ಬೆಂಗಳೂರು, ಸೆಪ್ಟೆಂಬರ್ 2: ಸೆಪ್ಟೆಂಬರ್ 7 ರಂದು ಹಿಂದೂಗಳ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಾರ್ಷಿಕವಾಗಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ, ಇದು ಭಾರತ ಮತ್ತು ಹೊರಗಿನ ಹಿಂದೂ ಭಕ್ತರಿಗೆ ಮಹತ್ವದ ಹಬ್ಬವಾಗಿದೆ.
ಪ್ರತಿ ವರ್ಷದಂತೆ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿಯನ್ನು ಭಾರತವು ವಿಜೃಂಭಣೆಯಿಂದ ಮತ್ತು ಅದ್ದೂರಿಯಿಂದ ಆಚರಿಸಲು ಸಜ್ಜಾಗಿರುವುದರಿಂದ, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಬ್ಯಾಂಕ್ಗಳು ಆ ದಿನದಂದು ತೆರೆದಿರುತ್ತವೆಯೇ ಎಂದು ಜನರು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಗಣೇಶ ಚತುರ್ಥಿ 2024 ರಂದು ಬ್ಯಾಂಕ್ ರಜೆ:
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು, ಭಾನುವಾರ ಮತ್ತು ಇತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರವಾದ ಈ ಶನಿವಾರ (ಸೆಪ್ಟೆಂಬರ್ 7), ಗಣೇಶ ಚತುರ್ಥಿ ದಿನ ಕೆಲವು ರಾಜ್ಯಗಳಲ್ಲಿನ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಗ್ರಾಹಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಆರ್‌ಬಿಐ ಮಾಸಿಕ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಯೋಜಿಸಬಹುದು.
ಸೆಪ್ಟೆಂಬರ್ 7 ರಂದು ಬ್ಯಾಂಕ್ ರಜೆ ಇರುವ ರಾಜ್ಯಗಳು:
ಗಣೇಶ ಚತುರ್ಥಿ, ವರಸಿದ್ಧಿ ವಿನಾಯಕ ವ್ರತ ಹಬ್ಬಕ್ಕೆ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ತಮಿಳುನಾಡು, ಹೈದರಾಬಾದ್ - ಆಂಧ್ರಪ್ರದೇಶ, ಹೈದರಾಬಾದ್ - ತೆಲಂಗಾಣ, ಗೋವಾ ಮತ್ತು ಕೇರಳದಲ್ಲಿ ಶನಿವಾರ, ಸೆಪ್ಟೆಂಬರ್ 7 ರಂದು ಬ್ಯಾಂಕುಗಳು ಮುಚ್ಚಿರುತ್ತವೆ.
ಸೆಪ್ಟೆಂಬರ್ 2024 ರಲ್ಲಿ ಬ್ಯಾಂಕ್ ರಜೆ:
ಸೆಪ್ಟೆಂಬರ್ 2024 ರಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಶ್ರೀಮಂತ ಶಂಕರದೇವರ ತಿರುಭಾವ ತಿಥಿ, ಗಣೇಶ ಚತುರ್ಥಿ, ಮೊದಲ ಓಣಂ, ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್, ಇಂದ್ರಜಾತ್ರಾ/ಈದ್-ಎ-ಮಿಲಾದ್ ಪಾಂಗ್-ಲಬ್ಸೋಲ್, ಈದ್-ಇ-ಮಿಲಾದ್ಉಲ್-ನಬಿ, ಶ್ರೀ ನಾರಾಯಣ ಗುರು ಸಮಾಧಿ ದಿನ, ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ ಶುಕ್ರವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 2024 ಬ್ಯಾಂಕ್ ರಜೆ: ರಾಜ್ಯವಾರು ರಜೆ ಪಟ್ಟಿ
ಸೆಪ್ಟೆಂಬರ್ 4, ಬುಧವಾರ: ಅಸ್ಸಾಂನ ಶಂಕರದೇವರ ತಿರುಭಾವ ತಿಥಿ ಪ್ರಯಕ್ತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 7, ಶನಿವಾರ: ಗಣೇಶ ಚತುರ್ಥಿ, ವರಸಿದ್ಧಿ ವಿನಾಯಕ ವ್ರತ ಹಬ್ಬದ ಪ್ರಯುಕತ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ತಮಿಳುನಾಡು, ಹೈದರಾಬಾದ್ - ಆಂಧ್ರಪ್ರದೇಶ, ಹೈದರಾಬಾದ್ - ತೆಲಂಗಾಣ, ಗೋವಾ ಮತ್ತು ಕೇರಳದಲ್ಲಿ ಬ್ಯಾಂಕುಗಳು ರಜೆ ಇರುತ್ತದೆ.
ಸೆಪ್ಟೆಂಬರ್ 14, ಶನಿವಾರ (ಎರಡನೇ): ಜಾರ್ಖಂಡ್ ಮತ್ತು ಕೇರಳದಲ್ಲಿ ಕರ್ಮ ಪೂಜೆ/ಮೊದಲ ಓಣಂ ಪ್ರಯುಕ್ತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸೆಪ್ಟಂಬರ್ ಎರಡನೇ ಶನಿವಾರವಾಗಿರುವುದರಿಂದ ದೇಶದಾದ್ಯಂತ ಬ್ಯಾಂಕ್‌ಗಳು ಆ ದಿನ ಮುಚ್ಚಿರುತ್ತವೆ.
ಸೆಪ್ಟೆಂಬರ್ 16, ಸೋಮವಾರ: ಮಿಲಾದ್-ಉನ್-ನಬಿ ನಿಮಿತ್ತ ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಜಮ್ಮು, ಕೇರಳ, ಉತ್ತರ ಪ್ರದೇಶ, ನವದೆಹಲಿ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ.
ಸೆಪ್ಟೆಂಬರ್ 17, ಮಂಗಳವಾರ: ಇಂದ್ರಜಾತ್ರಾ/ಈದ್-ಎ-ಮಿಲಾದ್ (ಮಿಲಾದ್-ಉನ್-ನಬಿ) ಗಾಗಿ ಸಿಕ್ಕಿಂ ಮತ್ತು ಛತ್ತೀಸ್‌ಗಢದಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 18, ಬುಧವಾರ: ಪಾಂಗ್-ಲಬ್ಸೋಲ್‌ಗಾಗಿ ಸಿಕ್ಕಿಂನಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 20, ಶುಕ್ರವಾರ: ಈದ್-ಇ-ಮಿಲಾದ್-ಉಲ್-ನಬಿ ನಂತರ ಶುಕ್ರವಾರದಂದು ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 21, ಶನಿವಾರ: ಶ್ರೀ ನಾರಾಯಣ ಗುರು ಸಮಾಧಿ ದಿನಕ್ಕಾಗಿ ಕೇರಳದಲ್ಲಿ ಬ್ಯಾಂಕುಗಳು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 23, ಸೋಮವಾರ: ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನದಂದು ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.


Click it and Unblock the Notifications