ಇಲ್ಲಿ ಕೇಳಿ ಗ್ರಾಹಕರೇ.. ಮುಂದಿನ ವಾರ ನೀವು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಲೇಬೇಕು. ಹೌದು, ಜೂನ್ 9 ಮತ್ತು ಜೂನ್ 15, 2025ರ ನಡುವೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಮೂರು ದಿನಗಳ ಕಾಲ ರಜೆ ಇರುತ್ತದೆ. ಏಕೆಂದರೆ, ಈ ನಡುವೆ ಸಂತ ಕಬೀರ್ ಜಯಂತಿ, ಎರಡನೇ ಶನಿವಾರ ಮತ್ತು ಭಾನುವಾರದ ಸಾರ್ವಜನಿಕ ರಜೆ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಬ್ಯಾಂಕ್ ರಜಾ ಕ್ಯಾಲೆಂಡರ್ ಏನು ಹೇಳುತ್ತೆ? ಕರ್ನಾಟಕದಲ್ಲಿ ಯಾವ ದಿನ ರಜೆ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಸಂತ ಕಬೀರ್ ಜಯಂತಿಯಂದು ಜೂನ್ 11 ರಂದು ರಜೆ
ಶಿಮ್ಲಾ (ಹಿಮಾಚಲ ಪ್ರದೇಶ) ಮತ್ತು ಗ್ಯಾಂಗ್ಟಾಕ್ (ಸಿಕ್ಕಿಂ) ನಲ್ಲಿರುವ ಬ್ಯಾಂಕುಗಳು ಜೂನ್ 11 ರ ಬುಧವಾರದಂದು ರಜೆ ಇರುತ್ತದೆ.ಈ ದಿನವನ್ನು ಸಂತ ಕಬೀರ್ ದಾಸ್ ಜಿ ಅವರ ಜನ್ಮ ದಿನಾಚರಣೆಯಾಗಿ ಆಚರಿಸಲಾಗುತ್ತದೆ.ಕಬೀರ್ ದಾಸ್ ಜಿ ಒಬ್ಬ ಮಹಾನ್ ಸಂತ ಕವಿ ಮತ್ತು ಸಮಾಜ ಸುಧಾರಕರಾಗಿದ್ದರು. ಇವರು ಆಲೋಚನೆಗಳು ಮತ್ತು ದ್ವಿಪದಿಗಳು ಸಮಾಜದಲ್ಲಿ ಸಮಾನತೆ ಮತ್ತು ಸಹೋದರತ್ವದ ಸಂದೇಶವನ್ನು ನೀಡಿತು. ಅವರ ಜನ್ಮ ದಿನಾಚರಣೆಯನ್ನು ಈ ವರ್ಷ ಜೂನ್ 11 ರಂದು ಬರುವ ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಣೆ ಮಾಡಲಾಗುತ್ತದೆ.

ಜೂನ್ 14 ಎರಡನೇ ಶನಿವಾರ
ಜೂನ್ 14 ರ ಶನಿವಾರ ತಿಂಗಳ ಎರಡನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಬ್ಯಾಂಕುಗಳು ಬಂದ್ ಆಗಿರುತ್ತೇವೆ. ಆರ್‌ಬಿಐ ನಿಯಮಗಳ ಪ್ರಕಾರ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಎಲ್ಲಾ ಬ್ಯಾಂಕ್ ಶಾಖೆಗಳಿಗೆ ರಜೆ ಇರುತ್ತದೆ. ಬ್ಯಾಂಕಿಂಗ್‌ಗೆ ಸಂಬಂಧಿಸಿದ ಡಿಜಿಟಲ್ ಸೇವೆಗಳು ಈ ದಿನದಂದು ಸಹ ಕಾರ್ಯನಿರ್ವಹಿಸುತ್ತವೆ.
ಜೂನ್ 15 ಭಾನುವಾರ
ಜೂನ್ 15 ರ ಭಾನುವಾರ ಬಂದಿದೆ ಹಾಗಾಗಿ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ರಜೆ ಇರುತ್ತದೆ. ಬ್ಯಾಂಕ್ ಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ. ಈ ರೀತಿಯಾಗಿ, ಈ ವಾರ ಜೂನ್ 11, 14 ಮತ್ತು 15 ರಂದು ಶಿಮ್ಲಾ ಮತ್ತು ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕುಗಳು ತೆರೆದಿರುವುದಿಲ್ಲ, ಅಂದರೆ ಅಲ್ಲಿನ ನಾಗರಿಕರಿಗೆ ಬ್ಯಾಂಕುಗಳು ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ.
