ 25 ದಿನಗಳಿಂದ - 1 ವರ್ಷ 5 ದಿನಗಳಿಗಿಂತ ಕಡಿಮೆ ಶೇ. 5.15, 1 ವರ್ಷ 5 ದಿನಗಳಿಂದ 18 ತಿಂಗಳಿಗಿಂತ ಕಡಿಮೆ ಶೇ. 5.10. ಟರ್ಮ್ ಠೇವಣಿಗಳಿಗೆ 2 ವರ್ಷಗಳಿಗಿಂತ ಕಡಿಮೆ ಅವಧಿಗೆ, ಆಕ್ಸಿಸ್ ಬ್ಯಾಂಕ್ ಶೇ. 5.25ರಷ್ಟು ಬಡ್ಡಿಯನ್ನು ನೀಡುತ್ತದೆ.

ಆಕ್ಸಿಸ್ ಬ್ಯಾಂಕ್ ಫಿಕ್ಸೆಡ್‌ ಡೆಪಾಸಿಟ್ ಬಡ್ಡಿ ದರ ಪರಿಷ್ಕರಣೆ

ದೀರ್ಘಾವಧಿಯ ಠೇವಣಿಗಳಿಗೆ (2 ರಿಂದ 5 ವರ್ಷ) ಆಕ್ಸಿಸ್‌ ಬ್ಯಾಂಕ್‌ ಶೇಕಡಾ 5.40 ರಷ್ಟು ಬಡ್ಡಿದರವನ್ನು ನೀಡುತ್ತದೆ. 5 ವರ್ಷದಿಂದ 10 ವರ್ಷಗಳ ಅವಧಿಯ ಠೇವಣಿಗಳಿಗೆ ನಿಮಗೆ ಶೇಕಡಾ 5.75ರಷ್ಟು ಬಡ್ಡಿದರ ನೀಡಲಾಗುತ್ತದೆ.

ಆಕ್ಸಿಸ್ ಬ್ಯಾಂಕ್ ಹೊಸ ಬಡ್ಡಿ ದರಗಳು ಈ ಕೆಳಗಿನಂತಿವೆ:

7 ದಿನಗಳು to 14 ದಿನಗಳು 2.50%
15 ದಿನಗಳು ರಿಂದ 29 ದಿನಗಳು 2.50%
30 ದಿನಗಳು ರಿಂದ 45 ದಿನಗಳು 3%
46 ದಿನಗಳು ರಿಂದ 60 ದಿನಗಳು 3%
61 ದಿನಗಳು 3 ತಿಂಗಳು 4 ತಿಂಗಳು 5 ತಿಂಗಳು 6 ತಿಂಗಳು 7 ತಿಂಗಳು 8 ತಿಂಗಳು 9 ತಿಂಗಳು 10 ತಿಂಗಳು 11 ತಿಂಗಳು 11 ತಿಂಗಳು 25 ದಿನಗಳು 1 ವರ್ಷ 1 ವರ್ಷ 5 ದಿನಗಳು 1 ವರ್ಷ 11 ದಿನಗಳು 1 ವರ್ಷ 25 ದಿನಗಳು 13 ತಿಂಗಳು 14 ತಿಂಗಳು 15 ತಿಂಗಳು 16 ತಿಂಗಳು 17 ತಿಂಗಳು 18 ತಿಂಗಳು 2 ವರ್ಷ 30 ತಿಂಗಳು 3 ವರ್ಷ 5 ವರ್ಷ to 10 ವರ್ಷ 5.75%

English summary

Axis Bank Revises FD Interest Rate: Latest FD Rates Here

Private sector lender Axis Bank has revised interest rates on fixed deposits (FDs) with effect from 18 March. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X