ವಾಹನ ಸವಾರರೇ ಇಲ್ಲಿ ಕೇಳಿ..ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿ ಕಿರಿಯಂತೂ ಇದ್ದೇ ಇರುತ್ತದೆ. ಇದಕೆಲ್ಲಾ ಬ್ರೇಕ್ ಹಾಕಲು ಸಂಚಾರಿ ಪೊಲೀಸರು ಒಂದಲ್ಲಾ ಒಂದು ಸರ್ಕಾಸ್ ಮಾಡುತ್ತಲ್ಲೇ ಇರುತ್ತದೆ.ಹಬ್ಬದ ಸೀಸನ್ ಇರುವುದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಅದರಲ್ಲೂ ಯುವಕರು ಮೋಜು ಮಸ್ತ್ ಮಾಡುತ್ತಾ.. ವ್ಹೀಲಿಂಗ್ ಮಾಡಿ ಮತ್ತಷ್ಟು ಟ್ರಾಫಿಕ್ ಜಾಮ್ ಮಾಡುತ್ತಲೇ ಇರುತ್ತದೆ ಇದಕೆಲ್ಲಾ ಕಡಿವಾಣವಾಗಲು ಫ್ಲೈಓವರ್ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರಳಲಾಗಿದೆ. ಎಷ್ಟು ಗಂಟೆಯವರೆಗೂ ಫ್ಲೈಓವರ್ ಬಂದ್..? ಯಾವೆಲ್ಲಾ ಸ್ಥಳಗಳಲ್ಲಿ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಝನದಲ್ಲಿ ತಿಳಿಯೋಣ ಬನ್ನಿ...
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕರ ವ್ಹೀಲಿಂಗ್‌ನಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವುದರಿಂದ ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಎಲ್ಲಾ ಮೇಲ್ಸೇತುವೆಗಳಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ ವರದಿ
ಸಂಚಾರಿ ಪೊಲೀಸರು ಪಬ್ಲಿಕ್ ಐ ಅಪ್ಲಿಕೇಶನ್ ಬದಲಿಗೆ ಅಸ್ತ್ರಂ ಅಪ್ಲಿಕೇಶನ್ ಬಳಸಿ ಟ್ರಾಫಿಕ್ ನಿಯಮ ಉಲ್ಲಂಘನೆ ವರದಿ ಮಾಡಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬದಿಂದಾಗಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಹೆಚ್ಚಾಗಿ ಇದೆ. ಆದರಿಂದ ಫ್ಲೈಓವರ್ ಮುಚ್ಚುವ ನಿರ್ಧಾರವನ್ನು ಮಾಡಿದ್ದಾರೆ.
ವ್ಹೀಲಿಂಗ್ ಪ್ರಕರಣಗಳು ಹೆಚ್ಚು
ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.ಇದಕ್ಕಾಗಿ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಎಷ್ಟು ಗಂಟೆಯವರೆಗೆ ಫ್ಲೈಓವರ್ ಬಂದ್ ?
ಬೆಂಗಳೂರು ನಗರದಾದ್ಯಂತ ಮೇಲ್ಸೇತುವೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ಮಾಡಲಾಗಿದೆ.
ಎಲ್ಲಿಲ್ಲೆ?
ಕೆಆರ್ ಮಾರುಕಟ್ಟೆ, ಶಾಂತಿನಗರ ಡಬಲ್ ರೋಡ್ ಫ್ಲೈಓವರ್ ಸೇರಿದಂತೆ ನಗರದ ಎಲ್ಲ ಪ್ರಮುಖ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರವನ್ನು ನಿರ್ಭಧ ಮಾಡಲಾಗಿದೆ.
