ಬ್ಯಾಂಕ್ ರಜಾದಿನಗಳು: ಫೆಬ್ರವರಿಯಲ್ಲಿ ಬ್ಯಾಂಕ್‌ಗಳು 14 ದಿನಗಳವರೆಗೆ ಮುಚ್ಚಿರುತ್ತವೆ, ಹೌದಾ! ಇಲ್ಲಿ ತಿಳಿಯಿರಿ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲಿವೆ. ಈ ರಜಾ ದಿನಗಳ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ ರಜಾದಿನಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ತಿಂಗಳಲ್ಲಿ ಸಹಜವಾಗಿ ಎರಡನೇ ಶನಿವಾರ ಹಾಗೆ ನಾಲ್ಕನೇ ಶನಿವಾರ ಸೇರಿದಂತೆ ಸರ್ಕಾರಿ ರಜೆಗಳ ಕುರಿತು ಇಲ್ಲಿ ತಿಳಿಯಿರಿ.

ಭಾರತೀಯ ರಿಸರ್ವ್ ಬ್ಯಾಂಕ್‌ ಬ್ಯಾಂಕ್‌ಗಳಿಗೆ ಯಾವ ದಿನಾಂಕಕದಂದು ರಜೆ ಇರುತ್ತದೆ ಎನ್ನುವುದರ ಬಗ್ಗೆ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ವರ್ಷದ ಎರಡನೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಯಾವಯಾವ ರಾಜ್ಯಗಳಲ್ಲಿ, ನಗರಗಳಲ್ಲಿ ಯಾವ ದಿನಗಳು ರಜೆ ಇರಲಿದೆ ಹಾಗೆ ಯಾವ ದಿನಗಳು ಕಾರ್ಯ ನಿರ್ವಹಿಸಲಿವೆ ಎನ್ನುವುದರ ಕುರಿತು ಇಲ್ಲಿ ನೋಡೋಣ.

ಫೆಬ್ರವರಿಯಲ್ಲಿ ಬ್ಯಾಂಕ್‌ಗಳು 14 ದಿನಗಳವರೆಗೆ ಮುಚ್ಚಿರುತ್ತವೆ, ಹೌದಾ!

ಫೆಬ್ರವರಿಯಲ್ಲಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲಿವೆ

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲಿದೆ ಎಂದು ಆರ್‌ಬಿಐ ತಿಳಿಸಿದೆ. ವಿವಿಧ ರಾಜ್ಯಗಳಿಗೆ ಒಂದೊಂದು ರೀತಿಯ ರಜೆ ಇರಲಿವೆ. ಫೆಬ್ರವರಿ 3 ರಂದು ಸೋಮವಾರ ಸರಸ್ವತಿ ಪೂಜೆ ಇರುವ ಹಿನ್ನೆಲೆ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲಿವೆ. ಹಾಗೆ ಫೆಬ್ರವರಿ 11 ರಂದು ಥಾಯ್ ಪೂಸಂ ಇರುವುದರಿಂದ ಚೆನ್ನೈನಲ್ಲಿ ಬ್ಯಾಂಕ್‌ಗಳು ಮಂಗಳವಾರ ಮುಚ್ಚಿರುತ್ತವೆ.

ಹಾಗೆ ಫೆಬ್ರವರಿ 12ರಂದು ಶ್ರೀ ರವಿದಾಸ್ ಜಯಂತಿ ಇರುವುದರಿಂದ ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಫೆಬ್ರವರಿ 15 ರಂದು ಶನಿವಾರ Lui-Ngai-Ni ಇರುವುದರಿಂದ ಇಂಫಾಲ್‌ನಲ್ಲಿರುವ ಸರ್ಕಾರಿ ಹಾಗು ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಫೆಬ್ರುವರಿ 19 ಬುಧವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇರುವುದರಿಂದ ಬೆಲಾಪುರ್, ಮುಂಬೈ, ನಾಗ್ಪುರದಲ್ಲಿರುವ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ. ಹಾಗೆ ಫೆಬ್ರವರಿ 20ನೇ ತಾರೀಕು ಗುರುವಾರ ಐಜ್ವಾಲ್ ಮತ್ತು ಇಟಾನಗರದಲ್ಲಿ ರಾಜ್ಯೋತ್ಸವದ ದಿನ ಇರುವುದರಿಂದ ಅಂದು ಬ್ಯಾಂಕುಗಳು ಮುಚ್ಚಿರುತ್ತವೆ.

