ವಂದೇ ಭಾರತ್ ರೈಲು (Vande Bharat Train) ದೇಶದ ಪ್ರಮುಖ ರೈಲು ಸೇವೆಗಳಲ್ಲಿ ಒಂದು. ವೇಗದ ಪ್ರಯಾಣ, ಉತ್ತಮ ಸೌಲಭ್ಯದಿಂದಾಗಿ ವಂದೇ ಭಾರತ್ ರೈಲು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಂದೇ ಭಾರತ್ ರೈಲು, ಇದೀಗ ಹೊಸ ಕ್ರಮವನ್ನು ಕೈಗೊಂಡಿದೆ. ಭಾರತೀಯ ರೈಲ್ವೇಯು ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿಯನ್ನು ಜನವರಿ 1 ರಿಂದ ಜಾರಿಗೆ ತರಲಿದೆ. ಮಾರ್ಚ್ 12, 2024 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದ ಈ ವೇಗದ ರೈಲನ್ನು ನೈಋತ್ಯ ರೈಲ್ವೇ (SWR) ವಲಯವು ಸದ್ಯ ನಿರ್ವಹಿಸುತ್ತದೆ.

ಕಲಬುರಗಿ ಟು ಬೆಂಗಳೂರು ರೈಲುಗಳು:
ರೈಲು ಸಂಖ್ಯೆ 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಶುಕ್ರವಾರ ಹೊರತುಪಡಿಸಿ, ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚಾರ ಮಾಡುತ್ತದೆ. ಈ ರೈಲು 550 ಕಿಲೋಮೀಟರ್ ದೂರವನ್ನು 8 ಗಂಟೆ 45 ನಿಮಿಷಗಳಲ್ಲಿ ತಲುಪಲಿದೆ.
ಎಲ್ಲೆಲ್ಲಿ ನಿಲ್ದಾಣ ಹೊಂದಿದೆ?
ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಮೊದಲು ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗೂಂತಕಲ್, ಅನಂತಪುರ ಮತ್ತು ಯಲಹಂಕ ಜಂಕ್ಷನ್‌ನಲ್ಲಿ ನಿಲುಗಡೆ ಹೊಂದಿದೆ. ಇದೀಗ ರೈಲ್ವೆ ಮಂಡಳಿಯು 22231/22232 ರೈಲಿನ ಮಾರ್ಗವನ್ನು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ ಸಂಚರಿಸಲು ಅನುಮತಿ ನೀಡಿದೆ.
ಈ ಬದಲಾವಣೆಯಿಂದಾಗಿ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ ಹೊಸ ನಿಲುಗಡೆ ಹೊಂದಲಿದೆ. ಅಲ್ಲದೇ ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕಲಬುರಗಿಯಿಂದ ಹೊರಡುವ ರೈಲುಗಳಿಗೆ ಜನವರಿ 1, 2026ರಿಂದ ಹಾಗೂ ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಜನವರಿ 2, 2026ರಿಂದ ಈ ಹೆಚ್ಚುವರಿ ನಿಲುಗಡೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಹೊಸ ವೇಳಾಪಟ್ಟಿ ಹೇಗಿದೆ?
ಜನವರಿ 1 ರಿಂದ ಜಾರಿಗೆ ಬರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ರೈಲು ಬೆಳಗ್ಗೆ 06:10ಕ್ಕೆ ಕಲಬುರಗಿಯಿಂದ ಹೊರಡಲಿದೆ (ಹಿಂದಿನ ನಿರ್ಗಮನ ಸಮಯ 05:15).
ಇದರ ನಿಲುಗಡೆ ಸ್ಥಳಗಳು: ಯಾದಗಿರಿ (06:48/06:50), ರಾಯಚೂರು (07:38/07:40), ಮಂತ್ರಾಲಯಂ ರೋಡ್ (07:58/08:00), ಗೂಂತಕಲ್ (09:00/09:05), ಅನಂತಪುರ (10:03/10:05).
ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ 11:00/11:02ಕ್ಕೆ ಆಗಮಿಸಿ/ನಂತರ ಹೊರಡಲಿದೆ. ಆ ನಂತರ ಯಲಹಂಕ (12:28/12:30) ತಲುಪಿ, ಅಂತಿಮವಾಗಿ ಮಧ್ಯಾಹ್ನ 14:10ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅನ್ನುಉ ತಲುಪುತ್ತದೆ.
ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಮಧ್ಯಾಹ್ನ 02:40ಕ್ಕೆ ಬೆಂಗಳೂರಿನಿಂದ ಹೊರಡಲಿದೆ.
ಇದರ ನಿಲುಗಡೆಗಳು ಸ್ಥಳಗಳು: ಯಲಹಂಕ (03:05/03:07), ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (04:23/04:25), ಅನಂತಪುರ (17:33/17:35), ಗೂಂತಕಲ್ (06:37/06:42).
ಮಂತ್ರಾಲಯಂ ರೋಡ್ (07:48/07:50), ರಾಯಚೂರು (08:18/08:20), ಯಾದಗಿರಿ (09:03/09:05) ನಿಲುಗಡೆಗಳ ನಂತರ, ರೈಲು ರಾತ್ರಿ 10:45ಕ್ಕೆ ಕಲಬುರಗಿ ತಲುಪುತ್ತದೆ. (ಹಿಂದಿನ 11:30ಕ್ಕೆ ಬದಲಾಗಿ).
ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಕಲಬುರಗಿ ನಡುವಿನ ಪ್ರಯಾಣಕ್ಕೆ ಎಸಿ ಚೇರ್ ಕಾರ್‌ಗೆ ₹1475 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ ₹2710 ಟಿಕೆಟ್ ದರ ಇರುತ್ತದೆ ಎಂದು ಹೇಳಲಾಗಿದೆ.
More From GoodReturns

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications