ಯಾವುದೇ ವಸ್ತು ಖರೀದಿಸಬೇಕೆಂದರೂ, ಎಲ್ಲಾದರೂ ಹೋಗಬೇಕೆಂದರು ಸಾರಿಗೆ ವ್ಯವಸ್ಥೆ ಹೇಗೆ ಮುಖ್ಯವೋ, ಹಣ ಕೂಡಾ ಖರ್ಚು ಮಾಡಬೇಕಾಗುತ್ತದೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ (Online Banking) ಹೆಚ್ಚಿನ ಹಣಕಾಸು ವಹಿವಾಟುಗಳನ್ನು ಸುಲಭಗೊಳಿಸಿದ್ದರೂ, ದೊಡ್ಡ ಮೊತ್ತದ ವ್ಯವಹಾರಗಳು ಮತ್ತು ಸಾಲ ಸೌಲಭ್ಯ, ದಾಖಲೆ ಪತ್ರಗಳಿಗಾಗಿ ಬ್ಯಾಂಕ್‌ಗಳಿಗೆ ಇಂದಿಗೂ ಹೋಗುತ್ತಾರೆ. ಹಾಗಿದ್ರೆ ಡಿಸೆಂಬರ್ 15 ರಿಂದ 21ರವರೆಗೆ ನೀವು ಬ್ಯಾಂಕ್‌ಗೆ ಹೋಗುವ ಪ್ಲಾನ್ ಮಾಡಿದ್ದರೆ, ಈ ಸುದ್ದಿ ಓದಿ. ಏಕೆಂದರೆ ಮುಂದಿನ ವಾರ ಸಾಲು ಸಾಲು ರಜೆ (Bank Holidays) ಇರಲಿದೆ.

ಭಾರತದಲ್ಲಿ ಬ್ಯಾಂಕ್ ರಜೆಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟಿಸುವ ವೇಳಾಪಟ್ಟಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. 'ನೆಗೋಶಿಯಬಲ್ ಇನ್ಸ್‌ಟ್ರುಮೆಂಟ್ ಆಕ್ಟ್' ಅಡಿಯಲ್ಲಿ ಅಥವಾ 'ಬ್ಯಾಂಕ್‌ಗಳ ಖಾತೆ ಮುಚ್ಚುವಿಕೆ' ನಿಯಮಾನುಸಾರ, ಆರ್‌ಬಿಐ ರಜಾದಿನಗಳನ್ನು ಅಧಿಸೂಚಿಸುತ್ತದೆ. ಆ ಪ್ರಕಾರ, ಮುಂದಿನ ವಾರದ ಪ್ರಮುಖ ರಜೆಗಳ ಸಂಪೂರ್ಣ ವಿವರ ಹೀಗಿದೆ.
ಸೋಮವಾರ, ಡಿಸೆಂಬರ್ 15 ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಪುರಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವುದೇ ಇದಕ್ಕೆ ಮುಖ್ಯ ಕಾರಣ. ಇಟಾನಗರದ ಹೊರತುಪಡಿಸಿ, ದೇಶದ ಉಳಿದ ಎಲ್ಲೆಡೆ ಬ್ಯಾಂಕ್‌ಗಳು ಸೋಮವಾರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಗುರುವಾರ, ಡಿಸೆಂಬರ್ 18 ರಂದು ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ಬಂದ್ ಇರಲಿವೆ. ಯು ಸೋಸೋ ಥಾಮ್ ಅವರ ಪುಣ್ಯತಿಥಿಯ ಆಚರಣೆಯ ಹಿನ್ನೆಲೆ ರಜೆ ಘೋಷಣೆ ಮಾಡಲಾಗುತ್ತದೆ. ಮೇಘಾಲಯದಾದ್ಯಂತ ಗುರುವಾರ ಎಲ್ಲ ಬ್ಯಾಂಕ್‌ಗಳು ಮುಚ್ಚಿದರೂ, ಈಶಾನ್ಯ ರಾಜ್ಯ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ಶುಕ್ರವಾರ, ಡಿಸೆಂಬರ್ 19 ರಂದು 'ಗೋವಾ ವಿಮೋಚನಾ ದಿನ'ದ ನಿಮಿತ್ತ ಪಣಜಿ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರಲಿದೆ ಎಂದು ಹೇಳಲಾಗಿದೆ. ಪಣಜಿ ಹೊರತುಪಡಿಸಿ, ದೇಶಾದ್ಯಂತ ಉಳಿದ ಎಲ್ಲಾ ಬ್ಯಾಂಕ್‌ಗಳು ಶುಕ್ರವಾರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಶನಿವಾರ, ಡಿಸೆಂಬರ್ 20 ರಂದು ಗ್ಯಾಂಗ್ಟಕ್‌ನಲ್ಲಿ 'ಲೂಸೊಂಗ್ / ನಾಮ್‌ಸೂಂಗ್' ಹಬ್ಬದ ಕಾರಣ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಹೇಳಲಾಗಿದೆ. ಇದು ತಿಂಗಳ ಮೂರನೇ ಶನಿವಾರವಾಗಿರುವುದರಿಂದ, ಗ್ಯಾಂಗ್ಟಕ್ ಹೊರತುಪಡಿಸಿ, ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳು ಲಭ್ಯ. ಆರ್‌ಬಿಐ ನಿಯಮಗಳ ಪ್ರಕಾರ, ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಎಲ್ಲಾ ಭಾನುವಾರಗಳು ಕಡ್ಡಾಯ ರಜಾ ದಿನಗಳಾಗಿವೆ. ಅದೇ ರೀತಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ರಜೆ ಘೋಷಣೆ ಮಾಡಲಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 2025 ರಲ್ಲಿ ಒಟ್ಟು 18 ಬ್ಯಾಂಕ್ ರಜಾದಿನಗಳನ್ನು ಪಟ್ಟಿ ಮಾಡಿತ್ತು. ಅದೇ ರೀತಿ ಇದೀಗ ರಜೆ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಆ ಪ್ರಕಾರ ಕೆಲವು ರಾಜ್ಯಗಳಲ್ಲಿ ಉಳಿದ ರಜೆಗಳನ್ನು ನೀಡಲಾಗುತ್ತಿದೆ. ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬಕ್ಕೆ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದ್ದು, ಹಲವು ರಜೆಗಳು ನಿರ್ದಿಷ್ಟ ನಗರ ಅಥವಾ ರಾಜ್ಯಗಳಿಗೆ ಮಾತ್ರ ಅನ್ವಯವಾಗಲಿದೆ.


Click it and Unblock the Notifications