ಇನ್ನು ಇತ್ತ ಫೆಬ್ರವರಿ 26 ಬುಧವಾರದಂದು ಮಹಾ ಶಿವರಾತ್ರಿ ಇರುವುದರಿಂದ ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಆಂಧ್ರಪ್ರದೇಶ ಮತ್ತು ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ರಾಯ್‌ಪುರ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್‌ಗಳು ತಿರುವನಂತಪುರಂ ನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಇದರ ಜೊತೆಗೆ ಫೆಬ್ರವರಿ 28 ರಂದು ಶುಕ್ರವಾರ ಲೋಸರ್ ಅಂದರೆ ಅಂದು ಟಿಬೆಟಿಯನ್ ಹೊಸ ವರ್ಷ ಇರುವುದರಿಂದ ಗ್ಯಾಂಗ್‌ಟಾಕ್‌ನಲ್ಲಿರುವ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಈ ಎಲ್ಲಾ ರಜಾದಿನಗಳ ಜೊತೆಗೆ ಬ್ಯಾಂಕುಗಳು ತಮ್ಮ ನಿಯಮಿತ ವಾರದ ರಜಾದಿನಗಳನ್ನ ಸಹ ಒಳಗೊಂಡಿವೆ. ಫೆಬ್ರವರಿ 2ನೇ ತಾರೀಕು ಭಾನುವಾರ ಇರುವುದರಿಂದ ರಜೆ ಇರಲಿದೆ. ನಂತರ ಫೆಬ್ರವರಿ 8ನೇ ತಾರಿಕು ಎರಡನೇ ಶನಿವಾರ, ಫೆಬ್ರವರಿ 9ನೇ ತಾರಿಕು ಭಾನುವಾರ ಇರುವುದರಿಂದ ರಜೆ ಇರಲಿದೆ. ಫೆಬ್ರವರಿ 16ನೇ ತಾರೀಕು ಭಾನುವಾರ, ಬ್ಯಾಂಕ್‌ಗಳಿಗೆ ವಾರದ ರಜೆ, ಕೊನೆಯದಾಗಿ, ಫೆಬ್ರವರಿ 22ನೇ ತಾರೀಕು ನಾಲ್ಕನೇ ಶನಿವಾರ ಮತ್ತು ಫೆಬ್ರವರಿ 23ನೇ ಭಾನುವಾರ ವಾರದ ರಜೆಯೂ ಇರುತ್ತದೆ.

ಈ ಬಾರಿ 2025ರ ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಈ ಬಾರಿ ಫೆಬ್ರವರಿಯಲ್ಲಿ 28 ದಿನಗಳು ಇದ್ದು, ಸದರಲ್ಲಿ ಅರ್ಧ ತಿಂಗಳು ಪೂರ್ತಿ ಬ್ಯಾಂಕ್‌ಗಳಿಗೆ ರಜೆ ಬಂದಿದೆ. ಅಷ್ಟಲ್ಲದೇ ಈ ಎಲ್ಲಾ ರಜೆಗಳು ಕೂಡ ಒಂದೊಂದು ರಾಜ್ಯಗಳಿಗೆ ಒಂದೊಂದು ದಿನ ಇರಲಿದೆ. ಇನ್ನು ಈ ರಾಜಾ ದಿನಗಳ ಪ್ರಕಾರವೇ ಬ್ಯಾಂಕ್‌ಗಳು ತಮ್ಮ ಕೆಲಸಗಳನ್ನ ನಡೆಸಲಿವೆ.

ಇನ್ನು ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್‌ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್‌ ಮೂಲಕ ನೀವು ನಿಮ್ಮ ಬ್ಯಾಂಕಿಂಗ್‌ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್‌ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+