ವಾಹನ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಬನಶಂಕರಿಯಿಂದ ನೈಸ್ ರಸ್ತೆಗೆ 10 ಕಿಮೀ ಎಕ್ಸ್‌ಪ್ರೆಸ್‌ವೇ

ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಜನರಿಗೆ ಸಿಹಿ ಸುದ್ದಿಯನ್ನ ನೀಡ್ತಿದೆ. ಅತೀಯಾದ ಟ್ರಾಫಿಕ್‌ ಜಾಮ್‌ನಿಂದಾಗಿ ಈಗಾಗಲೇ ಜನರು ಪರದಾಡುವಂತಾಗಿದೆ. ಹೀಗಾಗಿ ಬನಶಂಕರಿಯಿಂದ ನೈಸ್‌ ರಸ್ತೆಗೆ 10 ಕಿಲೋಮೀಟರ್‌ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲಾಗ್ತಿದೆ. ಇದು ಬನಶಂಕರಿಯಿಂದ ಕನಕಪುರ ರಸ್ತೆಯನ್ನು ಹೋಗಿ ಸೇರಲಿದೆ. ಟ್ರಾಫಿಕ್‌ ಜಾಮ್‌ ಕಡಿಮೆ ಮಾಡಲು ಈ ಹೊಸ ನಿರ್ಧಾರವನ್ನ ಕೈಗೊಳ್ಳಲಾಗ್ತಿದೆ.

ಎಚ್‌ಟಿ ವರದಿಯ ಪ್ರಕಾರ ಈಗಾಗಲೇ ಆ ರಸ್ತೆಯಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದ್ದು, ಇರಲ್ಲದೆ ಮೆಟ್ರೋ ನಿರ್ಮಾಣವಾದ ನಂತರವ ಜನರು ಅಲ್ಲಿ ಮತ್ತಷ್ಟು ಟ್ರಾಫಿಕ್‌ ಎದುರಿಸುವಂತಾಗಿದೆ. ಅಲ್ಲದೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರ ನಿರ್ದೇಶನದ ನಂತರ ಈ ಕುರಿತು ಅಧಿಕಾರಿಗಳು ತ್ವರಿತ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ.

ಬನಶಂಕರಿಯಿಂದ ನೈಸ್ ರಸ್ತೆಗೆ 10 ಕಿಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣ!

ಈಗ ಸಧ್ಯಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಎಕ್ಸ್‌ಪ್ರೆಸ್ ವೇ ಕುರಿತು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬರೆದ ಪತ್ರದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ಕುರಿತು ಬರೆಯಲಾಗಿದೆ. ಅಲ್ಲದೆ ಹೊಸ ಮೂಲಸೌಕರ್ಯಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಪೈಪ್‌ಲೈನ್ ರಸ್ತೆಯನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕನಕಪುರ ರಸ್ತೆಯು ಬೆಂಗಳೂರಿಗೆ ಪ್ರಮುಖ ರಸ್ತೆಯಾಗಿದ್ದು, ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗು ಮೆಟ್ರೋ ಕಾಮಗಾರಿಯಿಂದಾಗಿ ಸಾಕಷ್ಟು ಸಾವಾಲುಗಳನ್ನ ಜನರು ಈಗಾಗಲೇ ಎದುರಿಸುತ್ತಿದ್ದಾರೆ. ಇದಕ್ಕಾಗಿ ಪರ್ಯಾಯ ರಸ್ತೆಯ ಅಗತ್ಯ ಬಹಳ ಇದೆ. ಮೆಟ್ರೋ ನಿರ್ಮಾಣವು ಗ್ರೇಡ್ ಸಪರೇಟರ್‌ಗಳ ಕಾರ್ಯಸಾಧ್ಯತೆಯನ್ನು ಮಿತಿಗೊಳಿಸಿರುವುದರಿಂದ ಪರ್ಯಾಯ ವ್ಯವಸ್ಥೆ ಅಗತ್ಯ ಎಂದು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಹಿನ್ನೆಲೆ, ಬಿಬಿಎಂಪಿ ಅಧಿಕಾರಿಗಳು ಶೀಘ್ರದಲ್ಲೇ ಈ ಕಾಮಗಾರಿಯನ್ನ ಆರಂಭ ಮಾಡಲಿದ್ದು, ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಹಿರಿಯ ಎಂಜಿನಿಯರ್‌ಗಳು ಈ ಎಕ್ಸ್‌ಪ್ರೆಸ್‌ವೇಯ ನಿರ್ಣಾಯಕ ಅಗತ್ಯದ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಹೊಸ ಎಕ್ಸ್‌ಪ್ರೆಸ್‌ವೇ ಬೇಕಾಗುವ ವೆಚ್ಚವನ್ನು ಪರಿಶೀಲಿಸಿ

