ಫೆಬ್ರವರಿ ತಿಂಗಳು ಬಂದ್ರೆ ಸಾಕು ಬಜೆಟ್ ಮಂಡನೆ (Budget 2026) ಬಗ್ಗೆ ಹಸಿಬಿಸಿ ಚರ್ಚೆಗಳು ಶುರುವಾಗುತ್ತೆ. ದೇಶದ ನಿರೀಕ್ಷೆಯಿಂದ ಕಾಯುವುದೆಂದರೆ ಈ ಬಜೆಟ್‌ಗಾಗಿ ಮಾತ್ರ. ಇನ್ನು ಹೊಸ ವರ್ಷದ ಎರಡನೇ ತಿಂಗಳು, ಫೆಬ್ರವರಿ, ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪ್ರತೀ ತಿಂಗಳು ಒಂದಷ್ಟು ಸರ್ಕಾರಿ ರಜೆಗಳಿರುತ್ತದೆ. ಈ ವೇಳೆ ಬ್ಯಾಂಕ್‌ಗಳಿಗೂ ರಜೆ ನೀಡಲಾಗುತ್ತದೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಫೆಬ್ರವರಿಯಲ್ಲಿ ಎಷ್ಟು ದಿನ ಬ್ಯಾಂಕುಗಳು ಮುಚ್ಚಿರುತ್ತವೆ ಅಥವಾ ತೆರೆದಿರುತ್ತವೆ ಎಂದು ತಿಳಿದುಕೊಳ್ಳಬೇಕು. ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಫೆಬ್ರವರಿ ತಿಂಗಳ ಬ್ಯಾಂಕ್ ರಜೆಗಳ (Bank Holidays) ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಪ್ರತಿ ತಿಂಗಳಂತೆ, ಆರ್‌ಬಿಐ ತನ್ನ ರಜಾ ಕ್ಯಾಲೆಂಡರ್ ಮೂಲಕ ಬ್ಯಾಂಕ್ ರಜೆಗಳ ವಿವರವಾದ ಪಟ್ಟಿಯನ್ನು ಗ್ರಾಹಕರಿಗೆ ಪ್ರಯೋಜನವಾಗುವ ಉದ್ದೇಶದಿಂದ ಬಿಡುಗಡೆ ಮಾಡುತ್ತದೆ. ಫೆಬ್ರವರಿ 2026 ರಲ್ಲಿ, ರಾಷ್ಟ್ರವ್ಯಾಪಿ ಸಾಪ್ತಾಹಿಕ ರಜೆಗಳು, ಎರಡನೇ/ನಾಲ್ಕನೇ ಶನಿವಾರಗಳು ಹಾಗೂ ಪ್ರಾದೇಶಿಕ ಹಬ್ಬಗಳ ಕಾರಣದಿಂದ ಬ್ಯಾಂಕುಗಳು ಮುಚ್ಚಿರುತ್ತದೆ. ಇಂತಹ ದಿನಗಳಲ್ಲಿ ಚೆಕ್ ಕ್ಲಿಯರೆನ್ಸ್, ಡ್ರಾಫ್ಟ್ ಅಥವಾ ಲಾಕರ್ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಯಾವುದೇ ಬ್ಯಾಂಕ್ ಸೇವೆಗಳನ್ನು ಮಾಡುವ ಪ್ಲಾನ್‌ನಲ್ಲಿದ್ದರೆ ಈ ರಜಾದಿನಗಳನ್ನು ನೋಡುವುದು ಬಹಳ ಮುಖ್ಯ.
ದೇಶಾದ್ಯಂತ ಯಾವಾಗ ಬ್ಯಾಂಕ್ ರಜೆ ಇದೆ?
ಫೆಬ್ರವರಿ 2026ರಲ್ಲಿ, ದೇಶಾದ್ಯಂತ ಹಲವು ದಿನಗಳ ಬ್ಯಾಂಕ್ ರಜೆಗಳಿರುತ್ತದೆ. ಫೆಬ್ರವರಿ 1, 15, ಮತ್ತು 22 ಭಾನುವಾರಗಳಾದ್ದರಿಂದ ಈ ದಿನ ಎಲ್ಲಾ ಬ್ಯಾಂಕುಗಳಿಗೆ ರಜೆ ನೀಡಲಾಗುತ್ತದೆ. ಫೆಬ್ರವರಿ 14 ಎರಡನೇ ಶನಿವಾರದ ರಜೆಯಾಗಿದ್ದು, ಫೆಬ್ರವರಿ 28 ನಾಲ್ಕನೇ ಶನಿವಾರವಾದ್ದರಿಂದ ಇಡೀ ದೇಶದಲ್ಲಿ ಈ ದಿನ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಇದು ಫೆಬ್ರವರಿಯ ಪ್ರಮುಖ ರಜಾದಿನಗಳಾಗಿದೆ.
