ಇನ್ನು ಮುಂದೆ ಬ್ಯಾಂಕ್ ಗಳಲ್ಲಿ ಹಾಕಿದ ಚೆಕ್ ಬೇಗ ನಗದು ಆಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರನೇ ದ್ವೈ ಮಾಸಿಕ ಹಣಕಾಸು ನೀತಿ ಹೇಳಿಕೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರ ಈ ವಿಚಾರ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿ, ಚೆಕ್ ಟ್ರಂಕೇಷನ್ ಸಿಸ್ಟಮ್ (ಸಿಟಿಎಸ್) ಅನ್ನು ಈ ವರ್ಷದ ಸೆಪ್ಟೆಂಬರ್ ನಿಂದ ದೇಶದಾದ್ಯಂತ ಪರಿಚಯಿಸಲಾಗುವುದು ಎಂದು ತಿಳಿಸಿದೆ.
ಸಿಟಿಎಸ್ ನಲ್ಲಿ ಬ್ಯಾಂಕ್ ಗಳು ನಗದು ತೀರುವಳಿಗೆ ಚೆಕ್ ಗಳ ಸ್ಕ್ಯಾನ್ ಆದ ಪ್ರತಿಯನ್ನು ಬಳಸುತ್ತವೆ. ಚೆಕ್ ನಗದು ಪ್ರಕ್ರಿಯೆಯು ಭಾಗಶಃ ಎಲೆಕ್ಟ್ರಾನಿಕ್ ಆಗುತ್ತದೆ. ಇದರಿಂದ ತೀರುವಳಿ ಪ್ರಕ್ರಿಯೆ ಸಮಯವು ಕಡಿಮೆ ಆಗಲಿದೆ. ಫಿಸಿಕಲ್ ತೀರುವಳಿ ಪ್ರಕ್ರಿಯೆಯಲ್ಲಿ ಬ್ಯಾಂಕ್ ಗಳು ಚೆಕ್ ಗಳನ್ನು ಕಳೆದುಹಾಕುವ ಸಾಧ್ಯತೆಗಳು ಇರುತ್ತವೆ. ಆದರೆ ಇನ್ನು ಆ ಸಮಸ್ಯೆ ಆಗುವುದಿಲ್ಲ.
ಡಿಜಿಟಲ್ ವ್ಯವಹಾರಗಳು ವೇಗ ಪಡೆಯದ ಹೊರತು ಸಿಟಿಎಸ್ ಅನ್ನು ಸಂಪೂರ್ಣವಾಗಿ ಪರಿಣಾಮಕಾರಿ ಮಾಡುವುದು ಸಾಧ್ಯವಿಲ್ಲ. ಬ್ಯಾಂಕರ್ ಗಳು ನೀಡುವ ಮಾಹಿತಿ ಪ್ರಕಾರ, ಬಹುತೇಕ ಬ್ಯಾಂಕ್ ಗಳು ಈಗಾಗಲೇ ಸಿಟಿಎಸ್ ಅಡಿಯಲ್ಲಿ ಚೆಕ್ ತೀರುವಳಿ ಪ್ರಕ್ರಿಯೆ ಆಗುತ್ತಿದೆ.

ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಚೆಕ್ ನ ಭಾವಚಿತ್ರವನ್ನು ಕಳುಹಿಸಲಾಗುತ್ತದೆ. ಮೊದಲಿಗೆ ಕ್ಲಿಯರಿಂಗ್ ಹೌಸ್, ಆ ನಂತರ ಯಾವ ಬ್ರ್ಯಾಂಚ್ ನಲ್ಲಿ ಹಣ ತೀರುವಳಿ ಆಗಬೇಕಾಗಿರುತ್ತದೋ ಅಲ್ಲಿಗೆ ಕಳುಹಿಸಲಾಗುತ್ತದೆ. ಪ್ರತಿ ಭಾವಚಿತ್ರದಲ್ಲೂ ಡಿಜಿಟಲ್ ಸಹಿ ಇರುತ್ತದೆ. ಇನ್ನು ಭಾವಚಿತ್ರದ ಪರಿಶೀಲನೆ ವಿವಿಧ ಹಂತದಲ್ಲಿ ಆಗುತ್ತದೆ.
ಹಳೇ ಪದ್ಧತಿಯಲ್ಲಿ ಗ್ರಾಹಕರು ಪ್ರಸೆಂಟ್ ಮಾಡಿದ ಚೆಕ್ ಅನ್ನು ಕ್ಲಿಯರಿಂಗ್ ಹೌಸ್ ಗೆ ಕಳುಹಿಸಲಾಗುತ್ತಿತ್ತು. ಆ ನಂತರ ಫಿಸಿಕಲ್ ಪ್ರತಿಯನ್ನು ಯಾವ ಶಾಖೆಯಲ್ಲಿ ತೀರುವಳಿ ಆಗಬೇಕೋ ಅಲ್ಲಿಗೆ ಕಳುಹಿಸಲಾಗುತ್ತಿತ್ತು. ಒಂದು ಸಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬ್ಯಾಂಕ್ ಗಳು ಗ್ರಾಹಕರ ಖಾತೆ ಹಣ ಜಮೆ ಮಾಡುತ್ತಿದ್ದವು.


Click it and Unblock the Notifications