ದೇಶದ ಖ್ಯಾತ ದ್ವಿಚಕ್ರ, ತ್ರಿಚಕ್ರ ವಾಹನಗಳ ತಯಾರಿಕಾ ಕಂಪನಿ ಬಜಾಜ್ ಆಟೋ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 15 ಪರ್ಸೆಂಟ್ ಹೆಚ್ಚಾಗಿದೆ ಎಂದು ವರದಿ ಮಾಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬಜಾಜ್ ಆಟೋ ಕಂಪನಿಯು 1,102 ಕೋಟಿ ರುಪಾಯಿ ನಿವ್ವಳ ಲಾಭ ಕಂಡಿತ್ತು. ಆದರೆ 2019-20ರ ಮೂರನೇ ತೈಮಾಸಿಕದಲ್ಲಿ ನಿವ್ವಳ ಲಾಭ 1,262 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯ 3 ಪರ್ಸೆಂಟ್ ಏರಿಕೆಯಾಗಿ 7,640 ಕೋಟಿ ರುಪಾಯಿಗೆ ತಲುಪಿದೆ.

ಕಂಪನಿಯ ಕಾರ್ಯಾಚರಣಾ ಮಾರ್ಜಿನ್ ಅನುಕ್ರಮವಾಗಿ 150 ಬಿಪಿಎಎಸ್‌ನಿಂದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 16.9 ಪರ್ಸೆಂಟ್, ಮೂರನೇ ತ್ರೈಮಾಸಿಕ ಅವಧಿಗೆ 18.4 ಪರ್ಸೆಂಟ್‌ಗೆ ಸುಧಾರಿಸಿದೆ. ವಸ್ತುಗಳ ಬೆಲೆಯಲ್ಲಿನ ಇಳಿಕೆ, ಬೆಲೆಗಳ ಹೆಚ್ಚಳ ಮತ್ತು ವಿದೇಶಿ ವಿನಿಮಯ ಲಾಭಗಳಿಂದ ಈ ಸುಧಾರಣೆಯು ಹೆಚ್ಚಾಗಿ ನಡೆಯುತ್ತಿದೆ.
31 ಡಿಸೆಂಬರ್ 2019 ರ ಹೊತ್ತಿಗೆ, ಹೆಚ್ಚುವರಿ ನಗದು ಮತ್ತು ನಗದು ಸಮಾನತೆಯು 17,407 ಕೋಟಿಗಳಿಗೆ ಹೆಚ್ಚಳವಾಗಿದ್ದು, ಸೆಪ್ಟೆಂಬರ್ 30, 2019 ರ ವೇಳೆಗೆ 15,986 ಕೋಟಿ ರುಪಾಯಿನಷ್ಟಿತ್ತು. ಅಲ್ಲದೆ ತ್ರೈಮಾಸಿಕದಲ್ಲಿ ಬಜಾಜ್ ಆಟೋ 12,02,486 ಯುನಿಟ್‌ಗಳನ್ನು ರಫ್ತು ಮಾಡಿದ್ದು, 5,62,772 ಯುನಿಟ್‌ಗಳಿಗೆ ಮಾರಾಟ ಮಾಡಿದೆ.


Click it and Unblock the Notifications