ಜೂನ್ ತಿಂಗಳು ಮುಗಿಯಲು ಇನ್ನೂ ಕೆಲದಿನಗಳು ಮಾತ್ರ ಬಾಕಿ ಇವೆ. ಜುಲೈ ತಿಂಗಳಿಗೆ ಇನ್ನೆರಡು ದಿನಗಳಲ್ಲಿ ಕಾಲಿಡುತ್ತೇವೆ.ಈಗಾಗಲೇ ಆಷಾಢ ಮಾಸ ಕೂಡ ಶುರುವಾಗಿದೆ. ಮಳೆಗಾಳಿ ಹೆಚ್ಚಿರುವ ತಿಂಗಳು ಎಂದೇ ಜುಲೈಗಳನ್ನು ಕರೆಯಬಹುದು. ಈ ತಿಂಗಲ್ಲಿ ಆರಂಭದಲ್ಲಿ ಎಲ್ಲರೂ ಕಣ್ಣು ರಜೆ ಮೇಲೆ ಇರುತ್ತದೆ. ಅದರಲ್ಲೂ ಬ್ಯಾಂಕ್ ರಜೆ ಈ ತಿಂಗಳಲ್ಲಿ ಎಷ್ಟು ದಿನ ಇರುತ್ತೆ ಎಂದು ಬ್ಯಾಂಕ್ ನೌಕರರು ಪ್ರತಿ ತಿಂಗಳು ಕಾಯುತ್ತಲೇ ಇರುತ್ತಾರೆ. ಹಾಗಿದ್ದರೆ ನಾವಿಂದು ಜುಲೈ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತೆ..ಯಾವ ದಿನ ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ ಬನ್ನಿ..
ಹೌದು, ನಾವು ಕೆಲವೇ ದಿನಗಳಲ್ಲಿ ಜುಲೈ ತಿಂಗಳಿಗೆ ಪ್ರವೇಶವನ್ನು ಮಾಡುತ್ತೇವೆ. ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆಗಳು ಸಿಗಲಿವೆ. ಆರ್‌ಬಿಐ ರಜೆ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ ಬ್ಯಾಂಕುಗಳು ಯಾವಾಗ ಮತ್ತು ಎಲ್ಲಿ ಮುಚ್ಚಲ್ಪಡುತ್ತವೆ ಎನ್ನುವ ಮಾಹಿತಿಯನ್ನು ಇಲ್ಲಿ ಕಣ್ಣಾಡಿಸಿ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ ತಿಂಗಳ ಕ್ಯಾಲೆಂಡರ್ ಪ್ರಕಾರ, ಜುಲೈ 2025 ರಲ್ಲಿ ದೇಶದ ಹಲವು ಭಾಗಗಳಲ್ಲಿ ಬ್ಯಾಂಕುಗಳು 13 ದಿನಗಳ ರಜೆಯನ್ನು ಒಳಗೊಂಡಿದೆ. ಇವುಗಳು ಪ್ರಾದೇಶಿಕ ರಜಾದಿನಗಳು ಮತ್ತು ವಾರಾಂತ್ಯದ ರಜೆಗಳನ್ನು ಸಹ ಒಳಗೊಂಡಿವೆ. ಆದಹಾಗೆ ಜುಲೈ ತಿಂಗಳಲ್ಲಿ ಯಾವುದೇ ಅಧಿಕೃತವಾಗಿ ಸರ್ಕಾರಿ ರಜೆ ಇಲ್ಲ. ಎಲ್ಲಾ ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮಾತ್ರ ರಜೆ ಇರುತ್ತದೆ.ಕೆಲವು ರಾಜ್ಯಗಳು ವಿಶೇಷ ರಜಾದಿನಗಳನ್ನು ಸಹ ಹೊಂದಿವೆ. ಆದ್ದರಿಂದ ಮುಂದಿನ ತಿಂಗಳು ನಿಮಗೆ ಯಾವುದೇ ಬ್ಯಾಂಕ್ ಕೆಲಸವಿದ್ದರೆ, ರಜಾದಿನಗಳಿಗೆ ಅನುಗುಣವಾಗಿ ಮುಂಚಿತವಾಗಿ ಯೋಜನೆ ಮಾಡಿ.ಬ್ಯಾಂಕುಗಳು 18 ದಿನಗಳು ಮಾತ್ರ ಜುಲೈ ನಲ್ಲಿ ಕಾರ್ಯನಿರ್ವಹಿಸುತ್ತವೆ.
