ನವರಾತ್ರಿ ಸಂಭ್ರಮ ಈಗಾಗಲೇ ಕೊನೆಯಾಗಿದೆ. ನಾವು ಅಕ್ಟೋಬರ್ ಅಂತ್ಯದಲ್ಲಿದ್ದೇವೆ, ಜೊತೆಗೆ ಮುಂದಿನ ಹಬ್ಬದ ತಯಾರಿಯಲ್ಲಿದ್ದೇವೆ. ಈ ನಡುವೆ ನವೆಂಬರ್‌ನಲ್ಲಿರುವ ಬ್ಯಾಂಕ್ ರಜಾದಿನಗಳ ಬಗ್ಗೆ ನಾವು ತಿಳಿದಿರುವುದು ಅತೀ ಮುಖ್ಯವಾಗಿದೆ. ಗ್ರಾಹಕರಿಗೆ ಸಹಾಯವಾಗಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೊದಲೇ ವಾರದ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ನವೆಂಬರ್‌ನಲ್ಲಿಯೂ ಪಟ್ಟಿ ಬಿಡುಗಡೆ ಮಾಡಿದೆ.
ನವೆಂಬರ್‌ನಲ್ಲಿ, ದೀಪಾವಳಿ, ಗೋವರ್ಧನ ಪೂಜೆ, ಛತ್ ಪೂಜೆ, ಮತ್ತು ಸಾಮಾನ್ಯ ವಾರಾಂತ್ಯ ಸೇರಿ ಒಟ್ಟು 15 ಬ್ಯಾಂಕ್ ರಜೆಗಳು ಇರುತ್ತವೆ. ನಿಮ್ಮ ಬ್ಯಾಂಕಿಂಗ್ ಅಗತ್ಯತೆಗಳೊಂದಿಗೆ ವ್ಯವಹರಿಸುವಾಗ ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಈ ರಜಾದಿನಗಳನ್ನು ನೀವು ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ನವೆಂಬರ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:
* ನವೆಂಬರ್ 1, 2023 - ಕನ್ನಡ ರಾಜ್ಯೋತ್ಸವ/ಕುಟ್/ಕರ್ವಾ ಚೌತ್ ಕಾರಣ ಬೆಂಗಳೂರು, ಇಂಫಾಲ್ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
* ನವೆಂಬರ್ 5, 2023 - ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 10, 2023 - ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ/ ದೀಪಾವಳಿ/ ದೀಪಾವಳಿಯ ಕಾರಣ ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
* ನವೆಂಬರ್ 11, 2023 - ಎರಡನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 12, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 13, 2023 - ಗೋವರ್ಧನ ಪೂಜೆ/ ಲಕ್ಷ್ಮಿ ಪೂಜೆ/ ದೀಪಾವಳಿ ಕಾರಣ, ಅಗರ್ತಲಾ, ಡೆಹ್ರಾಡೂನ್, ಗ್ಯಾಂಗ್ಟಾಕ್, ಇಂಫಾಲ್, ಜೈಪುರ, ಕಾನ್ಪುರ ಮತ್ತು ಲಕ್ನೋದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
* ನವೆಂಬರ್ 14, 2023 - ದೀಪಾವಳಿ (ಬಲಿ ಪ್ರತಿಪದ) ವಿಕ್ರಮ ಸಂವತ್ ಹೊಸ ವರ್ಷ/ಲಕ್ಷ್ಮಿ ಪೂಜೆಯ ಕಾರಣದಿಂದ ಅಹಮದಾಬಾದ್, ಬೇಲಾಪುರ, ಬೆಂಗಳೂರು, ಗ್ಯಾಂಗ್‌ಟಾಕ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
* ನವೆಂಬರ್ 15, 2023 - ಭಾಯಿ ದೂಜ್/ ಚಿತ್ರಗುಪ್ತ ಜಯಂತಿ/ ಲಕ್ಷ್ಮಿ ಪೂಜೆ/ ನಿಂಗಲ್ ಚಕ್ಕುಬಾ/ ಭ್ರಾತ್ರಿ ದ್ವಿತೀಯಾ ದಿನ ಗ್ಯಾಂಗ್‌ಟಾಕ್, ಇಂಫಾಲ್, ಕಾನ್ಪುರ, ಕೋಲ್ಕತ್ತಾ, ಲಕ್ನೋ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
* ನವೆಂಬರ್ 19, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 20, 2023 - ಛಾತ್ ಹಬ್ಬದ ಕಾರಣ ಪಾಟ್ನಾ ಮತ್ತು ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ.
* ನವೆಂಬರ್ 23, 2023 - ಸೆಂಗ್ ಕುಟ್ ಸ್ನೆಮ್/ ಇಗಾಸ್ ಬಾಗ್ವಾಲ್ ಕಾರಣ ಡೆಹ್ರಾಡೂನ್ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
* ನವೆಂಬರ್ 25, 2023 - ನಾಲ್ಕನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 26, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 27, 2023 - ಗುರುನಾನಕ್ ಜಯಂತಿ/ ಕಾರ್ತಿಕ್ ಪೂರ್ಣಿಮಾದ ದಿನ ಅಹಮದಾಬಾದ್, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಕೊಚ್ಚಿ, ಪಣಜಿ, ಪಾಟ್ನಾ, ತಿರುವನಂತಪುರ ಮತ್ತು ಶಿಲ್ಲಾಂಗ್ ಹೊರತುಪಡಿಸಿ ದೇಶದಾದ್ಯಂತ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
* ನವೆಂಬರ್ 30, 2023 - ಕನಕದಾಸರ ಜಯಂತಿ ದಿನದಂದು ಬೆಂಗಳೂರಿನಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಕರ್ನಾಟಕದಲ್ಲಿ ಬ್ಯಾಂಕ್ ರಜೆ
* ನವೆಂಬರ್ 1, 2023 - ಕನ್ನಡ ರಾಜ್ಯೋತ್ಸವ
* ನವೆಂಬರ್ 5, 2023 - ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 11, 2023 - ಎರಡನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 12, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 13, 2023 - ಗೋವರ್ಧನ ಪೂಜೆ/ ಲಕ್ಷ್ಮಿ ಪೂಜೆ/ ದೀಪಾವಳಿ
* ನವೆಂಬರ್ 19, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 25, 2023 - ನಾಲ್ಕನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 26, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 30, 2023 - ಕನಕದಾಸರ ಜಯಂತಿ


Click it and Unblock the Notifications