ನಾಡಿನ ಜನರು ಮಕರ ಸಂಕ್ರಾಂತಿ ಸಂಭ್ರಮದಲ್ಲಿದ್ದಾರೆ. ಎಲ್ಲೆಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಾಗ್ತಿದೆ. ಜನವರಿ 14ರಂದು ದೇಶವೇ ಮಕರ ಸಂಕ್ರಾಂತಿ ಸಂಭ್ರದಲ್ಲಿರುವಾಗ ಆ ದಿನ ಬ್ಯಾಂಕ್‌ಗಳು ತೆರಯತ್ತವೆಯಾ ಅಥವಾ ಮುಚ್ಚುತ್ತವೆಯಾ ಎಂಬ ಗೊಂದಲ ಹಲವರಿಗಿರುತ್ತದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಜನವರಿ 2025 ಕ್ಕೆ ರಜರ ದಿನಗಳನ್ನ ನಿದಿಪಡಿಸಿದೆ. ಇನ್ನು ಆರ್‌ಬಿಐ ವೇಳಾಪಟ್ಟಿಯ ಪ್ರಕಾರ, ಜನವರಿ 14 ರಂದು ಅಂದರೆ ಮಕರ ಸಂಕ್ರಾಂತಿಯ ಹಬ್ಬದಂದು ಎಲ್ಲಾ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಆದ್ರೆ ರಾಜ್ಯದ ಕೆಲವು ರಾಜ್ಯಗಳು ಮತ್ತು ನಗರಗಳಲ್ಲಿರುವ ಬ್ಯಾಂಕ್‌ಗಳಿಗೆ ರಜೆಯನ್ನ ನೀಡಿದೆ.

ಜನವರಿ 14 ರಂದು ಯಾವ ರಾಜ್ಯದ ಬ್ಯಾಂಕುಗಳಿಗೆ ರಜೆ ಇರಲಿದೆ
ಜನವರಿ 14 ರಂದು ಕೆಲವು ರಾಜ್ಯದ ಬ್ಯಾಂಕ್‌ಗಳಿಗೆ ಮಾತ್ರ ರಜೆ ಇರಲಿದೆ. ಅದರಲ್ಲಿ ಕರ್ನಾಟಕ ಅಹಮದಾಬಾದ್, ಭುವನೇಶ್ವರ, ಚೆನ್ನೈ, ಗುವಾಹಟಿ, ಆಂಧ್ರಪ್ರದೇಶ, ತೆಲಂಗಾಣ, ಇಟಾನಗರ, ಕಾನ್ಪುರ ಮತ್ತು ಲಕ್ನೋ ನಗರಗಳಲ್ಲಿ ಬ್ಯಾಂಕುಗಳಿಗೆ ಮಕರ ಸಂಕ್ರಾಂತಿ ಪ್ರಯುಕ್ತ ರಜೆ ಇರಲಿದೆ. ಇದಲ್ಲದೆ, ಗುಜರಾತ್‌ನಲ್ಲಿ ಉತ್ತರಾಯಣ ಪುಣ್ಯಕಾಲ ಮತ್ತು ತಮಿಳುನಾಡಿನ ಪೊಂಗಲ್‌ನಂತಹ ವಿಭಿನ್ನ ಹಬ್ಬಗಳ ಹಿನ್ನೆಲೆ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದಲ್ಲದೆ, ಸಿಕ್ಕಿಂ ಮತ್ತು ನೇಪಾಳದಲ್ಲಿ ಮಾಘ ಸಂಕ್ರಾಂತಿ ಹಾಗೆ ಅಸ್ಸಾಂನಲ್ಲಿ ಮಾಘ ಬಿಹುವನ್ನು ಆಚರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ಕೆಲವು ರಾಜ್ಯಗಳಲ್ಲಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಜನವರಿ 14 ಹೊಎತುಪಡಿಸಿ ಯಾವೆಲ್ಲಾ ದಿನಗಳು ಬ್ಯಾಂಕ್‌ಗಳು ಮುಚ್ಚಲಿವೆ
ಅನೇಕ ರಾಜ್ಯಗಳಲ್ಲಿ 14ನೇ ತಾರೀಖು ಮಾತ್ರವಲ್ಲದೆ, ಇತರೆ ಸಾರ್ವಜಿಕ ರಜೆ ದಿನಗಳು ಕೂಡ ಒಳಗೊಂಡಿವೆ. ಜನವರಿ 14ರ ಸುಮಾರಿಗೆ ಶಾಲೆಗಳು ಮತ್ತು ಕಚೇರಿಗಳು ನಾಲ್ಕರಿಂದ ಐದು ದಿನಗಳವರೆಗೆ ರಜೆ ಇರಲಿದೆ. ಜನವರಿ 11ರಂದು ಎರಡನೇ ಶನಿವಾರ ಮತ್ತು ಜನವರಿ 12 ರಂದು ಭಾನುವಾರ ಸೇರಿದಂತೆ ಹಲವಾರು ರಜಾದಿನಗಳ ಕಾರಣ ಜನರು ಏಳು ದಿನಗಳವರೆಗೆ ರಜೆ ಇರಲಿದೆ.
