ಬಜಾಜ್ ಫೈನಾನ್ಸ್ ಲಾಭ 965 ಕೋಟಿ ರುಪಾಯಿಗೆ ಕುಸಿತ

ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಜಾಜ್ ಫೈನಾನ್ಸ್ ನಿವ್ವಳ ಲಾಭದಲ್ಲಿ ಇಳಿಕೆ ಆಗಿದೆ. ಈ ಬಗ್ಗೆ ಕಂಪೆನಿ ಬುಧವಾರ ಘೋಷಣೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಜಾಜ್ ಫೈನಾನ್ಸ್ 1506 ಕೋಟಿ ರುಪಾಯಿ ಲಾಭ ಮಾಡಿತ್ತು. ಈ ಬಾರಿ ಅದು 965 ಕೋಟಿ ರುಪಾಯಿಗೆ ಕುಸಿದಿದೆ.

ಸಾಲದ ಮೇಲೆ ನಷ್ಟ ಹಾಗೂ FY21 Q2ಗೆ ಪ್ರಾವಿಷನ್ 1700 ಕೋಟಿ ಇಡಲಾಗಿದೆ. FY20 Q2ನಲ್ಲಿ 594 ಕೋಟಿ ರುಪಾಯಿ ಮೀಸಲಿಡಲಾಗಿತ್ತು. ಬಜಾಜ್ ಫೈನಾನ್ಸ್ Q2 ಫಲಿತಾಂಶದ ಪ್ರಮುಖಾಂಶಗಳು ಹೀಗಿವೆ:

ಬಜಾಜ್ ಫೈನಾನ್ಸ್ ಲಾಭ 965 ಕೋಟಿ ರುಪಾಯಿಗೆ ಕುಸಿತ

* ಹೊಸ ಸಾಲ Q2 FY21ನಲ್ಲಿ 3.62 ಮಿಲಿಯನ್ ಹಾಗೂ Q2 FY20ಯಲ್ಲಿ 6.47 ಮಿಲಿಯನ್ ಇತ್ತು.

* ಗ್ರಾಹಕರ ಫ್ರಾಂಚೈಸ್ 30 ಸೆಪ್ಟೆಂಬರ್ 2020ಕ್ಕೆ 44.11 ಮಿಲಿಯನ್ ಹಾಗೂ 30 ಸೆಪ್ಟೆಂಬರ್ 2019ರಲ್ಲಿ 38.70 ಮಿಲಿಯನ್ ಇತ್ತು.

* ನಗದು ಹೆಚ್ಚಳ 30 ಸೆಪ್ಟೆಂಬರ್ 2020ಕ್ಕೆ₹22,414 ಕೋಟಿ ಹಾಗೂ 30 ಸೆಪ್ಟೆಂಬರ್ 2019ಕ್ಕೆ ₹8,107 ಕೋಟಿ.

* ನಿವ್ವಳ ಬಡ್ಡಿ ಆದಾಯ Q2 FY21 4% ಹೆಚ್ಚಳವಾಗಿ ₹4,165 ಕೋಟಿ ತಲುಪಿದೆ. Q2 FY20 ₹4,000 ಕೋಟಿ ಇತ್ತು.

* Q2 FY21 ಕಾರ್ಯ ನಿರ್ವಹಣೆ ವೆಚ್ಚ 16% ಇಳಿದು ₹1,160 ಕೋಟಿ ಆಗಿದೆ. ಅದು ₹1,384 ಕೋಟಿ ಇತ್ತು.

* ಸಗಟು NPA ಮತ್ತು ನಿವ್ವಳ NPA 30ನೇ ಸೆಪ್ಟೆಂಬರ್ 2020ಕ್ಕೆ ಕ್ರಮವಾಗಿ 1.03% ಮತ್ತು 0.37% ಇದ್ದರೆ, 30 ಸೆಪ್ಟೆಂಬರ್ 2019ರ ಅವಧಿಗೆ ಇದು 1.61% ಮತ್ತು 0.65% ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+