ನಿಮ್ಮಗೆ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳು ಬಾಕಿ ಇದ್ಯಾ..? ಹಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಹೌದು, ಬ್ಯಾಂಕ್‌ಗಳಿಗೆ ಸತತವಾಗಿ ಮೂರುದಿನಗಳ ರಜೆ ಇದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗೆ ಸಂಬಂಧಿಸಿದ ಕೆಲಸಗಳು ಅತಿ ಹೆಚ್ಚಾಗಿಆನ್‌ಲೈನ್‌ನಲ್ಲಿ ನಡೆಯುತ್ತವೆ, ಆದರೆ ಕೆಲವೊಂದು ಕೆಲಸಗಳಿಗಾಗಿ ಬ್ಯಾಂಕ್ ಶಾಖೆಗೆ ಹೋಗುವುದು ಅನಿವಾರ್ಯ. ನೀವೇನಾದರೂ ಈ ವಾರ ಜೂನ್ 23 ರಿಂದ 29 ರ ನಡುವೆ ನೀವು ಬ್ಯಾಂಕಿಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ ಈ ನಡುವೆಯಾವ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಈ ವಾರ ಯಾವ ದಿನ ಬ್ಯಾಂಕ್‌ಗೆ ರಜೆ ಇರುತ್ತದೆ...?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( RBI) ರಜಾ ಕ್ಯಾಲೆಂಡರ್ ಪ್ರಕಾರ ಜೂನ್ 23 ರಿಂದ ಜೂನ್ 29 ರವರೆಗೆ ಮೂರು ದಿನಗಳ ಕಾಲ ಬ್ಯಾಂಕುಗಳು ಓಪನ್ ಇರುವುದಿಲ್ಲ. ಚೆಕ್ ಠೇವಣಿ ಇಡುವುದು, ಹೊಸ ಖಾತೆ ತೆರೆಯುವಂತಹ ಕೆಲಸಗಳಿಗಾಗಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದರೆ, ಜೂನ್ 27 ರ ಮೊದಲು ನಿಮ್ಮ ಕೆಲಸವನ್ನು ಮಾಡಿಕೊಳ್ಳವುದು ಉತ್ತಮ. ಇಲ್ಲವಾದರೂ ನೀವು ಇನ್ನೂ ಮೂರು ದಿನಗಳವರೆಗೂ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಂದೂಕೆಯನ್ನು ಮಾಡಬೇಕಾಗುತ್ತದೆ.
ದೇಶಾದ್ಯಂತ ಜೂನ್ 28 ಮತ್ತು 29 ರಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಮತ್ತು ಕೆಲವು ರಾಜ್ಯಗಳು ಜೂನ್ 27 ರಂದು ಸಹ ರಜೆಯನ್ನು ನೀಡಲಾಗುತ್ತದೆ. ಆದರೆ ಯಾವಾಗಲ್ಲೂ ಆನ್ಲೈನ್ ಸೇವೆಗಳು ಲಭ್ಯವಿರುತ್ತೇವೆ.
ಜೂನ್ 28 (ಶನಿವಾರ): ಸಾಮಾನ್ಯವಾಗಿ ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರುತ್ತಾವೆ.
ಜೂನ್ 29 (ಭಾನುವಾರ): ವಾರಂತ್ಯ ರಜೆ
ಜೂನ್ 27 (ಶುಕ್ರವಾರ): ರಥಯಾತ್ರೆ/ಕಾಂಗ್ ಸಂದರ್ಭದಲ್ಲಿ ಒಡಿಶಾ ಮತ್ತು ಮಣಿಪುರದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇತರ ರಾಜ್ಯಗಳಲ್ಲಿ, ಜೂನ್ 27 ರಂದು ಬ್ಯಾಂಕುಗಳು ತೆರೆದಿರುತ್ತವೆ.ನೀವು ಒಡಿಶಾ ಅಥವಾ ಮಣಿಪುರದಲ್ಲಿ ವಾಸಿಸುತ್ತಿದ್ದರೆ, ಶುಕ್ರವಾರದಿಂದ ಭಾನುವಾರದವರೆಗೆ ಸತತ ಮೂರು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಉಳಿದ ದಿನಗಳಲ್ಲಿ ಬ್ಯಾಂಕುಗಳು ಓಪನ್ ಇರುತ್ತದೆಯೇ?
ಹೌದು, ಈ ವಾರ ಜೂನ್ 23 ರಿಂದ 26 ರವರೆಗೆ ಮತ್ತು ಜೂನ್ 30 ರವರೆಗೆ, ದೇಶಾದ್ಯಂತ ಹೆಚ್ಚಿನ ಬ್ಯಾಂಕ್ ಶಾಖೆಗಳು ತೆರೆದಿರುತ್ತವೆ. ಆದ್ದರಿಂದ ಈ ದಿನಗಳಲ್ಲಿ ಬ್ಯಾಂಕ್‌ನ ಪ್ರಮುಖ ಕೆಲಸವನ್ನು ಮಾಡಿ ಮುಗಿಸಿ.
ಬ್ಯಾಂಕ್ ಶಾಖೆಯ ಸಮಯಗಳು ಯಾವುವು?
ಸಾರ್ವಜನಿಕ ವಲಯದ ಬ್ಯಾಂಕುಗಳು (SBI, PNB, ಬ್ಯಾಂಕ್ ಆಫ್ ಇಂಡಿಯಾ ನಂತಹವು): ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ತೆರೆದಿರುತ್ತದೆ.
ಖಾಸಗಿ ಬ್ಯಾಂಕುಗಳು (ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್, ಕೋಟಕ್ ಮಹೀಂದ್ರಾ ನಂತಹವು): ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30 ಅಥವಾ ಸಂಜೆ 4:30 ರವರೆಗೆ.
ಬ್ಯಾಂಕ್ ಆಫ್ ಬರೋಡಾ: ಸಾಮಾನ್ಯವಾಗಿ ಬೆಳಿಗ್ಗೆ 9:45 ರಿಂದ ಸಂಜೆ 4:45 ರವರೆಗೆ. ಕೆನರಾ ಬ್ಯಾಂಕ್: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3:30 ರವರೆಗೆ. (ಕೆಲವು ಶಾಖೆಗಳಲ್ಲಿ ಸಮಯಗಳು ಸ್ವಲ್ಪ ಬದಲಾಗಬಹುದು).
ಬ್ಯಾಂಕ್ ಮುಚ್ಚಿದ್ದರೂ ಸಹ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಯುಪಿಐ, ಐಎಂಪಿಎಸ್, ನೆಫ್ಟ್ ನಂತಹ ನಿಮ್ಮ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಹಣದ ವಹಿವಾಟು, ಬ್ಯಾಲೆನ್ಸ್ ಚೆಕ್, ಚೆಕ್‌ಬುಕ್ ವಿನಂತಿ, ಬಿಲ್ ಪಾವತಿ ಮುಂತಾದ ಕಾರ್ಯಗಳನ್ನು ನೀವು ಸುಲಭವಾಗಿ ಮಾಡಬಹುದು.
ಯಾವೆಲ್ಲಾ ಸೇವೆಗಳು ಲಭ್ಯ?
ನೀವು ಬ್ಯಾಂಕುಗಳಿಗೆ ರಜೆ ಇದ್ದರೂ ಕೂಡ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂನಂತಹ ಸೇವೆಗಳ ಮೂಲಕ ಬ್ಯಾಂಕಿಗೆ ಹೋಗದೆಯೇ ಅನೇಕ ಹಣಕಾಸು ಕೆಲಸಗಳನ್ನು ಮಾಡಬಹುದು.


Click it and Unblock the Notifications