ಬ್ಯಾಂಕ್‌ಗಳು ರಜೆ ದಿನಗಳ ಪಟ್ಟಿ (ಜುಲೈ 2025) ವಿವರ
ವಿವಿಧ ರಾಜ್ಯಗಳು ಹಲವು ದಿನಗಳಲ್ಲಿ ಪ್ರಾದೇಶಿಕ ಪ್ರಾಮುಖ್ಯತೆಯ ಆಧಾರದಲ್ಲೂ ಬ್ಯಾಂಕ್‌ಗಳಿಗೆ ರಜೆಯನ್ನು ನೀಡಲಾಗುತ್ತದೆ.
ಜುಲೈ 3 ರಂದು ಗುರುವಾರ: ಖರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಕ್ಲೋಸ್ ಆಗಿರುತ್ತಾವೆ.ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 5 ರಂದು ಶನಿವಾರ: ಗುರು ಹರ್ಬಿಂದ ಜಿ ಜಯಂತಿಯಂದು ಜಮ್ಮು ಮತ್ತು ಕಾಶ್ಮೀರ ಮುಚ್ಚಲ್ಪಡುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಬ್ಯಾಂಕ್ ಸೇವೆಗಳು ಲಾಭ್ಯವಿರುತ್ತದೆ.
ಜುಲೈ 6 ರಂದು ಭಾನುವಾರ: ದೇಶಾದ್ಯಂತ ಭಾನುವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜುಲೈ 12ರಂದು ಶನಿವಾರ: ಎರಡನೇ ಶನಿವಾರ ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರುತ್ತದೆ.
ಜುಲೈ 13ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 14 ರಂದು ಸೋಮವಾರ: ಬೆಹ್ ಡೆಂಖ್ಲಾಮ್ ಹಬ್ಬದ ಸಂದರ್ಭದಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 16 ರಂದು ಬುಧವಾರ: ಹರೇಲಾ ಹಬ್ಬದ ಸಂದರ್ಭದಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 17 ರಂದು ಗುರುವಾರ: ಯು ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಶಿಲ್ಲಾಂಗ್, ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿಯೂ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ.
ಜುಲೈ 19ರಂದು ಶನಿವಾರ: ಕೇರ್ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 20 ರಂದು ಭಾನುವಾರ: ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 26 ರಂದು ಶನಿವಾರ: ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 27 ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 28 ರಂದು ಸೋಮವಾರ: ಡ್ರುಕ್ಪಾ ತ್ಶೆ-ಜಿ ಸಂದರ್ಭದಲ್ಲಿ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ದೇಶದ ಇತರ ರಾಜ್ಯಗಳಲ್ಲಿನ ಬ್ಯಾಂಕ್ ಶಾಖೆಗಳು ಆ ದಿನಗಳಲ್ಲಿ ತೆರೆದಿರುತ್ತವೆ.ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ ಎಂದು ತಿಳಿದಿದೆ. ಮಿಜೋರಾಂ ರಾಜ್ಯದಲ್ಲಿ, ಜೂನ್ 30 ರಂದು ರೆಮ್ನಾ ನಿ ಸಂದರ್ಭದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಲ್ಲಿ, ಪ್ರತಿ ಸೋಮವಾರವೂ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.


Click it and Unblock the Notifications