For Quick Alerts
ALLOW NOTIFICATIONS  
For Daily Alerts

3 ತಿಂಗಳು EMI ಮುಂದೂಡಿಕೆಯಾಗಿದ್ದರೇನು ಬಡ್ಡಿ ಪಾವತಿಸಲೇಬೇಕು

|

ಕೊರೊನಾವೈರಸ್ ತಡೆಗೆ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಮೂರು ತಿಂಗಳು ಇಎಂಐ ಮಂದೂಡಿಕೆ ಮಾಡಿತು. ಇದರಿಂದ ಬ್ಯಾಂ್‌ನಲ್ಲಿ ಸಾಲ ಮಾಡಿದವರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದರು. ಆದ್ರೆ ಈ ಇಎಂಐ ವಿನಾಯಿತಿ ಸಾಲಗಾರರಿಗೆ ಅಷ್ಟೇನು ಪ್ರಯೋಜನ ಆಗುತ್ತಿಲ್ಲ.

 

ರಾಜ್ಯಸ್ವಾಮ್ಯದ ವಿವಿಧ ಬ್ಯಾಂಕ್‌ಗಳು ಮೂರು ತಿಂಗಳ ಮುಂದೂಡಿಕೆ ಅವಧಿಗೆ ಬಡ್ಡಿ ಪಾವತಿಸಬೇಕು ಎಂದು ತಿಳಿಸಿವೆ. ಒಂದೆಡೆ ಲಾಕ್‌ಡೌನ್‌ನಿಂದ ವ್ಯಾಪಾರ, ಆದಾಯ ಕ್ಷೀಣಿಸಿದ್ದರೆ, ಮತ್ತೂಂದೆಡೆ ಮೂರು ತಿಂಗಳು ಹೆಚ್ಚುವರಿಯಾಗಿ ಬಡ್ಡಿ ಹೊರೆ ಕೂಡ ಬೀಳುತ್ತಿದೆ.

3 ತಿಂಗಳು EMI ಮುಂದೂಡಿಕೆಯಾಗಿದ್ದರೇನು ಬಡ್ಡಿ ಪಾವತಿಸಲೇಬೇಕು

ಗ್ರಾಹಕರು ಮೂರು ತಿಂಗಳ ಮುಂದೂಡಿಕೆಯ ಇಎಂಐ ಆಯ್ದುಕೊಂಡರೆ ಪಾವತಿಸಬೇಕಾದ ಒಟ್ಟು ಅಸಲಿನ ಮೇಲಿನ ಬಡ್ಡಿ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಹೀಗೆ ಹೆಚ್ಚಳಗೊಂಡ ಬಡ್ಡಿಯನ್ನು ಬ್ಯಾಂಕುಗಳು ಸಾಲಗಾರರಿಂದ ಹೆಚ್ಚುವರಿ ಇಎಂಐ ಮೂಲಕ ವಸೂಲಿ ಮಾಡುತ್ತವೆ.

ಉದಾಹರಣೆಗೆ ಗ್ರಾಹಕನೊಬ್ಬ ಆರು ಲಕ್ಷಕ್ಕೆ ವಾಹನ ಖರೀದಿಸಿದ್ದರೆ 54 ತಿಂಗಳ ಕಂತು ಬಾಕಿ ಇದ್ದ ಸಂದರ್ಭದಲ್ಲಿ ಅಂದಾಜು 19 ಸಾವಿರ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ. ಬ್ಯಾಂಕುಗಳು ಪ್ರಕಟಿಸುವ ನಿಯಮಗಳ ಪ್ರಕಾರ, ಮೂರು ತಿಂಗಳವರೆಗಿನ ಅವಧಿಯಲ್ಲಿ ಬಡ್ಡಿ ವಿಧಿಸಲಿವೆ.

ಸಾಲಪಾವತಿ ಮುಂದೂಡಿಕೆಗೆ ಇಚ್ಚಿಸುವವರು ಕಂತಿನ ಹಣ ಮುರಿದುಕೊಳ್ಳದಂತೆ ಬ್ಯಾಂಕ್ ಶಾಖೆಗೆ ಇ-ಮೇಲ್ ಮೂಲಕ ಮಾಹಿತಿ ನೀಡಬೇಕು ಎಂದು ಎಸ್‌ಬಿಐ ಹೇಳಿದೆ.

English summary

Bank Loan EMI Moratorium Interest Will Add

3 Month bank loan EMI moratorium no big gains for borrowers, banks to charge interest later
Story first published: Thursday, April 2, 2020, 9:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X