June Bank Holidays 2025: ಮೇ ತಿಂಗಳು ಮುಗಿಯಲು ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು,ಎಲ್ಲರೂ ಕಣ್ಣು ಮುಂದಿನ ತಿಂಗಳ ರಜೆಯ ಪಟ್ಟಿಯ ಮೇಲೆ ಇದೆ. ಅದರಲ್ಲೂ ಬ್ಯಾಂಕ್ ರಜೆ ಈ ತಿಂಗಳಲ್ಲಿ ಎಷ್ಟು ದಿನ ಇರುತ್ತೆ ಎಂದು ಬ್ಯಾಂಕ್ ನೌಕರರು ಪ್ರತಿ ತಿಂಗಳು ಕಾಯುತ್ತಲೇ ಇರುತ್ತಾರೆ.
ಹೌದು, ತಿಂಗಳು ಆರಂಭವಾಗುವ ಮೊದಲು ಬ್ಯಾಂಕ್ ನೌಕರರು, ಸಾರ್ವಜನಿಕರು ಎಲ್ಲರೂ ತಿಂಗಳ ಕೊನೆಯಲ್ಲಿ ಎಲ್ಲರೂ ಬ್ಯಾಂಕ್ ರಜೆ ಪಟ್ಟಿಯನ್ನು ಹುಡುಕುತ್ತಾರೆ. ಯಾಕೆಂದರೆ ಬ್ಯಾಂಕ್ ನೌಕರರು ಕೆಲಸಕ್ಕೆ ರಜೆ ಸಿಗುತ್ತದೆ ಎಂದು ಹುಡುಕಿದ್ದರೇ ಮತ್ತೆ ಕೆಲವೊಂದು ಮಂದಿ ಮುಂದಿನ ತಿಂಗಳು ಯಾವ ದಿನ ನಾವು ಹಣಕಾಸಿನ ವ್ಯವಹಾರ ಮಾಡಬೇಕು ಎಂದು ನೋಡಲು ಕ್ಯಾಲೆಂಡರ್ ನೋಡುತ್ತಾರೆ. ಹಾಗಿದ್ರೆ ಜೂನ್ (June 2025) ತಿಂಗಳಿನಲ್ಲಿ ಬ್ಯಾಂಕ್ ರಜಾದಿನಗಳು (Bank Holidays) ಯಾವ ದಿನ ಬಂದಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳನ್ನು ಆರ್‌ಬಿಐ ನಿರ್ಧರಿಸುತ್ತದೆ. ಜೂನ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ನೀವು ಬ್ಯಾಂಕಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳನ್ನು ಮಾಡಲಿದ್ದರೆ, ಯಾವ ದಿನಗಳವರೆಗೆ ಬ್ಯಾಂಕ್ ಮುಚ್ಚಲ್ಪಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ, ಬ್ಯಾಂಕ್ ಶಾಖೆಗಳನ್ನು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರ ಮುಚ್ಚಲಾಗುತ್ತದೆ.
ಬ್ಯಾಂಕ್‌ಗಳು ರಜೆ ದಿನಗಳ ಪಟ್ಟಿ (ಜೂನ್ 2025)
ಜೂನ್ 1: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜೂನ್ 6: ಈದ್ ಉಲ್ ಅಧಾ (ಬಕ್ರೀದ್) ಕಾರಣ ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜೂನ್ 7: ಬಕ್ರೀದ್ ಈದ್ ಉಲ್ ಜುಹಾದ ಕಾರಣ ಗುವಾಹಟಿ, ಹೈದರಾಬಾದ್, ಅಗರ್ತಲಾ, ಐಜ್ವಾಲ್, ಬೇಲಾಪುರ್, ಚೆನ್ನೈ, ಡೆಹ್ರಾಡೂನ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚಂಡೀಗಢ, ಆಂಧ್ರಪ್ರದೇಶ, ಹೈದರಾಬಾದ್, ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ, ಕೊಹಿಮಾ, ಕೋಲ್ಕತ್ತಾ, ಮುಂಬೈ, ಲಕ್ನೋ, ಪುಗ್ನೋ, ಮುಂಬೈ, ಲಕ್ನೋ, ಪಾಟ್‌ಪುರ್, ಮುಂಬೈ, ಲಕ್ನೋ, ಪುಗ್ನೋ, ಮುಂಬೈ, ಪುಗ್ನೋ, ಪುಗ್ನೋ, ಪುಗ್ನೋ, ಮುಂಬೈ, ಪಗ್ನೋ, ಪುಗ್ನೋ, ಪುಗ್ನೋ, ಪಟ್‌ಪುರ್ ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರದಲ್ಲಿ ರಜೆ ಇರುತ್ತದೆ.
ಜೂನ್ 8 : ಸಾಮಾನ್ಯವಾಗಿ ಭಾನುವಾರವಿರುವುದರಿಂದ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರುತ್ತದೆ
ಜೂನ್ 10: ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನದ ಕಾರಣ ಪಂಜಾಬ್‌ನ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜೂನ್ 11: ಸಂತ ಗುರು ಕಬೀರ್ ಜಯಂತಿಯ ಕಾರಣ ಗ್ಯಾಂಗ್ಟಾಕ್ ಮತ್ತು ಶಿಮ್ಲಾದಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಜೂನ್ 14: ತಿಂಗಳ ಎರಡನೇ ಶನಿವಾರವಾದ್ದರಿಂದ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ.
ಜೂನ್ 15: ಭಾನುವಾರದ ರಜೆಯ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜೂನ್ 22: ರಂದು ಭಾನುವಾರ ರಜೆ ಇರುವುದರಿಂದ ಬ್ಯಾಂಕ್ ರಜೆ ಇರುತ್ತದೆ.
ಕೆಲವು ರಜೆಗಳು ನಿರ್ದಿಷ್ಟ ರಾಜ್ಯಕ್ಕೆ ಮಾತ್ರವೇ ಅನ್ವಯವಾಗುತ್ತದೆ, ಎಲ್ಲ ರಜೆಗಳಿಗೂ ಅನ್ವಯವಾಗುವುದಿಲ್ಲ. ಹೀಗಾಗಿ ಕ್ಯಾಲೆಂಡರ್ ನೋಡಿಕೊಂಡು ರಜೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ತಿಳಿದುಕೊಂಡು ಬ್ಯಾಂಕ್‌ಗೆ ಹೋಗಿ.
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.


Click it and Unblock the Notifications