For Quick Alerts
ALLOW NOTIFICATIONS  
For Daily Alerts

ಬಂಧನ್ ಬ್ಯಾಂಕ್‌ನ ತ್ರೈಮಾಸಿಕ ನಿವ್ವಳ ಲಾಭ ಶೇ. 80ರಷ್ಟು ಕುಸಿತ

|

ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬಂಧನ್ ಬ್ಯಾಂಕ್ 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರೀ ನಷ್ಟ ಅನುಭವಿಸಿದೆ. ಬ್ಯಾಂಕ್‌ನ ನಿವ್ವಳ ಲಾಭವು ಶೇಕಡಾ 80ರಷ್ಟು ಕುಸಿತಗೊಂಡಿದೆ.

 

ಅನುತ್ಪಾದಕ ಸಾಲ ಬ್ಯಾಂಕ್‌ನ ಆದಾಯಕ್ಕೆ ಹೊಡೆತ ನೀಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿವರ್ಷ ಹೆಚ್ಚುತ್ತಿರುವ ನಿಷ್ಕ್ರಿಯ ಆಸ್ತಿಗಳು (ಎನ್‌ಪಿಎ) ಮತ್ತು ಸಾಲಗಳ ಚೇತರಿಕೆಯ ಕೊರತೆಯು ಬ್ಯಾಂಕಿನ ಕಾರ್ಯಕ್ಷಮತೆ ಮತ್ತು ಆದಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

 
ಬಂಧನ್ ಬ್ಯಾಂಕ್‌ನ ತ್ರೈಮಾಸಿಕ ನಿವ್ವಳ ಲಾಭ ಶೇ. 80ರಷ್ಟು ಕುಸಿತ

ಹೀಗಾಗಿ ಈ ವರ್ಷದ ಮಾರ್ಚ್ 31 ಕ್ಕೆ ಕೊನೆಗೊಂಡ 2020-2021ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಂಧನ್ ಬ್ಯಾಂಕಿನ ನಿವ್ವಳ ಲಾಭವು ಶೇಕಡಾ 80 ರಷ್ಟು ಕುಸಿದಿದೆ. ಬ್ಯಾಂಕಿನ ಆದಾಯ ಕೇವಲ 103 ಕೋಟಿ ರೂ. ದಾಖಲಿಸಿದೆ.

2019-2020ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭ 517.3 ಕೋಟಿ ರೂ. ಆಗಿದ್ದು, ವರ್ಷದ ಆರಂಭದ ವೇಳೆಗೆ ಒಟ್ಟು 103 ಕೋಟಿ ರೂ.ಗೆ ಇಳಿದಿತ್ತು. ಇದು ಶೇಕಡಾ 80.1ರಷ್ಟು ಕುಸಿಯಿತು.

ನಿವ್ವಳ ಲಾಭದಲ್ಲಿ ಶೇಕಡಾ 80 ರಷ್ಟು ಕುಸಿತಕ್ಕೆ ಹೆಚ್ಚಿನ ನಿಬಂಧನೆಗಳು ಕಾರಣವೆಂದು ತೋರುತ್ತದೆ. ಈ ನಿಬಂಧನೆಗಳು 1,594 ಕೋಟಿ ರೂ. ಆಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 827.36 ಕೋಟಿ ರೂ. ಆಗಿದೆ. ಬಂಧನ್ ಬ್ಯಾಂಕ್ ನಿವ್ವಳ ಬಡ್ಡಿಯಲ್ಲಿ ಭಾರಿ ಏರಿಕೆ ಕಂಡಿದ್ದು, ಶೇಕಡಾ 4.6 ರಷ್ಟು ಅಥವಾ 1,757 ಕೋಟಿ ಆಗಿದೆ.

English summary

Bandhan Bank Q4 Report: Net Profit Falls 80 Percent

Bandhan Bank on Saturday posted a net profit of Rs 103.03 crore in the quarter ended 31 March, 2021 on higher provisions
Story first published: Saturday, May 8, 2021, 22:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X