ಫಿಕ್ಸೆಡ್ ಡೆಪಾಸಿಟ್‌ ಮೇಲಿನ ಬಡ್ಡಿ ದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ನಿಶ್ಚಿತ ಠೇವಣಿ(ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬಡ್ಡಿದರಗಳು ಜೂನ್ 22 ರಿಂದ ಜಾರಿಗೆ ಬರಲಿದೆ.

ಆಕ್ಸಿಸ್ ಬ್ಯಾಂಕ್ ಎಫ್‌ಡಿಗಳನ್ನು 7 ದಿನಗಳಿಂದ 10 ವರ್ಷಗಳವರೆಗೆ ಒದಗಿಸುತ್ತದೆ. 7 ರಿಂದ 29 ದಿನಗಳವರೆಗೆ ಪ್ರಬುದ್ಧವಾಗಿರುವ ಎಫ್‌ಡಿಗಳಿಗೆ ಆಕ್ಸಿಸ್ ಬ್ಯಾಂಕ್ ಶೇ. 2.50 ರಷ್ಟು ಬಡ್ಡಿದರವನ್ನು ನೀಡುತ್ತಿದೆ. 30 ದಿನಗಳು ಮತ್ತು 3 ತಿಂಗಳಿಗಿಂತ ಕಡಿಮೆ ಅವಧಿಯವರೆಗೆ ಎಫ್‌ಡಿಗಳ ಮೇಲೆ ಶೇ. 3ರಷ್ಟು ಬಡ್ಡಿದರವನ್ನು ನೀಡಲಿದೆ.

FD ಮೇಲಿನ ಬಡ್ಡಿ ದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್

ಇನ್ನು 3 ತಿಂಗಳ ನಡುವಿನ 6 ತಿಂಗಳಿಗಿಂತ ಕಡಿಮೆ ಎಫ್‌ಡಿಗಳಿಗೆ ಶೇಕಡಾ 3.5 ಬಡ್ಡಿದರವನ್ನು ನೀಡುತ್ತಿದೆ. ನಿಶ್ಚಿತ ಠೇವಣಿಗಳಲ್ಲಿ 1 ವರ್ಷದಿಂದ 1 ವರ್ಷ 5 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಬ್ಯಾಂಕ್ ಈಗ ಶೇ. 5.10ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಹೀಗೆ ಆಕ್ಸಿಸ್‌ ಬ್ಯಾಂಕ್ ಯಾವೆಲ್ಲಾ ಅವಧಿಗೆ ಎಷ್ಟು ಬಡ್ಡಿದರವನ್ನ ಹೊಂದಿದೆ ಎಂಬ ಮಾಹಿತಿ ಈ ಕೆಳಗಿದೆ.

ಆಕ್ಸಿಸ್ ಬ್ಯಾಂಕ್ ಹೊಸ ಬಡ್ಡಿ ದರಗಳು ಈ ಕೆಳಗಿನಂತಿವೆ:

7 ದಿನಗಳು ರಿಂದ 14 ದಿನಗಳು 2.50%
15 ದಿನಗಳು ರಿಂದ 29 ದಿನಗಳು 2.50%
30 ದಿನಗಳು ರಿಂದ 45 ದಿನಗಳು 3%
46 ದಿನಗಳು ರಿಂದ 60 ದಿನಗಳು 3%
61 ದಿನಗಳು - 3 ತಿಂಗಳು 3%
3 ತಿಂಗಳು - 4 ತಿಂಗಳು 3.5%
4 ತಿಂಗಳು - 5 ತಿಂಗಳು 3.5%
5 ತಿಂಗಳು - 6 ತಿಂಗಳು 3.5%
6 ತಿಂಗಳು - 7 ತಿಂಗಳು 4.40%
7 ತಿಂಗಳು - 8 ತಿಂಗಳು 4.40%
8 ತಿಂಗಳು - 9 ತಿಂಗಳು 4.40%
9 ತಿಂಗಳು - 10 ತಿಂಗಳು 4.40%
10 ತಿಂಗಳು - 11 ತಿಂಗಳು 4.40%
11 ತಿಂಗಳು - 11 ತಿಂಗಳು 25 ದಿನಗಳು 4.40%
11 ತಿಂಗಳು 25 ದಿನಗಳು - 1 ವರ್ಷ 4.40%
1 ವರ್ಷ - 1 ವರ್ಷ 5 ದಿನಗಳು 5.10%
1 ವರ್ಷ 5 ದಿನಗಳು - 1 ವರ್ಷ 11 ದಿನಗಳು 5.15%
1 ವರ್ಷ 11 ದಿನಗಳು - 1 ವರ್ಷ 25 ದಿನಗಳು 5.10%
1 ವರ್ಷ 25 ದಿನಗಳು - 13 ತಿಂಗಳು 5.10%
13 ತಿಂಗಳು - 14 ತಿಂಗಳು 5.10%
14 ತಿಂಗಳು - 15 ತಿಂಗಳು 5.10%
15 ತಿಂಗಳು - 16 ತಿಂಗಳು 5.10%
16 ತಿಂಗಳು - 17 ತಿಂಗಳು 5.10%
17 ತಿಂಗಳು - 18 ತಿಂಗಳು 5.10%
18 ತಿಂಗಳು - 2 ವರ್ಷ 5.25%
2 ವರ್ಷ - 30 ತಿಂಗಳು 5.40%
30 ತಿಂಗಳು -3 ವರ್ಷ 5.40%
3 ವರ್ಷ - 5 ವರ್ಷ 5.40%
5 ವರ್ಷ to 10 ವರ್ಷ 5.75%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+