ಪ್ರಾದೇಶಿಕ ಹಬ್ಬಗಳು ಮತ್ತು ರಜೆಗಳು
ರಾಷ್ಟ್ರವ್ಯಾಪಿ ವಾರಾಂತ್ಯದ ರಜಾದಿನಗಳ ಹೊರತಾಗಿ, ಕೆಲವು ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳಿಂದಾಗಿ ಬ್ಯಾಂಕುಗಳು ಬಂದ್ ಇರಲಿವೆ. ಫೆಬ್ರವರಿ 18 (ಬುಧವಾರ) ರಂದು ಸಿಕ್ಕಿಂನಲ್ಲಿ ಲೋಸರ್ ಹಬ್ಬ ಆಚರಿಸಲಾಗುವುದು. ಹಾಗೆಯೇ, ಫೆಬ್ರವರಿ 19 (ಗುರುವಾರ) ರಂದು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಿಸಲಾಗುವುದು. ಈ ದಿನಾಂಕಗಳಲ್ಲಿ ಆಯಾ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಫೆಬ್ರವರಿ 20 (ಶುಕ್ರವಾರ) ರಂದು ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯ ಸ್ಥಾಪನಾ ದಿನವನ್ನು ಆಚರಿಸುವುದರಿಂದ ಅಲ್ಲಿನ ಬ್ಯಾಂಕುಗಳು ಮುಚ್ಚಿರುತ್ತವೆ. ಮಣಿಪುರದಲ್ಲಿ 'ಲೂಯಿ-ನಗಾಯಿ-ನೀ' ಹಬ್ಬದಂದು ಕೂಡ ಬ್ಯಾಂಕುಗಳಿಗೆ ರಜೆ ಇರಬಹುದಾದರೂ, ಅದರ ದಿನಾಂಕವನ್ನು ಆಯಾ ರಾಜ್ಯ ಸರ್ಕಾರವು ಅಂತಿಮಗೊಳಿಸುತ್ತದೆ.
ಮಹಾಶಿವರಾತ್ರಿ ಪರಿಣಾಮ
ಫೆಬ್ರವರಿ 15, 2026 ರಂದು ಮಹಾಶಿವರಾತ್ರಿ ಹಬ್ಬವಿದೆ. ಈ ದಿನ ಭಾನುವಾರವಾದ್ದರಿಂದ ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ. ಆಂಧ್ರಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಾಶಿವರಾತ್ರಿಯಂದು ವಿಶೇಷ ರಜೆ ಇರುತ್ತದೆ. ಇದು ಭಾನುವಾರ ರಜಾದಿನ ಮಾತ್ರವಲ್ಲದೇ, ಇತರ ದಿನಗಳಲ್ಲೂ ಬ್ಯಾಂಕ್ ಮುಚ್ಚುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.
ಫೆಬ್ರವರಿ 2026 ಬ್ಯಾಂಕ್ ರಜೆಗಳ ಪಟ್ಟಿ
ಫೆಬ್ರವರಿ 2026ರಲ್ಲಿ ದೇಶಾದ್ಯಂತ ಆರು ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಇವುಗಳಲ್ಲಿ ಫೆಬ್ರವರಿ 1, 15, 22ರಂದು ಭಾನುವಾರದ ರಜೆ ಇರಲಿದೆ ಎಂದು ವರದಿಯಾಗಿದೆ. ಫೆಬ್ರವರಿ 14 ಎರಡನೇ ಶನಿವಾರ ಹಾಗೂ ಫೆಬ್ರವರಿ 28 ನಾಲ್ಕನೇ ಶನಿವಾರದ ರಜೆ ಇರುತ್ತದೆ. ಫೆಬ್ರವರಿ 15 ಭಾನುವಾರದೊಂದಿಗೆ ಮಹಾಶಿವರಾತ್ರಿಯೂ ಇರುವುದರಿಂದ ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ.
ಪ್ರಾದೇಶಿಕ ರಜೆಗಳ ಪಟ್ಟಿ
- ಫೆಬ್ರವರಿ 18 (ಬುಧವಾರ) - ಸಿಕ್ಕಿಂನಲ್ಲಿ ಲೋಸರ್ ಹಬ್ಬ
- ಫೆಬ್ರವರಿ 19 (ಗುರುವಾರ) - ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ
- ಫೆಬ್ರವರಿ 20 (ಶುಕ್ರವಾರ) - ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ರಾಜ್ಯ ಸ್ಥಾಪನಾ ದಿನ
- ಮಣಿಪುರದಲ್ಲಿ 'ಲೂಯಿ-ನಗಾಯಿ-ನೀ' ಉತ್ಸವದ ದಿನಾಂಕವನ್ನು ರಾಜ್ಯ ಸರ್ಕಾರದ ಪ್ರಕಟಣೆ ಬೆನ್ನಲ್ಲಿ ರಜೆ ಘೋಷಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ಈ ರಜಾದಿನಗಳ ಸಂದರ್ಭದಲ್ಲಿ ಕೇವಲ ಆಫ್‌ಲೈನ್ ಬ್ಯಾಂಕ್ ಸೇವೆಗಳು ಮಾತ್ರ ಬಂದ್ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ಡಿಜಿಟಲ್ ಸೇವೆಗಳು ಲಭ್ಯವಿರುತ್ತದೆ.


Click it and Unblock the Notifications