ಇದಲ್ಲದೇ ಜನವರಿ 11 ರಂದು ಇಮೊಯಿನು ಇರತ್ಪಾ ಕಾರಣದಿಂದ ಐಜ್ವಾಲ್ ಮತ್ತು ಇಂಫಾಲ್‌ನಲ್ಲಿ ರಜೆ ಇರುತ್ತದೆ. ಜನವರಿ 13 ರಂದು ಲೋಹ್ರಿ ಸಂದರ್ಭದಲ್ಲಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ ಇಲಿದೆ. ಅದೇ ಸಮಯದಲ್ಲಿ, ತೆಲಂಗಾಣದಲ್ಲಿ ಜನವರಿ 13 ರಿಂದ 17 ರವರೆಗೆ ನಿರಂತರ ರಜಾದಿನಗಳು ಇರಲಿದೆ.
ತಮಿಳುನಾಡಿನಲ್ಲಿ ಪೊಂಗಲ್ ಹಿನ್ನೆಲೆ ರಜೆ
ಜನವರಿ 14 ರಂದು ಪೊಂಗಲ್ ಹಿನ್ನೆಲೆ ತಮಿಳುನಾಡಿನಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಇದರ ನಂತರ ಜನವರಿ 15 ರಂದು ತಿರುವಳ್ಳುವರ್ ದಿನ ಮತ್ತು ಜನವರಿ 16 ರಂದು ಉಳವರ್ ತಿರುನಾಳ್. ಹೀಗಾಗಿ ಜನವರಿ 17 ರಂದು ಕೂಡ ರಜೆ ಇರುವ ಸಾಧ್ಯತೆ ಇದೆ. ಶನಿವಾರ-ಭಾನುವಾರದ ರಜಾದಿನಗಳ ಕಾರಣದಿಂದಾಗಿ ಜನವರಿ 18-19 ರ ವಾರಾಂತ್ಯದಲ್ಲಿ ಹೆಚ್ಚಿನ ಬ್ಯಾಂಕುಗಳು ಮಚ್ಚಿರುತ್ತವೆ.
ಇನ್ನು ಈ ರಜೆ ದಿನಗಳ ವೇಳೆ ನೀವು ಬ್ಯಾಂಕ್ ಸಂಬಂಧಿತ ಕೆಲಸಗಳ ಕುರಿತು ನೀವು ಚಿಂತಿಸುವ ಅಗತ್ಯ ಇಲ್ಲ. ನೀವು ನಿಮ್ಮ ಮೊಬೈಲ್ ಮೂಲಕ ಬ್ಯಾಂಕ್ ಸೇವೆಗಳನ್ನ ಪಡೆಯಬಹುದು. UPI ಪಾವತಿಯ ಸಹಾಯದಿಂದ ನೀವು ಸುಲಭವಾಗಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಬಹುದು. ಹಾಗೆ ಬ್ಯಾಂಕ್‌ನ ಆನ್‌ಲೈನ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ನೀವು ವಹಿವಾಟುಗಳನ್ನು ಮಾಡಬಹುದು. ಅದೇ ಸಮಯದಲ್ಲಿ, ನೀವು ಹಣವನ್ನು ಹಿಂಪಡೆಯಲು ಎಟಿಎಂ ಸಹಾಯವನ್ನ ಪಡೆಯಬಹುದು.


Click it and Unblock the Notifications