For Quick Alerts
ALLOW NOTIFICATIONS  
For Daily Alerts

ಪ್ರಸಾರವಾಗುವ ಮೊದಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಆಡಿಯೋ ಲೀಕ್

|

ಸಾರ್ವಜನಿಕವಾಗಿ ಪ್ರಸಾರವಾಗುವ ಮೊದಲೇ ಬ್ಯಾಂಕ್ ಆಫ್‌ ಇಂಗ್ಲೆಂಡ್ ಪತ್ರಿಕಾಗೋಷ್ಠಿಯ ಆಡಿಯೋ ಕೆಲವು ಹೂಡಿಕೆದಾರರಿಗೆ ಸೋರಿಕೆ ಆಗಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಹೇಳಿದೆ

ಕೇಂದ್ರ ಬ್ಯಾಂಕಿನ ಒಂದು ಹೇಳಿಕೆಯು ಕೆಲವೇ ಸೆಕೆಂಡುಗಳಲ್ಲಿ ಹೂಡಿಕೆದಾರರಲ್ಲಿ ಲಾಭವನ್ನು ತಂದುಕೊಡಬಲ್ಲದು. ಅಂತದ್ರಲ್ಲಿ ಪ್ರಸಾರಕ್ಕೂ ಮುನ್ನ ಆಡಿಯೋ ಹೇಗೆ ಲೀಕ್ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಬ್ಯಾಂಕ್ ಆಫ್‌ ಇಂಗ್ಲೆಂಡ್ ಹೇಳಿದೆ.

ಪ್ರಸಾರವಾಗುವ ಮೊದಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಆಡಿಯೋ ಲೀಕ್

ಬ್ರಿಟನ್‌ನ ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವ ಪ್ರಾಧಿಕಾರವು ಈ ಆಡಿಯೋ ಸೋರಿಕೆ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಆದರೆ ಸೋರಿಕೆಯಾದ ಮಾಹಿತಿಯ ಆಧಾರದ ಮೇಲೆ ಯಾವುದಾದರೂ ವಹಿವಾಟು ನಡೆದಿದಿಯೇ ಎಂಬ ಪ್ರಶ್ನೆಗೆ ವಕ್ತಾರರು ಉತ್ತರಿಸಲು ನಿರಾಕರಿಸಿದ್ದಾರೆ.

ಒಂದು ವೇಳೆ ವಿಡಿಯೋ ಫೀಡ್ ವಿಫಲವಾದರೆ ಬ್ಯಾಕಪ್‌ನಂತೆ ಕಾರ್ಯನಿರ್ವಹಿಸಲು ಆಡಿಯೋ ಇಟ್ಟುಕೊಳ್ಳಲಾಗಿತ್ತು. ಆದರೆ ಮೂರನೇ ವ್ಯಕ್ತಿಯಿಂದ ಈ ವರ್ಷದ ಆರಂಭದಿಂದಲೂ ಬಾಹ್ಯ ಗ್ರಾಹಕರಿಗೆ ಸೇವೆಗಳನ್ನು ಒದಗಿಸಿ ಸೋರಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಟೈಮ್ಸ್ ಆಫ್ ಲಂಡನ್ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.

English summary

Bank Of England Audio Was Leaked Before Broadcast

The bank of england said thursday that an audio feed from its news conferenes had been released to some investors before broadcast to public
Story first published: Saturday, December 21, 2019, 11:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X