ಬಿಬಿಎಂಪಿ ಪ್ರಕಾರ, ಎಕ್ಸ್‌ಪ್ರೆಸ್‌ವೇಗೆ ಪ್ರತೀ ಕಿಲೋಮೀಟರ್‌ ರಸ್ತೆ ನಿರ್ಮಾಣಕ್ಕೆ ಸುಮಾರು 100 ಕೋಟಿ ಮೊತ್ತ ಬೇಕಾಗಲಿದೆ ಎಂದು ಹೇಳಲಾಗ್ತಿದೆ. ಇನ್ನು ಒಟ್ಟು ಅಂದಾಜು ಮೊತ್ತವನ್ನ ನಾವು ನೋಡೋದಾದ್ರೆ, 1,200 ಕೋಟಿ ರೂ. ಬೇಕಾಗಬಹುದು ಎಂದು ಬಿಬಿಎಂಪಿ ತಿಳಿಸಿದೆ. ಅಲ್ಲದೆ ಈ ನಿರ್ಮಾಣ ಕಾರ್ಯ ಪ್ರಕ್ರಿಯೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ವರದಿ ತಿಳಿಸಿದೆ.

ಬಂನಶಂಕರಿಯಿಂದ ಕನಕಪುರಕ್ಕೆ ನಿರ್ಮಿಸುವ ಈ 10 ಕಿಲೋ ಮೀಟರ್‌ ಎಕ್ಸ್‌ಪ್ರೆಸ್‌ವೇ ಯೋಜನೆ ನಗರದ ಜನಸಂದಣಿಯನ್ನು ಕಡಿಮೆ ಮಾಡಲು, ವಾಹನದಟ್ಟಣೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಪ್ರಸ್ತಾಪಿಸಿದ 17 ಮೇಲ್ಸೇತುವೆಗಳ ಉಪಕ್ರಮಗಳಲ್ಲಿ ಒಂದಾಗಿದೆ. ಈ ಎಕ್ಸ್‌ಪ್ರಸ್‌ವೇ ಯೋಜನೆಯಿಂದಾಗಿ ಜನರಿಗೆ ಉಪಯುಕ್ತವಾಗಲಿದೆ. ಹಾಗೆ ನಗರದಾದ್ಯಂತ ಜನರಿಗೆ ಸುಗಮ ಪ್ರಯಾಣಕ್ಕೆ ಸಹಾಯಕವಾಗಲಿದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಬೆಂಗಳೂರು, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಐಟಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಇದು ಸಂಚಾರ ದಟ್ಟಣೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ನಗರದ ರಸ್ತೆಗಳು ಆಗಾಗ್ಗೆ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಮತ್ತು ವಾಣಿಜ್ಯ ಸಂಚಾರದ ಮಿಶ್ರಣದಿಂದ ಮುಚ್ಚಿಹೋಗಿವೆ. ವಿಶೇಷವಾಗಿ ಕೆಲಸದ ದಿನಗಳಲ್ಲಿ ಕಿರಿದಾದ ರಸ್ತೆಗಳು ಮತ್ತು ಕಳಪೆ ನಗರ ಯೋಜನೆಗಳೊಂದಿಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆಯು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ನಮ್ಮ ಮೆಟ್ರೋ ಮತ್ತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಗಳಂತಹ ಚಾಲ್ತಿಯಲ್ಲಿರುವ ಯೋಜನೆಗಳು ಚಲನಶೀಲತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರೂ, ಬೆಂಗಳೂರಿನ ಟ್ರಾಫಿಕ್ ಒಂದು ಪ್ರಮುಖ ಸವಾಲಾಗಿ ಉಳಿದಿದೆ, ಇದು ದೀರ್ಘ ಪ್ರಯಾಣದ ಸಮಯ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ, ಇದು ಭಾರತದ ಅತ್ಯಂತ ಟ್ರಾಫಿಕ್-ದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ನಗರದ ಟ್ರಾಫಿಕ್‌ ಕಡಿಮೆ ಮಾಡಲು ಸರ್ಕಾರ ಈ ಯೋಜನೆಗೆ ಕೈಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+