ಬ್ಯಾಂಕ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತವಾಗುತ್ತವೆಯೇ?
ಬ್ಯಾಂಕ್ ಶಾಖೆಗಳಿಗೆ ಮಾತ್ರ ರಜೆ ಇರುತ್ತದೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕಾರ್ಯವನ್ನು ನಿರ್ವಹಿಸುತ್ತಿದೆ. ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್, ಯುಪಿಐ NEFT ಮತ್ತು RTGS ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಹಣಕಾಸು ವಹಿವಾಟುವನ್ನು ನಡೆಸಬಹುದು. ಇದಲ್ಲದೆ, ಗ್ರಾಹಕರು ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಗಳನ್ನು ಮಾಡಬಹುದು ಮತ್ತು ಆಟೋ ಡೆಬಿಟ್/ಸ್ಥಾಯಿ ಸೂಚನೆಯಂತಹ ಸೌಲಭ್ಯಗಳನ್ನು ಸಹ ಪಡೆಯಬಹುದು.
ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಕ್ಲಿಯರೆನ್ಸ್ ಅಥವಾ ಖಾತೆ ನವೀಕರಣಕ್ಕಾಗಿ ಬ್ಯಾಂಕ್‌ಗೆ ಭೇಟಿ ನೀಡಲು ಬಯಸುವವರು ಈ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ವೇಳಾಪಟ್ಟಿಯನ್ನು ಯೋಚಿಸಬೇಕುತ್ತದೆ ಎಂದು ಹೇಳಿದ್ದಾರೆ.
ಬ್ಯಾಂಕ್ ರಜಾದಿನಗಳು ಏಕೆ ಬದಲಾಗುತ್ತವೆ?
ಭಾರತದಲ್ಲಿ ಬ್ಯಾಂಕ್ ರಜಾದಿನಗಳು ರಾಜ್ಯಗಳು ಹಾಗೂ ಪ್ರದೇಶವಾರು ಬದಲಾವಣೆಯಾಗುತ್ತದೆ. ಏಕೆಂದರೆ ಪ್ರತಿಯೊಂದು ರಾಜ್ಯವು ವಿಭಿನ್ನ ಹಬ್ಬಗಳು, ಆಚರಣೆಗಳು ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಸಂತ ಕಬೀರ್ ಜಯಂತಿಯ ರಜಾದಿನವು ಶಿಮ್ಲಾ ಮತ್ತು ಗ್ಯಾಂಗ್ಟಾಕ್‌ನಲ್ಲಿ ಮಾತ್ರ ಅನ್ವಯವಾಗುತ್ತದೆ, ದೇಶದ ಉಳಿದ ಭಾಗಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಆರ್‌ಬಿಐ ಪ್ರತಿ ವರ್ಷ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧಾರ್ಮಿಕ ರಜಾದಿನಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಈ ವಾರ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ನಿಮ್ಮ ರಾಜ್ಯದಲ್ಲಿ ಯಾವ ದಿನದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಶಿಮ್ಲಾ ಮತ್ತು ಗ್ಯಾಂಗ್ಟಾಕ್‌ನಲ್ಲಿ ವಾಸಿಸುವ ಜನರು ವಿಶೇಷವಾಗಿ ಜಾಗರೂಕರಾಗಿರಬೇಕು, ಏಕೆಂದರೆ ಈ ವಾರ ಮೂರು ಬ್ಯಾಂಕ್ ರಜಾದಿನಗಳು ಇರುತ್ತವೆ. ಆದ್ದರಿಂದ,ನಿಮ್ಮ ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಮುಂಚಿತವಾಗಿ ಯೋಚನೆ ಮಾಡಿ ಬ್ಯಾಂಕ್ ರಜೆ ಇರುತ್ತಾ ಅಥವಾ ಇಲ್ಲವೋ ಎಂದು ತಿಳಿದುಕೊಂಡು ಬ್ಯಾಂಕ್‌ಗೆ ಭೇಟಿ ನೀಡಿ.


Click it and Unblock the Notifications