ಬ್ಯಾಂಕ್ ಗ್ರಾಹಕರೇ ಇಲ್ಲಿ ಕೇಳಿ... ಮುಂದಿನ ವಾರ ನೀವು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಲೇಬೇಕು. ಹೌದು, ಜುಲೈ 26 ರಿಂದ 28 ರವರೆಗೆ ಬ್ಯಾಂಕುಗಳು ಸತತವಾಗಿ ಮೂರು ದಿನಗಳ ಕಾಲ ರಜೆ ಇರುತ್ತಾದೆ. ನಾಲ್ಕನೇ ಶನಿವಾರ ಮತ್ತು ಡ್ರುಕ್ಪಾ ತ್ಶೆ-ಜಿ ಹಬ್ಬದ ನಿಮಿತ್ತ ಈ ರಜೆ ಇರಲಿದೆ.ರಜಾ ದಿನಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಯಾಗುತ್ತದೆ.

ಜುಲೈ 26 ರಂದು ನಾಲ್ಕನೇ ಶನಿವಾರ
ಜುಲೈ 26 ರಂದು ನಾಲ್ಕನೇ ಶನಿವಾರ ಇರುವ ಕಾರಣದಿಂದಾಗಿ ಎಲ್ಲಾ ಬ್ಯಾಂಕುಗಳಿಗೆ ರಜೆ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 2015 ರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜಾ ದಿನಗಳೆಂದು ಘೋಷಣೆಯನ್ನು ಮಾಡಿತ್ತು. ಈ ನಿಯಮ ಅನುಸಾರವಾಗಿ ಸಾರ್ವಜನಿಕ, ಖಾಸಗಿ, ವಿದೇಶಿ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಮತ್ತು ಸ್ಥಳೀಯ ಪ್ರದೇಶದ ಬ್ಯಾಂಕುಗಳಿಗೆ ರಜೆ ಇರುತ್ತದೆ. ಸೆಪ್ಟೆಂಬರ್ 2015 ರಿಂದ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಉಳಿದ ಶನಿವಾರಗಳಲ್ಲಿ ಬ್ಯಾಂಕುಗಳು ಪೂರ್ಣ ದಿನ ಕಾರ್ಯವನ್ನು ನಿರ್ವಹಿಸುತ್ತದೆ.
ಜುಲೈ 27 ಭಾನುವಾರ
ಜುಲೈ 27 ವಾರಾಂತ್ಯದ ಭಾನುವಾರ ರಜೆ ಕಾರಂದಿಂದಾಗಿ ಎಲ್ಲಾ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜುಲೈ 28 ರಂದು ಡ್ರುಕ್ಪಾ ತ್ಶೆ-ಜಿ ಹಬ್ಬ
ಡ್ರುಕ್ಪಾ ತ್ಶೆ-ಜಿ ಹಬ್ಬದ ಪ್ರಯುಕ್ತ ಗ್ಯಾಂಗ್ಟಾಕ್ ಸೇರಿದಂತೆ ಭಾರತದ ಕೆಲವು ಪ್ರದೇಶಗಳಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಆದರಿಂದ ಅಲ್ಲಿನ ಬ್ಯಾಂಕ್‌ಗಳಿಗೆ ಮಾತ್ರ ರಜೆ ಇರುತ್ತದೆ. ಆದರೆ, ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯವನ್ನು ನಿರ್ವಹಿಸುತ್ತದೆ. ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಇದು ಕೊನೆಯ ವಿಶೇಷ ರಜಾದಿನವಾಗಿದೆ.
ಬ್ಯಾಂಕ್ ರಜಾದಿನಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಪ್ರಶ್ನೆಗಳು
ಪ್ರಶ್ನೆ 1: ಬ್ಯಾಂಕ್ ರಜಾದಿನಗಳನ್ನು ಯಾರು ನಿರ್ಧರಿಸುತ್ತಾರೆ?
ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಇಲಾಖೆ (BEIS) ಬ್ಯಾಂಕ್ ರಜಾದಿನಗಳ ಉಸ್ತುವಾರಿ ನೋಡಿಕೊಳ್ಳುವ ಸರ್ಕಾರಿ ಇಲಾಖೆಯಾಗಿದೆ.
ಪ್ರಶ್ನೆ 2: ಪ್ರತಿ ವರ್ಷ ಎಷ್ಟು ಬ್ಯಾಂಕ್ ರಜಾದಿನಗಳು ಇರುತ್ತವೆ?
ಬ್ಯಾಂಕ್ ರಜಾದಿನಗಳ ಸಂಖ್ಯೆ ಬ್ಯಾಂಕಿನಿಂದ ಬ್ಯಾಂಕಿಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂತಹ ರಾಷ್ಟ್ರೀಯ ರಜಾದಿನಗಳು ಎಲ್ಲಾ ಬ್ಯಾಂಕುಗಳು ಆಚರಿಸುವ ಕಡ್ಡಾಯ ರಜಾದಿನಗಳಾಗಿವೆ.
ಪ್ರಶ್ನೆ 3: ಬ್ಯಾಂಕ್ ರಜಾದಿನಗಳಲ್ಲಿ ಎನ್‌ಇಎಫ್‌ಟಿ ವಹಿವಾಟುಗಳನ್ನು ಮಾಡಬಹುದೇ?
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎನ್‌ಇಎಫ್‌ಟಿ ವಹಿವಾಟುಗಳನ್ನು ನಿಯಂತ್ರಿಸುವುದರಿಂದ, ಅವು ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಆರ್‌ಬಿಐ ಮುಚ್ಚಿರುವ ದಿನಗಳಲ್ಲಿ ಎನ್‌ಇಎಫ್‌ಟಿ ವಹಿವಾಟುಗಳು ನಡೆಯುವುದಿಲ್ಲ.
ಪ್ರಶ್ನೆ 4: ಬ್ಯಾಂಕ್ ರಜಾದಿನಗಳಲ್ಲಿ ಬ್ಯಾಂಕ್ ವಹಿವಾಟುಗಳು ನಡೆಯುತ್ತವೆಯೇ?
ಸಾರ್ವಜನಿಕ ಅಥವಾ ಬ್ಯಾಂಕ್ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಏಕೆಂದರೆ ಅವುಗಳನ್ನು ವ್ಯವಹಾರೇತರ ದಿನಗಳೆಂದು ಪರಿಗಣಿಸಲಾಗುತ್ತದೆ.
ಪ್ರಶ್ನೆ 5: ಬ್ಯಾಂಕ್ ರಜಾದಿನಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಹೇಗೆ ಪಡೆಯುವುದು?
ಬ್ಯಾಂಕ್ ರಜಾದಿನಗಳಲ್ಲಿ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳ ಮೂಲಕ 24 ಗಂಟೆಯು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಈ ಸೇವೆಗಳು ಬ್ಯಾಂಕಿನಲ್ಲಿ ನೋಂದಾಯಿತ ಗ್ರಾಹಕರಿಗೆ ಮಾತ್ರ ಈ ಸೇವೆಯನ್ನು ಪಡೆದುಕೊಳ್ಳಬಹುದು.


Click it and Unblock the Notifications