ಸಾಲು ರಜೆ ಹಿನ್ನೆಲೆ ಟ್ರಾಫಿಕ್ ಜಾಮ್ ಹೆಚ್ಚು
ಈ ತಿಂಗಳು ಸಾಲು ಸಾಲು ರಜೆಗಳು ಇರುವುದರಿಂದ ಬೆಂಗಳೂರಿನಲ್ಲಿ ಇರುವವರು ತಮ್ಮ ಯಾರಿಗೆ ತರಲುತ್ತಾರೆ, ಹೂ, ಹಣ್ಣು ತರಕಾರಿ, ಬಟ್ಟೆ ಖರೀದಿಕ್ಕಾಗಿ ಜನಸಂದಣಿ ಬೆಂಗಳೂರಿನಲ್ಲಿ ತುಂಬಿ ತುಳುಕುತ್ತಿದೆ.ಈಗಾಗಲೇ ಸಂಭಾವ್ಯ ಸಂಚಾರ ದಟ್ಟಣೆ ಪ್ರದೇಶಗಳ ಬಗ್ಗೆ ಎಕ್ಸ್ ಮೂಲಕ ಮಾಹಿತಿ ಲೋಲೀಸರು ಮಾಹಿತಿಯನ್ನು ನೀಡಿದ್ದಾರೆ. ಸಾವರ್ಜನಿಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಹೆಚ್ಚಿನ ವಾಹನಗಳಲ್ಲಿ ಸಾರ್ವಜನಿಕರು ಹೋಗುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
TP-ASTraM ಅಪ್ಲಿಕೇಶನ್ ಅನ್ನು ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳನ್ನು ಸುಲಭವಾಗಿ ವರದಿ ಮಾಡಬಹುದು ಮತ್ತು ಈ ಮೂಲಕ ಸಂಚಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಪ್ರಭಾವಿಸುತ್ತದೆ. ಈ ಅಪ್ಲಿಕೇಶನನ್ನು Google Play Store ಮತ್ತು App Store ಮೇಲೆ ಡೌನ್‌ಲೋಡ್ ಮಾಡಬಹುದು. ಇದರ ಮೂಲಕ, ನೀವು ನೈಜ-ಸಮಯದಲ್ಲಿ ಸಂಚಾರದ ಬದಲಾವಣೆಗಳನ್ನು ನೋಡಬಹುದು, ನಿಯಮ ಉಲ್ಲಂಘನೆಗಳನ್ನು ದಾಖಲು ಮಾಡಬಹುದು, ಹಾಗೂ ದಂಡ ಪಾವತಿಸಲು ಸಂಬಂಧಿಸಿದ ಆಯ್ಕೆಗಳು ಪಡೆಯಬಹುದು.
ನೀವು ಅಲ್ಲಿ ಯಾವುದಾದರೂ ಟ್ರಾಫಿಕ್ ಉಲ್ಲಂಘನೆಗಳನ್ನು ಕಂಡುಹಿಡಿದರೆ, ನೀವು ಈ ಅಪ್ಲಿಕೇಶನನ್ನು ಬಳಸಲು, ಸರಿಯಾದ ಮಾಹಿತಿಯನ್ನು ನೀಡಿ ದಂಡವನ್ನು ಪಾವತಿಸಲು ಸಹಾಯ ಮಾಡಬಹುದು. ಇದರಿಂದ ಸಂಚಾರ ನಿಯಮಗಳ ಜಾಗೃತಿ ಹೆಚ್ಚಿಸಲಾಗುತ್ತದೆ ಮತ್ತು ಎಲ್ಲಾ ಸಾರ್ವಜನಿಕರಿಗೂ ಸುರಕ್ಷಿತ ಸಂಚಾರದ ಅವಸ್ಥೆ ಮಾಡಲು ಸಹಾಯವಾಗುತ್ತದೆ.
ಪೊಲೀಸರ ಈ ಹೊಸ ಪ್ರಯತ್ನ ಸಾರ್ವಜನಿಕರು, ಸಂಚಾರ ವಿಭಾಗದಿಂದ ಕೈಗೊಂಡಿರುವ ಈ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿ ಸಲು ಕೋರಲಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ಟ್ರಾಫಿಕ್ ಪೊಲೀಸರು ಮಾಹಿತಿಯನ್ನು ತಿಳಿಸಿದ್ದಾರೆ


Click it and Unblock the Notifications